ಸುದ್ದಿ 

ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ: ಕೊಪ್ಪಳದಲ್ಲಿ ಜಾಗೃತಿ ಮಾಸಾಚರಣೆ ಸಮಾರೋಪ

Taluknewsmedia.com

Taluknewsmedia.comವಾಯು ಮಾಲಿನ್ಯ ನಿಯಂತ್ರಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ: ಕೊಪ್ಪಳದಲ್ಲಿ ಜಾಗೃತಿ ಮಾಸಾಚರಣೆ ಸಮಾರೋಪ ಕೊಪ್ಪಳ: ವಾಹನಗಳಿಂದ ಉಂಟಾಗುತ್ತಿರುವ ವಾಯು ಮಾಲಿನ್ಯವು ಮಾನವ ಆರೋಗ್ಯದ ಮೇಲೆ ತನ್ನ ಗಂಭೀರ ಪರಿಣಾಮಗಳನ್ನು ಬೀರುತ್ತಿರುವ ಹಿನ್ನೆಲೆಯಲ್ಲಿ, ಕೊಪ್ಪಳ ಪ್ರಾದೇಶಿಕ ಸಾರಿಗೆ ಇಲಾಖೆ ಆಯೋಜಿಸಿದ್ದ ‘ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ’ಯ ಸಮಾರೋಪ ಸಮಾರಂಭದಲ್ಲಿ ಸಾರ್ವಜನಿಕರಿಗೆ ಮಾಲಿನ್ಯ ನಿಯಂತ್ರಣದ ಅಗತ್ಯತೆಯನ್ನು ತಿಳಿಸುವ ಪ್ರಮುಖ ಸಂದೇಶ ನೀಡಲಾಯಿತು. ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ಹಿರೇಮಠ ಅವರು, “ವಾಹನಗಳಿಂದ ಹೊರಸೂಸುವ ಹೊಗೆಯಿಂದ ಗಾಳಿಯು ವಿಷಕಾರಿಯಾಗುತ್ತದೆ. ಹೆಚ್ಚು ಹೊಗೆ ಬಿಡುವ ವಾಹನಗಳನ್ನು ಬಳಸಿ ಪರಿಸರಕ್ಕೆ ಹಾನಿ ಮಾಡಬಾರದು; ಪರಿಸರ ಸ್ನೇಹಿ ವಾಹನಗಳಿಗೆ ಆದ್ಯತೆ ನೀಡುವುದು ಕಾಲದ ಅವಶ್ಯಕತೆ,” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಧಿಕಾರಿಗಳು ವಾಹನಗಳಿಂದ ಹೊರಬರುವ ಕಾರ್ಬನ್ ಮಾನಾಕ್ಸೈಡ್, ನೈಟ್ರೋಜನ್ ಆಕ್ಸೈಡ್ಸ್, ಸಲ್ಫರ್ ಡೈಆಕ್ಸೈಡ್ ಸೇರಿದಂತೆ ಹಲವು ವಿಷಕಾರಿ…

ಮುಂದೆ ಓದಿ..
ಸುದ್ದಿ 

ಕೊಪ್ಪಳದಲ್ಲಿ ಉರ್ದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ:

