ಮಹಿಳೆಯ ಇಚ್ಛೆಯ ವಿರುದ್ಧ ಲೈಂಗಿಕ ಕ್ರಿಯೆ ಹಾಗೂ ಜೀವ ಬೆದರಿಕೆ: ಚರಣ್ಜಿತ್ಸಿಂಗ್ ಎಂಬುವವನ ವಿರುದ್ಧ ಪಿಸಿಆರ್ ದಾಖಲೆ.
ಬೆಂಗಳೂರು, ಜೂನ್ 19, 2025 –ಬೆಂಗಳೂರು ನಗರದ ಚಿಕ್ಕಪೇಟೆಯಲ್ಲಿ ಅತಿಥಿ ಲಾಡ್ಜ್ ಒಂದರಲ್ಲಿ ಮಹಿಳೆಯೊಬ್ಬರ ಇಚ್ಛೆಯ ವಿರುದ್ಧ ಲೈಂಗಿಕ ಕ್ರಿಯೆ ನಡೆಸಿ, ತಡೆಯೊಡ್ಡಿದಾಗ ಪ್ರಾಣ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿಯ ವಿರುದ್ಧ ನ್ಯಾಯಾಲಯದ ಆದೇಶದಂತೆ ಪಿಸಿಆರ್ ದಾಖಲಿಸಿ, ಪ್ರಕರಣ ದಾಖಲಾತಿ ನಡೆಯುತ್ತಿದೆ.ಶ್ರೀಮತಿ ಜೋಶಿನ್ ಫರ್ನಾಂಡಿಸ್ ಅವರು ನೀಡಿದ ದೂರಿನ ಪ್ರಕಾರ, 2019ರ ಏಪ್ರಿಲ್ 24ರಂದು ಗೋವಾದಲ್ಲಿ ಚರಣ್ಜಿತ್ಸಿಂಗ್ ಕಲಾ ಎಂಬಾತನ ಪರಿಚಯವಾಗಿತ್ತು. ಅವರು ಕಾಲಕಾಲಕ್ಕೆ ಭೇಟಿಯಾಗುತ್ತಿದ್ದು, 2025ರ ಫೆಬ್ರವರಿ 18ರಂದು ಇಬ್ಬರೂ ಚಿಕ್ಕಪೇಟೆಯ ಶಿವಗಂಗಾ ಲಾಡ್ಜ್ನಲ್ಲಿ 15 ದಿನಗಳ ಕಾಲ ರೂಂ ಬುಕ್ ಮಾಡಿಕೊಂಡಿದ್ದರು.ಶ್ರೀಮತಿ ಜೋಶಿನ್ ರವರ ಆರೋಪದ ಪ್ರಕಾರ, ಚರಣ್ಜಿತ್ಸಿಂಗ್ ಪ್ರತಿದಿನ ಮದ್ಯಪಾನ ಮಾಡಿ, ಆಕೆಯ ಸ್ಪಷ್ಟ ವಿರೋಧವನ್ನು ಲೆಕ್ಕಿಸದೇ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಈ ಕೃತ್ಯಕ್ಕೆ ತಡೆ ನೀಡಲು ಯತ್ನಿಸಿದಾಗ, ಕತ್ತನ್ನು ಹಿಸುಕಿ ಕೊಲ್ಲಲು ಪ್ರಯತ್ನ ಪಟ್ಟು, ಆಕೆಗೆ ಪ್ರಾಣ ಬೆದರಿಕೆ ನೀಡಿದ್ದಾನೆ.ಈ ಕುರಿತು ಶ್ರೀಮತಿ ಜೋಶಿನ್ ನ್ಯಾಯಾಲಯವನ್ನು ಸಂಪರ್ಕಿಸಿದ್ದು, ನ್ಯಾಯಾಲಯದ ನಿರ್ದೇಶನದ ಮೇರೆಗೆ ಪಿಸಿಆರ್ ಸಂಖ್ಯೆ 8044/2025 ಅನ್ನು ಚಿಕ್ಕಪೇಟೆಯ ಪೊಲೀಸ್ ಠಾಣೆಗೆ ಜೂನ್ 18 ರಂದು ದೂರು ಸಲ್ಲಿಸಲಾಗಿದೆ. ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿಯಾದ ಹೆಚ್ಸಿ-8351 ಅವರು ಈ ದಸ್ತಾವೇಜನ್ನು ಪೊಲೀಸ್ ಠಾಣೆಗೆ ಹಾಜರುಪಡಿಸಿದ್ದಾರೆ.ಚಿಕ್ಕಪೇಟೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಆರೋಪ ಸಾಬೀತಾದಲ್ಲಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

