ಸುದ್ದಿ 

ವ್ಯಾಪಾರದ ಹೆಸರಿನಲ್ಲಿ ನಂಬಿಕೆ ದ್ರೋಹ – ಲಕ್ಷಾಂತರ ರೂಪಾಯಿ ವಂಚನೆಯ ಪ್ರಕರಣ ದಾಖಲೆ

Taluknewsmedia.com

ಬೆಂಗಳೂರು, ಜೂನ್ 19:
ನಗರದ ಚಿಕ್ಕಪೇಟೆ ಪ್ರದೇಶದಲ್ಲಿರುವ ‘ಅರಾಧನಾ ಟೆಕ್ಸ್ಟೈಲ್ಸ್’ ಅಂಗಡಿಯಲ್ಲಿ ವ್ಯಾಪಾರದ ಹೆಸರಿನಲ್ಲಿ ನಂಬಿಕೆ ದ್ರೋಹ ಹಾಗೂ ಲಕ್ಷಾಂತರ ರೂಪಾಯಿಗಳ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಅಂಗಡಿಯ ಮಾಲಕರು ನಾಲ್ವರು ವ್ಯಕ್ತಿಗಳ ವಿರುದ್ಧ ಪಿಸಿಆರ್ (PCR) ಸಲ್ಲಿಸಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವನ್ನು ಮನವಿ ಮಾಡಿದ್ದಾರೆ.

ಮಾಹಿತಿ ಪ್ರಕಾರ, ಅಂಗಡಿಯ ನಿರ್ವಹಣೆಗೆ ನೇಮಿಸಲಾಗಿದ್ದ ಹರೇಂದ್ರನಾಥ ಎಂಬಾತನು ಮಾಲಕರ ವಿಶ್ವಾಸಕ್ಕೆ ಧಕ್ಕೆ ತಂದಿರುವುದಾಗಿ ಆರೋಪಿಸಲಾಗಿದೆ. ಅಂಗಡಿಯ ಕೀಲಿಯನ್ನು ಪಡೆದ ನಂತರ, ಮಾಲಿಕರ ಅನುಮತಿಯಿಲ್ಲದೆ ರೂ. 18 ಲಕ್ಷ ಮೌಲ್ಯದ ಸೀರೆಗಳನ್ನು ಯಾವುದೇ ಬಿಲ್ ರವಾನೆ ಇಲ್ಲದೇ ಮಾರಾಟ ಮಾಡಿದ್ದಾರೆ.

ಅಷ್ಟರಲ್ಲಿ, ಕೌಟುಂಬಿಕ ಸಮಸ್ಯೆ ಹೆಸರಿನಲ್ಲಿ ಫೋನ್ ಪೇ ಮೂಲಕ ರೂ. 6,86,300/- ಹಣ ಪಡೆದಿದ್ದು, ಒಂದು ತಿಂಗಳಲ್ಲಿ ಹಿಂದಿರುಗಿಸುತ್ತೇನೆ ಎಂಬ ಭರವಸೆ ನೀಡಿದರೂ ಈವರೆಗೆ ಹಣ ವಾಪಸ್ಸಾಗಿಲ್ಲ.

ಇದೇ ರೀತಿಯಲ್ಲಿ, ಇನ್ನಿಬ್ಬರು ಸೀರೆ ಏಜೆಂಟ್‌ಗಳಾದ ರಮೇಶ್ ಕಪೂರಿಜಿ ಪುರೋಹಿತ್ ಹಾಗೂ ಜೀತು ಸಿಂಗ್ – ಇವರ ಸಹೋದರ ಮಹೇಂದ್ರ ಸಿಂಗ್ ಸಹ – ವ್ಯಾಪಾರಕ್ಕೆ ಬೇಕಾದ ಹೂಡಿಕೆಯಂತೆ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದಾರೆ. ಆದರೆ ನಾಲ್ಕು ತಿಂಗಳಲ್ಲಿ ಹಣ ಹಿಂತಿರುಗಿಸುತ್ತೇನೆ ಎಂಬ ವಾಗ್ದಾನದಿಂದ ಈಗಾಗಲೇ 7–8 ತಿಂಗಳು ಕಳೆಯುತ್ತಿದ್ದರೂ ಹಣ ಹಿಂತಿರುಗಿಸಿಲ್ಲ.

ಆಸಾಮಿಗಳು ಪರಸ್ಪರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ನಿರಂತರ ಬೆದರಿಕೆ ಹಾಕುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ IPC ಕಾಯ್ದೆಯಡಿ ಕೆಳಗಿನ ಸೆಕ್ಷನ್‌ಗಳು ಅನ್ವಯಿಸಲ್ಪಟ್ಟಿವೆ:

IPC 406 – ನಂಬಿಕೆ ದ್ರೋಹ

IPC 420 – ವಂಚನೆ

IPC 506 – ಬೆದರಿಕೆ ಹಾಕುವುದು

IPC 120B – ಅಪರಾಧದ ಸಾಂಗತ್ಯ

ಪಿಸಿಆರ್ ಸಂಖ್ಯೆ 8110/2025 ಅಡಿಯಲ್ಲಿ ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿ ಹೆಚ್.ಸಿ 8351 ಮಂಜುಳಾ ಅವರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಮಾಲಕರು ತಮ್ಮ ಕಷ್ಟಪಟ್ಟು ಗಳಿಸಿದ ಹಣ ಹಿಂತಿರುಗಿಸುವಂತೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

Related posts