ಕ್ರೈಂ ಸುದ್ದಿ ಸುದ್ದಿ 

ಕೀರ್ತಿ ಪ್ರೈಡ್ ಅಪಾರ್ಟ್‌ಮೆಂಟ್ ಪಾರ್ಕಿಂಗ್‌ನಿಂದ ದ್ವಿಚಕ್ರ ವಾಹನ ಕಳ್ಳತನ..

Taluknewsmedia.com

ಅರುಲ್ ಆನಂದನ್ ಅವರು ದೊಡ್ಡತೋಗೂರಿನ ಕೀರ್ತಿ ಪ್ರೈಡ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದು, ತಮ್ಮ ಸುಜಿಕಿ ಆಕ್ಸಿಸ್ 125 (ವಾಹನ ಸಂಖ್ಯೆ KA-05-LQ-4304) ದ್ವಿಚಕ್ರ ವಾಹನವನ್ನು ದಿನಾಂಕ 27-05-2025ರಂದು ರಾತ್ರಿ 8:45 ಗಂಟೆಗೆ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರು.

ಪರಿವಾರಿಕ ಕಾರಣಗಳಿಂದ ಊರಿಗೆ ತೆರಳಿದ್ದ ದೂರುದಾರರು 10-06-2025ರಂದು ಬೆಳಿಗ್ಗೆ 7:30 ಗಂಟೆಗೆ ವಾಪಸ್ ಬಂದು ನೋಡಿದಾಗ ತಮ್ಮ ವಾಹನವು ಪಾರ್ಕಿಂಗ್‌ನಲ್ಲಿ ಕಾಣಿಸದ ಹಿನ್ನೆಲೆ ತಡವಾಗಿ ಬಂದು ಪೊಲೀಸ್ ಠಾಣೆಗೆ ದೂರು ನೀಡಿದರು. ಯಾರೋ ಅಪರಿಚಿತ ವ್ಯಕ್ತಿಗಳು ಪಾರ್ಕಿಂಗ್‌ನಲ್ಲಿದ್ದ ವಾಹನವನ್ನು ಕಳ್ಳತನ ಮಾಡಿದ ಅನುಮಾನ ವ್ಯಕ್ತವಾಗಿದೆ.

ಕಳ್ಳತನವಾದ ವಾಹನದ ವಿವರಗಳು:

ವಾಹನದ ಬ್ರ್ಯಾಂಡ್: ಸುಜಿಕಿ ಆಕ್ಸಿಸ್ 125

ಮಾದರಿ: 2022

ಬಣ್ಣ: ಮ್ಯಾಟ್ ಬ್ಲ್ಯಾಕ್

ವಾಹನ ಸಂಖ್ಯೆ: KA-05-LQ-4304

ಎಂಜಿನ್ ನಂ.: AF217288981

ಚೆಸ್ಸಿಸ್ ನಂ.: MB8DP12DLN8E31421

ಅಂದಾಜು ಮೌಲ್ಯ: ₹75,000

ಪೊಲೀಸರು IPC ಸೆಕ್ಷನ್ 379 ಅಡಿಯಲ್ಲಿ ಕೇಸು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಸದ್ಯ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತಿದೆ.

ಯಾರಾದರೂ ಈ ಕುರಿತು ಮಾಹಿತಿ ಹೊಂದಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಕ್ಷಣ ತಿಳಿಸಲು ಸಾರ್ವಜನಿಕರಲ್ಲಿ ಮನವಿ .

Related posts