ಇಬ್ಬರು ಯುವಕರ ಅನುಮಾನಾಸ್ಪದ ಸಾವು: ತನಿಖೆ ಚುರುಕುಗೋಳಿಸಿದ ಪೋಲಿಸ್
Taluknewsmedia.comತುಮಕೂರು: ಇಬ್ಬರು ಯುವಕರನ್ನು ಅಮಾನುಷವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ತುಮಕೂರಿನ ಪೆದ್ದನಹಳ್ಳಿಯಲ್ಲಿ ನಡೆದಿದೆ.ಕೃಷಿ ಪಂಪ್ ಸೆಟ್ ನ ಕೇಬಲ್ ಕಳವು ಮಾಡಲು ಹೋಗಿದ್ದ ಸಂದರ್ಭದಲ್ಲಿ ಜನರ ಕೈಗೆ ಸಿಕ್ಕಿ ಬಿದ್ದು ಹತ್ಯೆ ಮಾಡಲಾಗಿದೆ ಎನ್ನುವ ಗುಸುಗುಸು ಮಾತುಗಳು ಕೂಡ ಕೇಳಿ ಬಂದಿದೆ. ಘಟನೆಯ ಸಂದರ್ಭದಲ್ಲಿ ಮೃತದ ಜೊತೆಗಿದ್ದ ಇನ್ನಿಬ್ಬರು ಓಡಿಹೋಗಿದ್ದರು ಎಂದೂ ಹೇಳಲಾಗುತ್ತಿದೆ. ಪೆದ್ದನಹಳ್ಳಿಯ ಗಿರೀಶ್ ಸಹೋದರ ಪಿ.ಎಂ.ಶ್ರೀಧರ್ ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದ್ದು, ನಂದೀಶ್ ಹಾಗೂ ಇತರರು ಸೇರಿಕೊಂಡು ಈ ಇಬ್ಬರನ್ನೂ ಕೊಂದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಯುವಕರ ಹತ್ಯೆ ತುಮಕೂರು ತಾಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಘಟನೆಯ ನಂತರ ಗ್ರಾಮದಲ್ಲಿ ಇದೀಗ ಮೌನ ಆವರಿಸಿದ್ದು, ಸ್ಥಳೀಯ ಜನರು ಭೀತಿಗೊಂಡಿದ್ದಾರೆ. ಪೆದ್ದನಹಳ್ಳಿಯ ಪರಿಶಿಷ್ಟ ಜಾತಿಗೆ ಸೇರಿದ ಪಿ.ಎಂ.ಗಿರೀಶ್ (32), ಮಂಚಲದೊರೆ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ಗಿರೀಶ್ (33) ಕೊಲೆಯಾದವರು. ಇದೇ ಗ್ರಾಮದ…
ಮುಂದೆ ಓದಿ..