ಸುದ್ದಿ 

ತನ್ನದೇ ಶಾಲೆಯ ಬಸ್ ಡಿಕ್ಕಿಯಿಂದ 9 ವರ್ಷದ ಬಾಲಕಿ ದುರ್ಮರಣ: ಚಾಲಕನ ಅಜಾಗರೂಕತೆಯೇ ಕಾರಣ?

Taluknewsmedia.com

ತನ್ನದೇ ಶಾಲೆಯ ಬಸ್ ಡಿಕ್ಕಿಯಿಂದ 9 ವರ್ಷದ ಬಾಲಕಿ ದುರ್ಮರಣ: ಚಾಲಕನ ಅಜಾಗರೂಕತೆಯೇ ಕಾರಣ?

ಬೀದರ್ ಜಿಲ್ಲೆಯ ಜನವಾಡ ಗ್ರಾಮದಲ್ಲಿ ನಡೆದ ದುರಂತದಲ್ಲಿ ಶಾಲಾ ಬಸ್‌ನಿಂದಲೇ 9 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ಓಡಿಸುತ್ತಿದ್ದ ವಾಹನದ ಬಗ್ಗೆ ನಿರ್ಲಕ್ಷ್ಯ ತೋರಿದ ಚಾಲಕನ ವರ್ತನೆಯೇ ಈ ಅನಾಹುತಕ್ಕೆ ಕಾರಣ.

ಮಂಗಳವಾರ ಸಂಜೆ ಶಾಲೆಯಿಂದ ಮನೆ ಕಡೆ ಇಳಿದಿದ್ದ ಮೂರನೇ ತರಗತಿಯ ವಿದ್ಯಾರ್ಥಿನಿ ಋತ್ವಿಕಾ ಸುನಿಲಕುಮಾರ (9) ಬಸ್‌ನ ಮುಂಭಾಗದಲ್ಲಿ ನಿಂತಿದ್ದಾಗ, ಚಾಲಕ ಗಮನಿಸದೇ ವಾಹನವನ್ನು ಚಲಾಯಿಸಿದ ಪರಿಣಾಮ ಬಾಲಕಿ ಬಸ್‌ಗೆ ತಗುಲಿ ಗಂಭೀರವಾಗಿ ಗಾಯಗೊಂಡಳು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದರೂ, ಮಾರ್ಗ ಮಧ್ಯೆಯೇ ಋತ್ವಿಕಾ ಪ್ರಾಣಬಿಟ್ಟಿದ್ದಾಳೆ.

ಮೃತ ಬಾಲಕಿಯ ತಾಯಿ ರೇಣುಕಾ ಅವರು ಜನವಾಡ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದು, ಕುಟುಂಬ ಕ್ವಾಟರ್ಸ್ ಪ್ರದೇಶದಲ್ಲಿ ವಾಸಿಸುತ್ತಿದೆ. ಘಟನೆ ನಡೆದ ತಕ್ಷಣ ಡಿವೈಎಸ್‌ಪಿ ಸನದಿ, ಸಿಪಿಐ ಜಿ.ಎಸ್. ಬಿರಾದಾರ್ ಹಾಗೂ ಪಿಎಸ್‌ಐ ಬಾಶಾಮಿಯ್ಯಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆನವಟ್ಟಿಯ ಸಾಯಿ ಬಾಬಾ ಲೇಔಟ್‌ನಿಂದ ವಿಠ್ಠಲ ದೇವಾಲಯದ ಮಾರ್ಗದವರೆಗೆ 10ಕ್ಕೂ ಹೆಚ್ಚು ಶಾಲೆಗಳು, ಹಾಸ್ಟೆಲ್‌ಗಳು, ಮತ್ತು ಆಸ್ಪತ್ರೆಗಳು ಇರುವುದರಿಂದ ಪ್ರತಿನಿತ್ಯ ಸಾವಿರಾರು ಮಕ್ಕಳು, ವಿದ್ಯಾರ್ಥಿಗಳು, ಸಾಮಾನ್ಯ ನಾಗರಿಕರು ಈ ರಸ್ತೆಯನ್ನು ಬಳಸುತ್ತಾರೆ. ಸದ್ಯ ಇರುವ ರಸ್ತೆ ತಡೆಗಳು ಅತಿ ಚಿಕ್ಕದಾಗಿದ್ದು, ಅವನ್ನು ವಾಹನ ಸವಾರರು ನಿರ್ಲಕ್ಷ್ಯವಾಗಿ ದಾಟುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ.

ಸ್ಥಳೀಯರು ಈ ಮಾರ್ಗದಲ್ಲಿ ಸೂಕ್ತ ಎತ್ತರದ ಹಂಫ್ಸ್‌ಗಳನ್ನು ನಿರ್ಮಿಸಿ, ರಸ್ತೆ ಸುರಕ್ಷತೆ ಬಲಪಡಿಸಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

Related posts