ಸುದ್ದಿ 

ಇನ್ವೆಸ್ಟ್‌ಮೆಂಟ್ ಆ್ಯಪ್ ‌ಗಳ ಮಾಯಾಜಾಲ: ಯುವಕನಿಗೆ ಲಕ್ಷಾಂತರ ರೂಗಳ ಆನ್‌ಲೈನ್ ವಂಚನೆ.

Taluknewsmedia.com

ಇನ್ವೆಸ್ಟ್‌ಮೆಂಟ್ ಮೂಲಕ ಹೆಚ್ಚು ಲಾಭದಾಸ್ಯ ಎಂದು ನಂಬಿಸಿ ಸೈಬರ್ ಮೋಸಗಾರು ಬೆಂಗಳೂರಿನ ಯುವಕನೊಬ್ಬನಿಗೆ ರೂ.12.30 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಪದ್ಮಿನಿ ಮಂಜುನಾಥ್ ರವರು ತಮ್ಮ ವಾಟ್ಸಪ್ ನಂಬರ್‌ಗೆ ‘ಮೈ ಶೇರ್‌ಖಾನ್’ ಆಪ್‌ನಿಂದ ಬಂದ ಇನ್ವೆಸ್ಟ್‌ಮೆಂಟ್ ಟ್ರೇಡಿಂಗ್ ಕುರಿತು ಸಂದೇಶವೊಂದನ್ನು ಪಡೆದುಕೊಂಡು, ಅದರಲ್ಲಿ ನೀಡಿದ್ದ ಮಾಹಿತಿಯನ್ನು ನಂಬಿ ‘CWA’ ಎಂಬ ಮತ್ತೊಂದು ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು. ಆ ಆಪ್‌ನಲ್ಲಿ ಹೆಚ್ಚು ಲಾಭ ದೊರೆಯುತ್ತೆಂದು ಹೇಳಿ ಇಡೀ ಹೂಡಿಕೆಯನ್ನು ಹಂತ ಹಂತವಾಗಿ ಹಲವು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಸೂಚನೆ ನೀಡಲಾಗಿತ್ತು.

ಹೀಗಾಗಿ ಪದ್ಮಿನಿ ಮಂಜುನಾಥ್ ರವರು ತಮ್ಮ ಎಸ್.ಬಿ.ಐ ಖಾತೆ (ಅಕೌಂಟ್ ನಂ: 20083236735) ಸೇರಿದಂತೆ ಇತರ ಖಾತೆಗಳಿಂದ ಈ ಕೆಳಗಿನಂತೆ ಹಣ ವರ್ಗಾಯಿಸಿದ್ದಾರೆ:

ಬ್ಯಾಂಕ್ ಆಫ್ ಮಹಾರಾಷ್ಟ್ರ: ₹35,000

IDFC ಬ್ಯಾಂಕ್: ₹96,000

ಆಕ್ಸಿಸ್ ಬ್ಯಾಂಕ್ ₹1,13,000

ಆಕ್ಸಿಸ್ ಬ್ಯಾಂಕ್ ₹5,00,000

ಆಕ್ಸಿಸ್ ಬ್ಯಾಂಕ್ ₹4,86,640

ಒಟ್ಟು ವಂಚಿತ ಮೊತ್ತ: ₹12,30,640

ಪಿಂಚಣಿ ಹಂತದಲ್ಲಿ ಪದ್ಮಿನಿ ಮಂಜುನಾಥ್ ₹2 ಲಕ್ಷ ಹಣವನ್ನು ವಿತ್‌ಡ್ರಾ ಮಾಡಲು ಯತ್ನಿಸಿದಾಗ ಅದನ್ನು ನಿರಾಕರಿಸಲಾಗಿತ್ತು. ಈ ಹಿನ್ನಲೆಯಲ್ಲಿ ಅವರು ಸೈಬರ್ ಕ್ರೈಂ ರಿಪೋರ್ಟರ್ ಮೂಲಕ ಆನ್‌ಲೈನ್ ವಂಚನೆ ಬಗ್ಗೆ ದೂರು ಸಲ್ಲಿಸಿದ್ದು, ದೂರು ಸಂಖ್ಯೆ: 31606250073382 ಆಗಿದೆ.

ಪದ್ಮಿನಿ ಮಂಜುನಾಥ್ ಈ ಹೂಡಿಕೆ ಮೂಲಕ ತಮ್ಮ ಅಪಾರ ಹಣ ಕಳೆದುಕೊಂಡಿದ್ದು, ಸಂಬಂಧಿತ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Related posts