Taluknewsmedia.com

Taluknewsmedia.comಕೊಪ್ಪಳದಲ್ಲಿ ಉರ್ದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ: ಶಿಕ್ಷಣ–ಸಂಸ್ಕಾರ ಸಮನ್ವಯದಿಂದಲೇ ಸಮುದಾಯ ಅಭಿವೃದ್ಧಿ: ನಗರಸಭಾ ಅಧ್ಯಕ್ಷ ಅಮ್ಜದ್ ಪಟೇಲ್ ಅಭಿಪ್ರಾಯ ಕೊಪ್ಪಳ: ಮಿಲ್ಲತ್ ಪಬ್ಲಿಕ್ ಶಾಲೆ ಆವರಣದಲ್ಲಿ ಉರ್ದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಭಾನುವಾರ ನಡೆದಿದ್ದು, ಶಿಕ್ಷಣ–ಸಂಸ್ಕಾರ ಹಾಗೂ ಅಲ್ಪಸಂಖ್ಯಾತರ ಶಿಕ್ಷಣಾಭಿವೃದ್ಧಿಯ ಕುರಿತ ಮಹತ್ವದ ಸಂದೇಶಗಳು ಈ ಸಂದರ್ಭದಲ್ಲಿ ಪ್ರತಿಧ್ವನಿಸಿವೆ. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಕೊಪ್ಪಳ ನಗರಸಭಾ ಅಧ್ಯಕ್ಷ ಅಮ್ಜದ್ ಪಟೇಲ್, ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ದೇಶಾಭಿಮಾನ ಬೆಳೆಸುವ ಅಗತ್ಯವನ್ನು ಒತ್ತಿ ಹೇಳಿದರು.“ಇಂದಿನ ಮಕ್ಕಳೇ ಮುಂದಿನ ಭಾರತದ ಪ್ರಜೆಗಳು. ಅವರಿಗೆ ಉತ್ತಮ ಶಿಕ್ಷಣ ಮತ್ತು ಒಳ್ಳೆಯ ಸಂಸ್ಕಾರ ಜೊತೆಯಾದಾಗ ಮಾತ್ರ ಉಜ್ವಲ ಭವಿಷ್ಯ ನಿರ್ಮಾಣ ಸಾಧ್ಯ” ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಅಮ್ಜದ್ ಪಟೇಲ್ ಅವರ ಪ್ರಮುಖ ಪ್ರತಿಪಾದನೆಗಳು ಶಿಕ್ಷಣ–ಸಂಸ್ಕಾರದ…

ಮುಂದೆ ಓದಿ..
ಸುದ್ದಿ 

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ವಡ್ಡರಹಳ್ಳಿ ಹತ್ತಿರ ಶಾಲಾ ಬಸ್‌ಗೆ ಯುವಕರಿಬ್ಬರು ತೊಂದರೆ ಸೃಷ್ಟಿಸಿದ ಘಟನೆ ಬೆಳಕಿಗೆ ಬಂದಿದೆ.

Taluknewsmedia.com

Taluknewsmedia.comಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ವಡ್ಡರಹಳ್ಳಿ ಹತ್ತಿರ ಶಾಲಾ ಬಸ್‌ಗೆ ಯುವಕರಿಬ್ಬರು ತೊಂದರೆ ಸೃಷ್ಟಿಸಿದ ಘಟನೆ ಬೆಳಕಿಗೆ ಬಂದಿದೆ. ಬೈಕ್ ಅನ್ನು ಬಸ್‌ ಎದುರು ಅಡ್ಡ ನಿಲ್ಲಿಸಿ ಚಾಲಕನೊಂದಿಗೆ ಗದ್ದಲಕ್ಕೆ ಮುಂದಾದ ಯುವಕರ ವರ್ತನೆ ಗ್ರಾಮಸ್ಥರನ್ನೂ ಬೆಚ್ಚಿಬೀಳಿಸಿದೆ. ಮದ್ಯದ ನಶೆಯಲ್ಲಿ ಬೈಕ್‌ನಲ್ಲಿ ಬಂದ ಕಿರಣ್ ಹಾಗೂ ಗಿರೀಶ್ ಎಂಬವರು, ಖಾಸಗಿ ಶಾಲೆಯೊಂದರ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಕೆಳಗಿಳಿಸುವಂತೆ ಒತ್ತಾಯಿಸಿದ್ದಾರೆ ಎಂದು ಬಸ್ ಚಾಲಕನು ಆರೋಪಿಸಿದ್ದಾನೆ. ವಿದ್ಯಾರ್ಥಿನಿಯನ್ನು ಇಳಿಸದಿದ್ದಕ್ಕಾಗಿ ಚಾಲಕನ ಮೆಚ್ಚೆ ಧಿಕ್ಕಾರದ ಶೈಲಿಯಲ್ಲಿ ಆವಾಜ್ ಹಾಕಿದ ಘಟನೆ ಬಸ್ಸಿನಲ್ಲಿದ್ದವರನ್ನೂ ಆತಂಕಕ್ಕೆ ತಳ್ಳಿತು. ಘಟನೆಯ ಸಂಪೂರ್ಣ ವಿಡಿಯೋ ಸಹಿತವಾಗಿ ಶಾಲಾ ಬಸ್ ಚಾಲಕ ಪೊಲೀಸರು ಬಳಿ ದೂರು ಸಲ್ಲಿಸಿದ್ದಾನೆ. ದೂರು ಸ್ವೀಕರಿಸಿದ ಕಿಕ್ಕೇರಿ ಪೊಲೀಸ್ ಅಧಿಕಾರಿಗಳು ತಕ್ಷಣವೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ಆರಂಭಿಸಿದ್ದಾರೆ. ಈ ಘಟನೆ ಶಾಲೆಯ ಮಕ್ಕಳ ಸುರಕ್ಷತೆಯ ಬಗ್ಗೆ…

