ಸುರತ್ಕಲ್: ಅಪ್ರಾಪ್ತ ಬಾಲಕನಿಗೆ ಕಿರುಕುಳ – ಅಂಗಡಿ ಮಾಲೀಕನಿಗೆ ಪೊಲೀಸರು ಪೋಕೊ ಕೇಸು ದಾಖಲಿಸಿ ಬಂಧನ
ಸುರತ್ಕಲ್: ಅಪ್ರಾಪ್ತ ಬಾಲಕನಿಗೆ ಕಿರುಕುಳ – ಅಂಗಡಿ ಮಾಲೀಕನಿಗೆ ಪೊಲೀಸರು ಪೋಕೊ ಕೇಸು ದಾಖಲಿಸಿ ಬಂಧನ
ಸುರತ್ಕಲ್: ಅಪ್ರಾಪ್ತ ಬಾಲಕನ ಮೇಲೆ ಅಶ್ಲೀಲ ಕೃತ್ಯ ಎಸಗಿದ ಆರೋಪದ ಮೇಲೆ ಸುರತ್ಕಲ್ ಪೊಲೀಸರು ಚೊಕ್ಕಬೆಟ್ಟು ಜುಮ್ಮಾ ಮಸೀದಿ ಬಳಿ ಕಾರ್ಯನಿರ್ವಹಿಸುತ್ತಿರುವ ಹನಿ ಫ್ಯಾಷನ್ ಶಾಪ್ ಮತ್ತು ಜನರಲ್ ಸ್ಟೋರ್ ಮಾಲಕ ಮೊಹಮ್ಮದ್ ಇಸ್ಮಾಯಿಲ್ ಅವರನ್ನು ವಶಕ್ಕೆ ಪಡೆದು ಪೋಕೊ ನಿಯಮಾವಳಿಗಳಡಿ ಪ್ರಕರಣ ದಾಖಲಿಸಿದ್ದಾರೆ.
ಮಾಹಿತಿಯ ಪ್ರಕಾರ, 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕ ಶನಿವಾರ ಚಾಕೊಲೇಟ್ ಖರೀದಿಸಲು ಅಂಗಡಿಗೆ ಬಂದಿದ್ದ ವೇಳೆ, ಆರೋಪಿ ಅಂಗಡಿಯ ಹಿಂಭಾಗದ ಕೋಣೆಗೆ ಕರೆದುಕೊಂಡು ಹೋಗಿ, ಕೈ–ಕಾಲಿಗೆ ಹಗ್ಗ ಬಿಗಿದು, ಲೈಂಗಿಕ ಕಿರುಕುಳ ನೀಡಿದರೆಂದು ಹೇಳಲಾಗಿದೆ.
ಘಟನೆಯಿಂದ ಬೆಚಗಿದ ಬಾಲಕ ಮನೆಯವರಿಗೆ ವಿಷಯ ತಿಳಿಸಿದ್ದರಿಂದ, ಬಾಲಕನ ತಾಯಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ದೂರು ಸ್ವೀಕರಿಸಿದ ಪೊಲೀಸರು ಸೆಕ್ಷನ್ 351(2), 127(2), 2.2.2 ಅಡಿಯಲ್ಲಿ ಪ್ರಕರಣ ದಾಖಲಿಸಿ, ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಅವರ ನೇತೃತ್ವದಲ್ಲಿ ತಂಡ ದಾಳಿಮಾಡಿ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಿದೆ.
ರವಿವಾರ (ಡಿ.7) ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಆತ ಸ್ಥಳೀಯ ರಾಜಕೀಯ ಪಕ್ಷವೊಂದರ ಕಾರ್ಯಕರ್ತನಾಗಿರುವ ಮಾಹಿತಿ ಲಭ್ಯವಾಗಿದೆ.

