ಸುದ್ದಿ 

ಯಶವಂತಪುರದಲ್ಲಿ ಗಾಂಜಾ ಮಾರಾಟ: ಬಿಹಾರ ಮೂಲದ ವ್ಯಕ್ತಿಯಿಂದ 1.9 ಕೆ.ಜಿ ಗಾಂಜಾ ವಶ.

Taluknewsmedia.com

ಯಶವಂತಪುರದ 90 ರೂಟ್ ರಸ್ತೆಯ ಚರ್ಚ್ ಮುಂಭಾಗದ ಖಾಲಿ ಜಾಗದಲ್ಲಿ ಗಾಂಜಾ ಮಾರಾಟದ ಚಟುವಟಿಕೆಯಲ್ಲಿ ತೊಡಗಿದ್ದ ಬಿಹಾರ ಮೂಲದ ವ್ಯಕ್ತಿಯೊಬ್ಬನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ದಾಳಿ ವೇಳೆ ಆರೋಪಿತನಿಂದ 1.9 ಕೆ.ಜಿ ಗಾಂಜಾ ಹಾಗೂ ನಗದು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಯಶವಂತಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ (ಪಿಎಸ್‌ಐ) ಶ್ರೀ ಈರಣ್ಣ ನಣಜಗಿ ಅವರು ನೀಡಿದ ಮಾಹಿತಿ ಪ್ರಕಾರ, ದಿನಾಂಕ 19/06/2025 ರಂದು ಸಂಜೆ ಸುಮಾರು 6 ಗಂಟೆ ಸುಮಾರಿಗೆ ಗಸ್ತಿನಲ್ಲಿದ್ದ ವೇಳೆ ಖಚಿತ ಬಾತ್ಮೀದಾರರಿಂದ ಮಾದಕ ವಸ್ತು ಮಾರಾಟದ ಮಾಹಿತಿ ಲಭಿಸಿದ ತಕ್ಷಣ, ಸಹಾಯಕ ಪೊಲೀಸ್ ಆಯುಕ್ತರ ಅನುಮತಿಯನ್ನು ಪಡೆದು ತಂಡದೊಂದಿಗೆ ದಾಳಿ ನಡೆಸಲಾಯಿತು.

ಪಂಚರರು ಮತ್ತು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ದಾಳಿ ನಡೆಸಿದಾಗ, ಅಲ್ಲಿ ಇದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅವನು ದಿನೇಶ್ ಮಂಡಲ್ (30 ವರ್ಷ) ಎಂಬ ಬಿಹಾರ ಮೂಲದವನಾಗಿ ಗುರುತಿಸಲಾಗಿದೆ. ಬಂಧಿತನು ಮಾರುತಹಳ್ಳಿಯ ರೆಂಬೊ ಪಿಜಿ’ಯಲ್ಲಿ ತಾತ್ಕಾಲಿಕವಾಗಿ ವಾಸವಿದ್ದನು.

ದಾಳಿ ವೇಳೆ ವಶಪಡಿಸಿಕೊಳ್ಳಲಾದ ವಸ್ತುಗಳು ಹೀಗಿವೆ:

350 ಗ್ರಾಂ ಗಾಂಜಾ (ಪ್ಲಾಸ್ಟಿಕ್ ಪ್ಯಾಕೆಟ್‌ಗಳಲ್ಲಿ)

1,560 ಗ್ರಾಂ ತೂಕದ ಬಿಡಿ ಗಾಂಜಾ

₹500 ನಗದು

3 ಖಾಲಿ ಪ್ಲಾಸ್ಟಿಕ್ ಕವರ್‌ಗಳು

ಬಿಳಿ-ನೀಲಿ ಬಣ್ಣದ ಗಾರ್ಮೆಂಟ್ ಬ್ಯಾಗ್

ತೂಕದ ಯಂತ್ರ

ಒಟ್ಟು 1,910 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ದಾಳಿ ಮತ್ತು ವಶಪಡಿಕೆ ಕಾರ್ಯವನ್ನು ದಕ್ಷಿಣ ವಿಭಾಗದ ACP ಅವರ ಸಮ್ಮುಖದಲ್ಲಿ ಜರುಗಿಸಲಾಯಿತು.

ಆರೋಪಿತನನ್ನು ಸಂಜೆ 7:25ರ ವೇಳೆಗೆ ಠಾಣೆಗೆ ಕರೆತಂದು, ಎನ್‌ಡಿಪಿಎಸ್ (NDPS) ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಜಾರಿಯಲ್ಲಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಪೊಲೀಸರು ನಗರದಲ್ಲಿ ಮಾದಕ ವಸ್ತುಗಳ ಅಕ್ರಮ ವ್ಯಾಪಾರವನ್ನು ತಡೆಗಟ್ಟಲು ತೀವ್ರ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರಲ್ಲಿ ಸಹಕಾರ ಮತ್ತು ಎಚ್ಚರಿಕೆಯನ್ನು ಕೋರಿದ್ದಾರೆ.

Related posts