ಮುಂದೆ ಓದಿ..
ಸುದ್ದಿ 

ಚಿಕ್ಕಬಳ್ಳಾಪುರ – ಪ್ರೇಮಿಗಳಿಗೆ ದಾಂಪತ್ಯ ಬದುಕಿನ ಹೊಸ ಆರಂಭ: ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲೇ ವಿವಾಹ

Taluknewsmedia.com

Taluknewsmedia.comಚಿಕ್ಕಬಳ್ಳಾಪುರ – ಪ್ರೇಮಿಗಳಿಗೆ ದಾಂಪತ್ಯ ಬದುಕಿನ ಹೊಸ ಆರಂಭ: ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲೇ ವಿವಾಹ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಪೋಷಕರ ವಿರೋಧದ ನಡುವೆಯೇ ಪ್ರೇಮಿಗಳು ಹೊಸ ಜೀವನಕ್ಕೆ ಕಾಲಿರಿಸಿರುವ ಘಟನೆ ಗಮನ ಸೆಳೆದಿದೆ. ನಗರದ ಸಿದ್ದಾರ್ಥ ಬಡವಾಣೆಯ ನಿವಾಸಿಗಳಾದ ಗಣೇಶ್ (25) ಮತ್ತು ಅಕ್ಷಯಾ (19) ಇಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಯಲ್ಲಿ ಇದ್ದರೂ, ಕುಟುಂಬದ ಒಪ್ಪಿಗೆ ಇಲ್ಲದೆ ಹಲವಾರು ಅಡೆತಡೆಗಳನ್ನು ಎದುರಿಸಬೇಕಾಯಿತು. ಅಕ್ಷಯಾಳ ಪೋಷಕರು ಅವಳಿಗೆ ಸೋದರಮಾವನೊಂದಿಗೆ ನಿಶ್ಚಿತಾರ್ಥ ಮಾಡಿಸಿದ್ದರೂ, ಆ ಸಂಬಂಧ ಅವಳಿಗೆ ಇಷ್ಟವಿರಲಿಲ್ಲ. ಪ್ರೀತಿಸಿದವನೊಂದಿಗೆ ಬದುಕು ಕಟ್ಟಿಕೊಳ್ಳಬೇಕೆಂಬ ನಿರ್ಧಾರದಿಂದ ಯುವತಿ ಮನೆ ಬಿಟ್ಟು ಗಣೇಶ್ ಜೊತೆ ಓಡಿಹೋಗಿ ಧರ್ಮಸ್ಥಳದಲ್ಲಿ ಮದುವೆಯಾದಳು. ಮಗಳು ಕಾಣೆಯಾಗಿರುವ ಕುರಿತು ಆತಂಕಗೊಂಡ ಕುಟುಂಬದವರು ಶಿಡ್ಲಘಟ್ಟ ನಗರ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಿಸಿದರು. ತನಿಖೆಯ ಅಂಗವಾಗಿ ಪೊಲೀಸರು ಜೋಡಿಯನ್ನು ಠಾಣೆಗೆ ಕರೆತರಿದರು. ಸಮಚಾರ ವಿಚಾರಿಸಿದ ನಂತರ, ಇಬ್ಬರೂ ಪರಸ್ಪರರೊಂದಿಗೇ ಬದುಕಲು…

ಮುಂದೆ ಓದಿ..
ಸುದ್ದಿ 

ಹಾವೇರಿ – ರಾಣೇಬೆನ್ನೂರು ಕೊಲೆ ಪ್ರಕರಣ: ಮಹಿಳೆಯ ಅಮಾನವೀಯ ಹತ್ಯೆ, ಪ್ರೇಮ–ಅವಿಶ್ವಾಸ ದುರಂತ ಅಂತ್ಯ

