ಸುದ್ದಿ 

ಕೆ ಆರ್ ಪಕ್ಷ ಇದುವರೆಗೂ ಮಾಡಿದ್ದು ಕಾನೂನಿನ ವಿರುದ್ಧ ಹೋರಾಟವೇ.

Taluknewsmedia.com

ಆತ್ಮೀಯ ಬಂಧುಗಳೇ,

KRS ಪಕ್ಷದ ವಿರುದ್ಧ ಮತ್ತು ಪಕ್ಷದ ಕಾರ್ಯಕರ್ತ/ಪದಾಧಿಕಾರಿಗಳ ವಿರುದ್ಧ ಅಪಪ್ರಚಾರ ಮಾಡುವ, ಸುಳ್ಳುಕೇಸುಗಳನ್ನು ದಾಖಲಿಸುವ, ಸಾರ್ವಜನಿಕವಾಗಿ ಅವಮಾನಿಸುವ ಷಡ್ಯಂತ್ರಗಳು ಕೆಲವರಿಂದ ರೂಪುಗೊಳ್ಳುತ್ತಿವೆ ಎನ್ನುವ ಖಚಿತ ಮಾಹಿತಿಗಳು ನಮಗೆ ದೊರಕಿವೆ. ನೀತಿಭ್ರಷ್ಟ, ಅಯೊಗ್ಯ, ಜನವಿರೋಧಿ ರಾಜಕಾರಣಿಗಳು ಮತ್ತು ಭ್ರಷ್ಟ, ಅದಕ್ಷ, ಲಂಚಕೋರ ಅಧಿಕಾರಿಗಳು ಈ ಪಿತೂರಿಗಳ ಭಾಗವಾಗಿರುವುದು ಹಾಗೂ ವಿವಿಧ ಸರ್ಕಾರಿ ಅಂಗಗಳನ್ನು ಮತ್ತು ಮಾಧ್ಯಮಗಳನ್ನು ಅದಕ್ಕಾಗಿ ಬಳಸಲಿರುವುದು ನಮಗೆ ಗೋಚರವಾಗುತ್ತಿದೆ.

ಒಬ್ಬ ಪ್ರಾಮಾಣಿಕ ಪತಕರ್ತ ಸುಮಾರು 25 ವರ್ಷಗಳಿಂದ.. ಪತ್ರಿಕಾ ಧರ್ಮದ ಪಾಲನೆಯಲ್ಲಿದ್ದು ಅವರು ದಾಖಲಿಸಿದ ಪತ್ರಿಕಾ ಪ್ರಕಟಣೆಗೆ. ಕೆ ಆರ್ ಪಕ್ಷದ ಅಧ್ಯಕ್ಷರು ಹಾಗೂ ಆ ಪಕ್ಷದ ಸದಸ್ಯರುಗಳು. ಸಾರ್ವಜನಿಕವಾಗಿ ಗೆಲಿ ಮಾಡಿದ್ದು.. ಅಪರಾಧ.. ಒಬ್ಬ ಸದಸ್ಯ ಹೇಳುತ್ತಾನೆ.. ಒಮ್ಮೆ ಓದಿ ನಕ್ಕು ಬಿಡಿ ಅಂತ

ಈ ಹಿನ್ನೆಲೆಯಲ್ಲಿ KRS ಪಕ್ಷದ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಸೈನಿಕರಿಗೆ ಸರ್ಕಾರಿ ಅಧಿಕಾರಿಗಳೊಂದಿಗೆ ಹೇಗೆ ವರ್ತಿಸಬೇಕು ಎನ್ನುವ ವಿಚಾರವಾಗಿ ನಾನು ಇಲ್ಲಿ ಕೆಲವೊಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುತ್ತಿದ್ದೇನೆ. ಪಕ್ಷದ ಎಲ್ಲಾ ಶಿಸ್ತಿನ ಸಿಪಾಯಿಗಳು ದಯವಿಟ್ಟು ಇದನ್ನು ಗಮನಿಸಬೇಕು ಮತ್ತು ಪಾಲಿಸಬೇಕು ಎಂದು ಈ ಮೂಲಕ ಕೋರುತ್ತೇನೆ.

