ಮಂಡ್ಯ: ಮದುವೆ ಕನಸು ಕೈ ತಪ್ಪಿದ ಯುವಕರಿಂದ ಮಠ ನಿರ್ಮಾಣಕ್ಕೆ ಗ್ರಾ.ಪಂ.ಗೆ ಮನವಿ!
Taluknewsmedia.comಮಂಡ್ಯ: ಮದುವೆ ಕನಸು ಕೈ ತಪ್ಪಿದ ಯುವಕರಿಂದ ಮಠ ನಿರ್ಮಾಣಕ್ಕೆ ಗ್ರಾ.ಪಂ.ಗೆ ಮನವಿ! ಮದುವೆಯಾಗಲು ವಧು ದೊರಕದೆ ನಿರಾಸೆಯಲ್ಲಿರುವ ಅವಿವಾಹಿತ ಯುವಕರ ಗುಂಪೊಂದು, ಸಂಸಾರ ಬಿಟ್ಟು ಧಾರ್ಮಿಕ ಜೀವನ ನಡೆಸಲು ನಿರ್ಧರಿಸಿ ಮಠ ನಿರ್ಮಿಸಿ ಕೊಡಬೇಕೆಂದು ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮದ್ದೂರು ತಾಲ್ಲೂಕಿನ ಮರಳಿಗ ಗ್ರಾಮ ಪಂಚಾಯತ್‌ನಲ್ಲಿ ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ಸುಮಾರು 30 ಯುವಕರು ಏಕಕಾಲದಲ್ಲಿ ಹಾಜರಾಗಿ, ಪಂಚಾಯತ್ ವತಿಯಿಂದ ಮಠ ನಿರ್ಮಿಸಿ ಕೊಡಬೇಕೆಂದು ಲಿಖಿತ ಮನವಿ ಸಲ್ಲಿಸಿ ಎಲ್ಲರ ಗಮನ ಸೆಳೆದರು. ಗ್ರಾಮಸಭೆಯಲ್ಲಿ ಸಾರ್ವಜನಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಮಾತು ಪಡೆದ ಯುವಕರು, ಮದುವೆಗೆ ಸಾಕಷ್ಟು ಪ್ರಯತ್ನ ಮಾಡಿದರೂ ಹೆಣ್ಣು ಸಿಗುತ್ತಿಲ್ಲ. ಬದುಕಿನ ಮೇಲೆ ಬೇಸರ ಮೂಡಿದೆ. ಹೀಗಾಗಿ ಮಠವೊಂದರಲ್ಲಿ ದೇವರ ಭಜನೆ ಮಾಡುತ್ತಾ ಜೀವನ ಸಾಗಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ತಮ್ಮ ಮನವಿಯಲ್ಲಿ…
ಮುಂದೆ ಓದಿ..