Taluknewsmedia.com

Taluknewsmedia.comಹಾವೇರಿ – ರಾಣೇಬೆನ್ನೂರು ಕೊಲೆ ಪ್ರಕರಣ: ಮಹಿಳೆಯ ಅಮಾನವೀಯ ಹತ್ಯೆ, ಪ್ರೇಮ–ಅವಿಶ್ವಾಸ ದುರಂತ ಅಂತ್ಯ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಪಟ್ಟಣದಲ್ಲಿ ತೀವ್ರ ದುಃಖ ಹಾಗೂ ಅಸಹನೆಯನ್ನು ಮೂಡಿಸಿದ ಭೀಕರ ಘಟನೆ ವರದಿಯಾಗಿದೆ. ಮನೆಗೆಲಸ ಮಾಡಿಕೊಂಡು ಬದುಕನ್ನು ಸಾಗಿಸುತ್ತಿದ್ದ ಮಹಿಳೆಯನ್ನು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಸ್ಥಳೀಯರಲ್ಲಿ ಆಘಾತದ ಅಲೆ ಎಬ್ಬಿಸಿದೆ. ▪️ಚಾಕುವಿನಿಂದ ಕತ್ತು ಕತ್ತರಿಸಿ ಕೊಲೆಪೋಲಿಸ್ ತನಿಖೆ ಪ್ರಾಥಮಿಕ ಮಾಹಿತಿಯ ಪ್ರಕಾರ, ದೀರ್ಘಕಾಲದಿಂದ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನೇ ಈ ಕೃತ್ಯಕ್ಕೆ ಕಾರಣನೆಂದು ಶಂಕಿಸಲಾಗಿದೆ. ಮೊಬೈಲ್‌ ಫೋನ್ ಬ್ಯುಸಿ ತೋರಿಸುತ್ತಿದೆ ಎಂಬ ಕಾರಣಕ್ಕೆ ಶೀಲ ಶಂಕೆ ಹುಟ್ಟಿಕೊಂಡು ವಾಗ್ವಾದ ಶುರುವಾಗಿದ್ದು, ಅದೇ ಕ್ಷಣದಲ್ಲಿ ಕೈಯಲ್ಲಿ ಹಿಡಿದಿದ್ದ ಚಾಕುವಿನಿಂದ ಮಹಿಳೆಯ ಕತ್ತು ಕತ್ತರಿಸಿ ಆರೋಪಿಯು ದಾರುಣ ಕೃತ್ಯ ಎಸಗಿದ್ದಾನೆ. ▪️ಮೃತ ಮಹಿಳೆಯ ವಿವರಲಲೀತಾ ಬ್ಯಾಡಗಿ (42) ಎಂಬವರು ಹತ್ಯೆಗೆ ಒಳಗಾದ ದುರ್ದೈವಿ. ಮೂಲತಃ ಬ್ಯಾಡಗಿ ತಾಲೂಕಿನ…

ಮುಂದೆ ಓದಿ..
ಸುದ್ದಿ 

ಬೆಂಗಳೂರು ದುರಂತ: ಗೀಸರ್‌ ಗ್ಯಾಸ್‌ ಸೋರಿಕೆಯಿಂದ ತಾಯಿ–ಮಗುವಿನ ದುರ್ಮರಣ

Taluknewsmedia.com

Taluknewsmedia.comಬೆಂಗಳೂರು ದುರಂತ: ಗೀಸರ್‌ ಗ್ಯಾಸ್‌ ಸೋರಿಕೆಯಿಂದ ತಾಯಿ–ಮಗುವಿನ ದುರ್ಮರಣ ಬೆಂಗಳೂರಿನ ಗೋವಿಂದರಾಜನಗರದ ಪಂಚಶೀಲ ನಗರದಲ್ಲಿ ಗೀಸರ್‌ನಿಂದ ಗ್ಯಾಸ್‌ ಸೋರಿಕೆಯಾಗಿದ್ದು, ತಾಯಿ ಹಾಗೂ ಮಗುವಿನ ಪ್ರಾಣ ಕಳೆದುಕೊಂಡ ದಾರುಣ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ ಗ್ಯಾಸ್‌ ಲೀಕ್‌ ಮಧ್ಯಾಹ್ನ ಸ್ನಾನಕ್ಕೆ ಹೋದಾಗ ಚಾಂದಿನಿ (26) ಮತ್ತು ನಾಲ್ಕು ವರ್ಷದ ಯುವಿ ಅಸ್ವಸ್ಥರಾಗಿದ್ದರು. ಅಸ್ವಸ್ಥರಾಗಿ ಬಿದ್ದಿದ್ದ ತಾಯಿ–ಮಗುವನ್ನು ಸ್ಥಳೀಯರು ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆಗೆ ಸ್ಪಂದಿಸದೇ ಇಬ್ಬರೂ ಅಂತಿಮ ನಿಶ್ವಾಸ ಬಿಟ್ಟಿದ್ದಾರೆ. ಕಾರ್ಪೆಂಟರ್‌ ಉದ್ಯೋಗ ಮಾಡುತ್ತಿದ್ದ ಚಾಂದಿನಿಯ ಪತಿ ಕಿರಣ್ ಕೆಲಸದಲ್ಲಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆ ಕುರಿತು ತಿಳಿಯುತ್ತಿದ್ದಂತೆಯೇ ಗೋವಿಂದರಾಜನಗರ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ತಾಯಿ ಮತ್ತು ಮಗುವಿನ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರುವುದಾಗಿ ತಿಳಿದು ಬಂದಿದೆ.