? ನಿಮ್ಮ ನೆಂಟರು ಅಥವ ಆಪ್ತರಲ್ಲದ ಯಾವುದೇ ಸರ್ಕಾರಿ ಅಧಿಕಾರಿಯನ್ನು ಸಾರ್ವಜನಿಕ ಕೆಲಸಕ್ಕಾಗಿ ಖಾಸಗಿಯಾಗಿ ಭೇಟಿ ಆಗಬೇಡಿ. ಭೇಟಿ ಆಗಬೇಕಿದ್ದಲ್ಲಿ ಅವರ ಕಚೇರಿಯಲ್ಲಿ ಮಾತ್ರವೇ ಭೇಟಿ ಆಗಿ.

? ಸರ್ಕಾರಿ ಅಧಿಕಾರಿಗಳಿಗೆ ಫೋನ್ ಮಾಡಿ ಯಾವುದೇ ಸಂದರ್ಭದಲ್ಲಿಯೂ “ಎಲ್ಲಿದ್ದೀರಿ, ಎಲ್ಲಿ ಸಿಗುತ್ತೀರಿ” ಎಂದು ಕೇಳಬೇಡಿ. ತೀರಾ ಅಗತ್ಯವಿದ್ದಲ್ಲಿ “ಕಚೇರಿಯಲ್ಲಿ ಕಾಯುತ್ತಿದ್ದೇವೆ, ಎಷ್ಟೊತ್ತಿಗೆ ಬರುತ್ತೀರಿ?” ಎಂದು ಕೇಳಿ. ಇಲ್ಲವಾದರೆ ಅವರು ಬರುವ ತನಕ ಕಾಯಿರಿ.

? ಅಧಿಕಾರಿಗಳನ್ನು ಭೇಟಿ ಆದಾಗ ಯಾವುದೇ ಸಂದರ್ಭದಲ್ಲಿಯೂ ಅವಾಚ್ಯ ಶಬ್ದಗಳನ್ನು ಬಳಸಬೇಡಿ, ಬೆದರಿಕೆ ಹಾಕುವಂತಹ ಮಾತುಗಳನ್ನು ಆಡಬೇಡಿ.

? ಎಷ್ಟೇ ಪ್ರತಿಕೂಲ ವಾತಾವರಣ ಇದ್ದರೂ, ನಿಮ್ಮನ್ನು ಅವರು ಎಷ್ಟೇ ರೊಚ್ಚಿಗೆಬ್ಬಿಸಿದರೂ ದೈಹಿಕ ಹಲ್ಲೆಗೆ ಮಾತ್ರ ಮುಂದಾಗಬೇಡಿ.

? ಯಾವುದಾದರೂ ಸರ್ಕಾರಿ ಅಧಿಕಾರಿಯ ವಿರುದ್ಧ ನಿಮಗೆ ಲಂಚದ ಆರೋಪ ಕೇಳಿ ಬಂದಿದ್ದರೆ ಆ ವಿಚಾರವಾಗಿ ಆ ಅಧಿಕಾರಿಯ ಬಳಿ ಮಾತನಾಡಲೇಬೇಡಿ. ಬದಲಿಗೆ ಆ ಸಿಬ್ಬಂದಿಯ ಮೇಲಧಿಕಾರಿಗಳಿಗೆ ಲಿಖಿತವಾಗಿ ದೂರು ಕೊಡಿ ಅಥವ ವಿಡಿಯೋ ರೆಕಾರ್ಡ್ ಆಗುತ್ತಿರುವಾಗ ಮಾತ್ರ ಆ ಮೇಲಧಿಕಾರಿಯ ಬಳಿ ಮೌಖಿಕವಾಗಿ ವಿಚಾರವನ್ನು ಪ್ರಸ್ತಾಪಿಸಿ. ಲಂಚಕೋರ ಅಧಿಕಾರಿಯನ್ನು ನೀವೇನಾದರೂ ಅತ್ಯುತ್ಸಾಹದಿಂದ ವೈಯಕ್ತಿಕವಾಗಿ ಪ್ರಶ್ನಿಸಿದರೆ ಆತ ಇವರು ನನಗೆ ಬ್ಲ್ಯಾಕ್‌ಮೇಲ್ ಮಾಡಿದರು ಎಂದು ಸುಳ್ಳು ದೂರು ದಾಖಲಿಸುವ ಸಾಧ್ಯತೆ ಇರುತ್ತದೆ. ಈಗಾಗಲೇ ಆ ಅಧಿಕಾರಿ ಲಂಚ ಸ್ವೀಕರಿಸಿಬಿಟ್ಟಿದ್ದರೆ ಸಂತ್ರಸ್ತ ವ್ಯಕ್ತಿಯಿಂದ ACBಯಲ್ಲಿ ದೂರು ದಾಖಲಿಸಲು ಕ್ರಮ ಕೈಗೊಳ್ಳಿ ಮತ್ತು ಅದಕ್ಕೆ ಮೊದಲು ಸಂತ್ರಸ್ತ ವ್ಯಕ್ತಿಯ ಪ್ರಾಮಾಣಿಕತೆ ಮತ್ತು ಧೈರ್ಯವನ್ನು ಖಾತ್ರಿ ಮಾಡಿಕೊಳ್ಳಿ.

