ಬೆಂಗಳೂರು–ತುಮಕೂರು ರಾಷ್ಟ್ರೀಯ ಹೆದ್ದಾರಿ–48ರ ಮಾದನಾಯಕನಹಳ್ಳಿ ಬಳಿ ಸಂಭವಿಸಿದ ದುರಂತ ರಸ್ತೆ
ಬೆಂಗಳೂರು–ತುಮಕೂರು ರಾಷ್ಟ್ರೀಯ ಹೆದ್ದಾರಿ–48ರ ಮಾದನಾಯಕನಹಳ್ಳಿ ಬಳಿ ಸಂಭವಿಸಿದ ದುರಂತ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಯುವಕ ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದಾನೆ. ಮೃತನನ್ನು ಸುಮಂತ್ ಜೆ. ಗೌಡ (21) ಎಂದು ಗುರುತಿಸಲಾಗಿದೆ
.ಸ್ನೇಹಿತನನ್ನು ಭೇಟಿಯಾಗಲು ಬೈಕ್‌ನಲ್ಲಿ ತೆರಳುತ್ತಿದ್ದ ಸುಮಂತ್, ಮುಂದೆ ಸಾಗುತ್ತಿದ್ದ ಖಾಸಗಿ ಬಸ್ اچಾನಕ್ ನಿಲ್ಲಿಸಿದ ಪರಿಣಾಮ ನಿಯಂತ್ರಣ ತಪ್ಪಿ ಬಸ್ ಹಿಂಭಾಗಕ್ಕೆ ಬಲವಾಗಿ ಡಿಕ್ಕಿ ಹೊಡೆದಿದ್ದಾನೆ ಎಂಬುದು ಪ್ರಾಥಮಿಕ ಮಾಹಿತಿ.
ಭಾರೀ ಹೊಡೆತಕ್ಕೆ ಗುರಿಯಾದ ಸುಮಂತ್ ತಕ್ಷಣವೇ ಪ್ರಾಣಪಕ್ಷಿ ಬಿಟ್ಟಿದ್ದಾನೆ.ಘಟನೆಯ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