ಮುಂದೆ ಓದಿ..
ಸುದ್ದಿ 

ರಾಮನಗರ: ಪ್ರೇಮ ವಂಚನೆ ಆರೋಪದ ನಡುವೆ ವಿದ್ಯಾರ್ಥಿನಿ ಆತ್ಮಹತ್ಯೆ – ಡೆತ್ ನೋಟ್‌ನಲ್ಲಿ ಬಚ್ಚಿಟ್ಟ ನೋವು

Taluknewsmedia.com

Taluknewsmedia.comರಾಮನಗರ: ಪ್ರೇಮ ವಂಚನೆ ಆರೋಪದ ನಡುವೆ ವಿದ್ಯಾರ್ಥಿನಿ ಆತ್ಮಹತ್ಯೆ – ಡೆತ್ ನೋಟ್‌ನಲ್ಲಿ ಬಚ್ಚಿಟ್ಟ ನೋವು ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ 22 ವರ್ಷದ ವರ್ಷಿಣಿ ಎಂಬ ಯುವತಿ ಬುಧವಾರ ಆತ್ಮಹತ್ಯೆಗೆ ಶರಣಾದ ಘಟನೆ ಸ್ಥಳೀಯರಲ್ಲಿ ವಿಷಾದ ಮೂಡಿಸಿದೆ. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಎಂ.ಎಸ್‌.ಸಿ ಅಭ್ಯಾಸ ಮಾಡುತ್ತಿದ್ದ ವರ್ಷಿಣಿ, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಫ್ಯಾನ್‌ಗೆ ನೇಣು ಬಿಗಿದು ಜೀವ ಬಿಟ್ಟಿದ್ದಾಳೆ. ಡೆತ್ ನೋಟ್‌ನಲ್ಲಿ ಬರೆದಿರುವ ಭಾವನಾತ್ಮಕ ಮಾತುಗಳು ಘಟನಾ ಸ್ಥಳದಿಂದ ಪೊಲೀಸರು ಡೆತ್ ನೋಟ್‌ ಅನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ “ನನ್ನ ಸಾವಿಗೆ ಅಭಿಯೇ ಕಾರಣ… ಅಮ್ಮ, ದಯವಿಟ್ಟು ನನ್ನನ್ನು ಕ್ಷಮಿಸು” ಎಂದು ವರ್ಷಿಣಿ ಬರೆದಿರುವುದು ಕುಟುಂಬವನ್ನು ಶೋಕಸಾಗರಕ್ಕೆ ತಳ್ಳಿದೆ. ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಅಭಿ ಎಂಬಾತನೊಂದಿಗೆ ಆಕೆಯ ಸಂಬಂಧ ಇದ್ದು, ಆತ ಮಾಡಿದ ವಂಚನೆಯೇ ಆಕೆಯನ್ನು ಆತ್ಮಹತ್ಯೆಗೆ ನೂಕಿದೆ ಎಂಬುದು ಕುಟುಂಬದ ಆರೋಪ. ಪರಿಶೀಲನೆ…

ಮುಂದೆ ಓದಿ..
ಸುದ್ದಿ 

25 ಲಕ್ಷ ರೂ. ಸುಲಿಗೆಗಾಗಿ ನೇಪಾಳಿ ಮೂಲದ ಮನೋಜ್ ತಾಪ್ ಅವರನ್ನು ಕಿಡ್ನಾಪ್ ಮಾಡಿದ ಪ್ರಕರಣದಲ್ಲಿ ಬಂಡೆಪಾಳ್ಯ ಪೊಲೀಸ್‌ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಮತ್ತು ಸಿಬ್ಬಂದಿ