? ಅಧಿಕಾರಿ ಲಂಚ ಕೇಳಿದ್ದಾನೆ, ಆದರೆ ಅರ್ಜಿದಾರರು ಇನ್ನೂ ಲಂಚ ಕೊಟ್ಟಿಲ್ಲ ಎನ್ನುವ ವಿಚಾರವನ್ನು ಅರ್ಜಿದಾರರು ನಿಮ್ಮ ಗಮನಕ್ಕೆ ತಂದಾಗ, ಅರ್ಜಿದಾರರನ್ನು ನೇರವಾಗಿ ಜಿಲ್ಲಾ ACB ಮುಖ್ಯಸ್ಥರ ಬಳಿಗೆ ಕರೆದುಕೊಂಡು ಹೋಗಿ ಆ ಲಂಚಕೋರ ಅಧಿಕಾರಿ ಲಂಚ ಸ್ವೀಕರಿಸುತ್ತಿರುವ ಸಮಯದಲ್ಲಿ ACB ದಾಳಿ ಆಗುವ ಹಾಗೆ ಮಾಡಿ. ಇಡೀ ಸಂದರ್ಭದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳಿ ಮತ್ತು ಭ್ರಷ್ಟ ಅಧಿಕಾರಿಯ ಜೊತೆ ನಿಮ್ಮ ಯಾವುದೇ ಮಾತು, ಸಂಪರ್ಕ ಇಲ್ಲದ ಹಾಗೆ ನೋಡಿಕೊಳ್ಳಿ.

? ಕೆಳಹಂತದ ಅಧಿಕಾರಿಗಳು ಅನಗತ್ಯವಾಗಿ ಸತಾಯಿಸುತ್ತಿದ್ದಾರೆ ಎನ್ನುವ ಸಮಸ್ಯೆಗಳು ಕೇಳಿ ಬಂದಾಗ ಆ ವಿಚಾರವನ್ನು ಸಾಧ್ಯವಾದಷ್ಟೂ ಮೇಲಧಿಕಾರಿಗಳ ಗಮನಕ್ಕೆ ತನ್ನಿ.

? ಯಾವುದೇ ವಿಚಾರವಾದರೂ ಸರಿಯೇ, ಬಾಯಿಮಾತಿಗಿಂತ ಲಿಖಿತವಾಗಿಯೆ ದೂರು ನೀಡಲು ಪ್ರಯತ್ನಿಸಿ ಮತ್ತು ಪ್ರತಿಯೊಂದಕ್ಕೂ Acknowledgement/ಹಿಂಬರಹ ಪಡೆಯಿರಿ.

? ಪೊಲೀಸರೊಂದಿಗೆ ವ್ಯವಹರಿಸುವಾಗ ಆ ಸಂದರ್ಭದಲ್ಲಿ ಸಾಧ್ಯವಾದಷ್ಟು ಸಂಖ್ಯೆಯಲ್ಲಿ ಸಾಕ್ಷಿಗಳು ಇರುವ ಹಾಗೆ ನೋಡಿಕೊಳ್ಳಿ. ಸಾಕ್ಷಿಗಳು ಇಲ್ಲದಿರುವ ಸಂದರ್ಭದಲ್ಲಿ ನಿಮ್ಮ ಕಡೆಯವರು ಅಥವ ವಕೀಲರು ಬರುವ ತನಕ ತಾಳ್ಮೆಯಿಂದ ಕಾಯಿರಿ. ಏಕಾಂಗಿಯಾಗಿರುವಾಗ ಪೊಲೀಸರೊಡನೆ ವಾದ ಮಾಡಲು ಹೋಗಬೇಡಿ.

? ಕನಿಷ್ಠ ಇಬ್ಬರಾದರೂ ಜೊತೆಗೆ ಇಲ್ಲದೆ ಪೊಲೀಸ್ ಠಾಣೆಗೆ ಹೋಗಬೇಡಿ. ನೀವೇ ದೂರುದಾರರಾಗಿದ್ದರೂ ಪರಿಚಿತ ಮತ್ತು ನ್ಯಾಯವಂತ ವಕೀಲರನ್ನು ಜೊತೆಗೆ ಕರೆದುಕೊಂಡು ಹೋಗಿ.

? ಸಾರ್ವಜನಿಕವಾಗಿ ನಡೆಯುತ್ತಿರುವ ಅನ್ಯಾಯ ಅಥವ ಅಕ್ರಮದ ಬಗ್ಗೆ ಅಲ್ಲಿರುವ ಎಲ್ಲರೂ ಸುಮ್ಮನಿರುವಾಗ ನೀವು ಒಬ್ಬರೇ ನ್ಯಾಯ ಕೇಳಲು ಮತ್ತು ಅಧಿಕಾರಿಗಳನ್ನು ಪ್ರಶ್ನಿಸಲು ಮುಂದಾಗಬೇಡಿ. ಪಕ್ಷದ ಕೆಲವು ಪದಾಧಿಕಾರಿಗಳಿಗಾದರೂ ಕರೆ ಮಾಡಿ ಕರೆಸಿಕೊಳ್ಳಿ ಮತ್ತು ಅವರು ಬಂದ ನಂತರ ಪ್ರಶ್ನಿಸಲು ಮುಂದಾಗಿ. ನಾವು ನ್ಯಾಯವನ್ನೇ ಕೇಳುತ್ತಿದ್ದರೂ ಕೆಲವು ಸಂದರ್ಭಗಳಲ್ಲಿ ಸಾರ್ವಜನಿಕರು ನಮ್ಮ ಬೆಂಬಲಕ್ಕೆ ಬರುವುದಿಲ್ಲ ಎನ್ನುವ ಪ್ರಜ್ಞೆ ನಿಮಗಿರಲಿ. ನಮಗೇ ಹಾನಿ ಮಾಡಿಕೊಂಡು ಎಲ್ಲಾ ಹೋರಾಟಗಳನ್ನು ನಾವೇ ಮಾಡಬೇಕಿಲ್ಲ ಮತ್ತು ಎಲ್ಲವೂ ಒಂದೇ ದಿನದಲ್ಲಿ ಸರಿ ಹೋಗುವುದಿಲ್ಲ. ಸಂಘಟಿತವಾಗಿ ಮತ್ತು ಸತತವಾಗಿ ಮಾಡುವ ಹೋರಾಟಗಳು ಮಾತ್ರ ನಮ್ಮನ್ನೂ ಕಾಪಾಡುತ್ತವೆ ಹಾಗೂ ಯಶಸ್ವಿ ಆಗುತ್ತವೆ.

ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಇನ್ನೂ ಒಂದಷ್ಟು ಅಂಶಗಳನ್ನು ಇದಕ್ಕೆ ಸೇರಿಸಲಾಗುವುದು. ಆದರೆ ಸದ್ಯಕ್ಕೆ ಪಕ್ಷದ ಎಲ್ಲಾ ಸಿಪಾಯಿಗಳು ಈ ಸೂಚನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಮತ್ತೊಮ್ಮೆ ಕೋರುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ.

ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ
ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.

21-09-2021.

ಬಹುತೇಕ ಎಲ್ಲಾ ಹೋರಾಟಗಳು ಸಾರ್ವಜನಿಕ ಪರವಾಗಿದ್ದರು ವಾಸ್ತವದಲ್ಲಿ ಅದು ಕಾನೂನು ವಿರುದ್ಧವಿದೆ.

ನ್ಯಾಯಾಲಯದಲ್ಲಿ ಸುಳ್ಳು ಕೇಸು ದಾಖಲಿಸಲಿ.. ಅವರ ವಿರುದ್ಧ ದಾಖಲಿಸಿರುವ ಸೆಕ್ಷನ್ಗಳ.. ಯೋಚನೆ ಮಾಡಬೇಕಾಗಿದ್ದ ಸೆಕ್ಷನ್ಗಳು..