Taluknewsmedia.com

Taluknewsmedia.com25 ಲಕ್ಷ ರೂ. ಸುಲಿಗೆಗಾಗಿ ನೇಪಾಳಿ ಮೂಲದ ಮನೋಜ್ ತಾಪ್ ಅವರನ್ನು ಕಿಡ್ನಾಪ್ ಮಾಡಿದ ಪ್ರಕರಣದಲ್ಲಿ ಬಂಡೆಪಾಳ್ಯ ಪೊಲೀಸ್‌ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಮತ್ತು ಸಿಬ್ಬಂದಿ ವಿರುದ್ಧ ತೀವ್ರ ಆರೋಪ ಕೇಳಿಬಂದಿದ್ದು, ಈ ಘಟನೆ ಈಗ ದೊಡ್ಡ ಸಂಚಲನ ಸೃಷ್ಟಿಸಿದೆ. ಯಲಹಂಕದ ವಿನಾಯಕನಗರದಲ್ಲಿ ಡಿಸೆಂಬರ್‌ 5ರಂದು ರಾತ್ರಿ ಸುಮಾರು 10.30ರ ವೇಳೆಗೆ ನಾಲ್ವರು ಅಪರಿಚಿತರು ಮನೋಜ್ ಅವರ ಮನೆಗೆ ನುಗ್ಗಿ, ರೌಡಿಗಳ ಸಹಾಯದಿಂದ ಅವರಿಗೆ ಅಪಹರಣೆ ಮಾಡಿದ್ದಾರೆ ಎನ್ನಲಾಗಿದೆ. ಸುಲಿಗೆ ಉದ್ದೇಶದಿಂದ 25 ಲಕ್ಷ ರೂ. ಒತ್ತಾಯಿಸಲಾಗಿತ್ತು ಎಂದು ಮನೋಜ್ ಅವರ ಪತ್ನಿ ಲಕ್ಷ್ಮಿ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಪೊಲೀಸರೇ ಕಿಡ್ನಾಪ್‌ನಲ್ಲಿ ಭಾಗವೆ? ಅಪಹರಣದಲ್ಲಿ ಬಂಡೆಪಾಳ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ಗಳು ಶಿವಶಂಕರ್ ಮತ್ತು ಕಾಂತರಾಜ್ ಸೇರಿದಂತೆ ಮತ್ತೊಬ್ಬ ಪೊಲೀಸರು ನೇರವಾಗಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ರೆಡ್‌ ಸ್ಯಾಂಟ್ರೋ ಕಾರಿನಲ್ಲಿ ಮನೋಜ್ ಅವರನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದ ದೃಶ್ಯಗಳು…

ಮುಂದೆ ಓದಿ..
ಸುದ್ದಿ 

ಮೈಸೂರು: ರಿಯಲ್ ಎಸ್ಟೇಟ್ ಉದ್ಯಮಿಯ ಅಪಹರಣ – ಸಿನಿಮೀಯ ಶೈಲಿಯಲ್ಲಿ ಪ್ರಕರಣ ಭೇದಿಸಿದ ಪೊಲೀಸರು

Taluknewsmedia.com

Taluknewsmedia.comಮೈಸೂರು: ರಿಯಲ್ ಎಸ್ಟೇಟ್ ಉದ್ಯಮಿಯ ಅಪಹರಣ – ಸಿನಿಮೀಯ ಶೈಲಿಯಲ್ಲಿ ಪ್ರಕರಣ ಭೇದಿಸಿದ ಪೊಲೀಸರು ಮೈಸೂರಿನಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿರುವ ಉದ್ಯಮಿ ಲೋಕೇಶ್ ಅವರನ್ನು ಹಣಕ್ಕಾಗಿ ಅಪಹರಿಸಿದ ಘಟನೆ ತಡರಾತ್ರಿ ದೊಡ್ಡ ಸಂಚಲನ ಮೂಡಿಸಿತು. ಆದರೆ ಕೇವಲ ನಾಲ್ಕು ಗಂಟೆಗಳೊಳಗೇ ಪ್ರಕರಣವನ್ನು ಭೇದಿಸಿ ಅಪಹರಣಕಾರರನ್ನು ಬಂಧಿಸುವಲ್ಲಿ ಮೈಸೂರು ಪೊಲೀಸರು ಚಾಕಚಕ್ಯತೆ ಮೆರೆದಿದ್ದಾರೆ. ವಿಜಯನಗರ ಮೂರನೇ ಹಂತದಲ್ಲಿ ವಾಸಿಸುವ ಲೋಕೇಶ್, ಶುಕ್ರವಾರ ರಾತ್ರಿ ಹೆರಿಟೇಜ್ ಕ್ಲಬ್‌ನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಟಾಟಾ ಸುಮೋ ಕಾರಿನಲ್ಲಿ ಬಂದ ಐವರು ಯುವಕರು ಅವರನ್ನು ಬಲವಂತವಾಗಿ ಕರೆದುಕೊಂಡು ಹೋದರು. ಅಪಹರಣದ ಬಳಿಕ ಲೋಕೇಶ್ ಅವರ ಮೊಬೈಲ್ ಫೋನ್ ಬಳಸಿ ಅವರ ಪತ್ನಿಗೆ ಕರೆ ಮಾಡಿದ ಆರೋಪಿಗಳು, ₹30 ಲಕ್ಷ ಹಣ ಬೇಡಿಕೆ ಇಟ್ಟಿದ್ದರು. ಗಾಬರಿಗೊಂಡ ಲೋಕೇಶ್ ಅವರ ಪತ್ನಿ ತಕ್ಷಣವೇ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಮಾಹಿತಿ ಲಭ್ಯವಾದ ಕೂಡಲೇ ಪೊಲೀಸ್…

ಮುಂದೆ ಓದಿ..
ಸುದ್ದಿ 

ಚಿಕ್ಕಮಗಳೂರು: ದತ್ತ‌ ಜಯಂತಿ ಬ್ಯಾನರ್‌ ವಿವಾದ ರಣರಂಗಕ್ಕೆ – ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ..

Taluknewsmedia.com

Taluknewsmedia.comಚಿಕ್ಕಮಗಳೂರು: ದತ್ತ‌ ಜಯಂತಿ ಬ್ಯಾನರ್‌ ವಿವಾದ ರಣರಂಗಕ್ಕೆ – ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ.. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣವು ಬುಧವಾರ ರಾತ್ರಿ ತೀವ್ರ ಉದ್ವಿಗ್ನತೆಯಿಂದ ಕಂಗಾಲಾಗಿತ್ತು. ದತ್ತ ಜಯಂತಿ ಬ್ಯಾನರ್‌ ತೆರವು ವಿಚಾರದಲ್ಲಿ ಆರಂಭವಾದ ಸಣ್ಣ ಗಲಾಟೆ, ಕೊನೆಗೆ ಘೋರ ಅಪರಾಧಕ್ಕೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ (40) ಅವರ ನಿಷ್ಠುರ ಹತ್ಯೆಗೆ ಕಾರಣವಾಗಿದೆ. ಬಜರಂಗ ದಳ ಕಾರ್ಯಕರ್ತರೇ ಆರೋಪಿಗಳು? ಪ್ರಾಥಮಿಕ ತನಿಖೆ ಪ್ರಕಾರ ಸಂಜಯ್ ಮತ್ತು ಮಿಥುನ್ ಎಂಬ ಯುವಕರು ಮಚ್ಚಿನಿಂದ ಗಣೇಶ್ ಮೇಲೆ ದಾಳಿ ನಡೆಸಿ ಸ್ಥಳದಲ್ಲೇ ಕೊಲೆ ಮಾಡಿದ್ದಾರೆ. ಇಬ್ಬರೂ ಬಜರಂಗ ದಳಕ್ಕೆ ಸಂಬಂಧಿಸಿದವರಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಈಗಾಗಲೇ ಐವರನ್ನು ವಶಕ್ಕೆ ಪಡೆದಿದ್ದಾರೆ. ಗಲಾಟೆಯಲ್ಲಿ ಆರೋಪಿ ಸಂಜಯ್ ತೀವ್ರವಾಗಿ ಗಾಯಗೊಂಡಿದ್ದು, ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಣೇಶ್ ಅವರು ಸಖರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದು, ಸ್ಥಳೀಯ ರಾಜಕೀಯದಲ್ಲಿ…

ಮುಂದೆ ಓದಿ..