Act & Section : THE BHARATIYA NYAYA SANHITA (BNS), 2023 (U/s-189(2),126(2),132,74,352,351(2),190)

ಲಂಚಮುಕ್ತ ಕರ್ನಾಟಕ ಅಭಿಯಾನ ಆರಂಭಿಸಿರುವೆವು ಎಂಬ ಹೆಸರಿನಲ್ಲಿ ಸಾರ್ವಜನಿಕರನ್ನು ಪ್ರಚೋದಿಸಿ, ಯಾವುದೇ ಮುನ್ಸೂಚನೆಯಿಲ್ಲದೆ ಹಾಗೂ ಮೇಲಾಧಿಕಾರಿಗಳ ಅನುಮತಿಯಿಲ್ಲದೆ ತಹಶೀಲ್ದಾರರ ಕಚೇರಿ ಆವರಣಕ್ಕೆ ನುಗ್ಗಿ, ವಿವಿಧ ಶಾಖೆಗಳಲ್ಲಿ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ.ಇವರು ಕರ್ತವ್ಯದಲ್ಲಿದ್ದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಭಯಭೀತಿ ಸೃಷ್ಟಿಸುವ ರೀತಿಯಲ್ಲಿ ವರ್ತಿಸಿ, ಅವರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿ ಉಂಟುಮಾಡಿದ್ದಾರೆ. ಆಫೀಸನ್ನು ಸುತ್ತುವರಿದು, ಸರ್ಕಾರಿ ಕರ್ತವ್ಯಕ್ಕೆ ಅಡಚಣೆ ಮಾಡಿದ್ದಾರೆ. ಇದೇ ವೇಳೆ ಉದ್ದೇಶಪೂರ್ವಕವಾಗಿ ಲೈವ್ ವಿಡಿಯೋ ಚಿತ್ರೀಕರಣ ಮಾಡಿಕೊಂಡು, ಸಾರ್ವಜನಿಕವಾಗಿ ಅಧಿಕಾರಿಗಳನ್ನು ಅವಮಾನಗೊಳಿಸಿದ್ದಾರೆ.ಇಲ್ಲದೆ, ಮಹಿಳಾ ಸಿಬ್ಬಂದಿಗಳಿಗೂ ಅನುಚಿತವಾಗಿ ವರ್ತನೆ ನಡೆಸಿ, ಕಚೇರಿಯ ಶಿಸ್ತಿಗೆ ಧಕ್ಕೆಯುಂಟುಮಾಡಿದ್ದಾರೆ.

ಇದು ಒಂದು ಉದಾಹರಣೆ.. ಒಬ್ಬ ಸರ್ಕಾರಿ ಉದ್ಯೋಗಿ ಮೇಲಿನ ಅಂಶಗಳನ್ನು ಬರೆದು ಠಾಣೆಗೆ ದಾಖಲಿಸಿದರೆ FIR ಮಾಡಿಸಿದರೆ..

1. ಸೆಕ್ಷನ್ 74 – ಗಂಭೀರ ಪ್ರಚೋದನೆಯಿಲ್ಲದೆ ದಾಳಿ ಅಥವಾ ಕ್ರಿಮಿನಲ್ ಫೋರ್ಸ್ ಬಳಕೆಯಾರಾದರೂ ಗಂಭೀರ ಪ್ರಚೋದನೆಯಿಲ್ಲದೆ ಮತ್ತೊಬ್ಬರ ಮೇಲೆ ದಾಳಿ ಮಾಡಿದರೆ ಅಥವಾ ಶಾರೀರಿಕ ಹಿಂಸೆ ಕೊಟ್ಟರೆ.ಶಿಕ್ಷೆ: ಮೂರು ತಿಂಗಳು ಜೈಲು, ಅಥವಾ ರೂ.1,000 ದಂಡ, ಅಥವಾ ಎರಡೂ.—

2. ಸೆಕ್ಷನ್ 126(2) – ಬೇಲೆಗೆ ಕಿಡ್ನಾಪ್ ಮಾಡುವುದುಹಣ, ಮೌಲ್ಯವಸ್ತು ಅಥವಾ ಬೇಲೆಗೆ ವ್ಯಕ್ತಿಯನ್ನು ಅಪಹರಿಸುವುದು ಅಥವಾ ಅಪಹರಣದ ಬೆದರಿಕೆ ನೀಡುವುದು.ಶಿಕ್ಷೆ: ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ, ಜೊತೆಗೆ ದಂಡ.—

3. ಸೆಕ್ಷನ್ 132 – ವ್ಯಕ್ತಿಯ ಸಾಗಣೆ (ಟ್ರಾಫಿಕಿಂಗ್)ಶೋಷಣೆಯ ಉದ್ದೇಶದಿಂದ ವ್ಯಕ್ತಿಯ ಸಾಗಣೆ: ಬಲಾತ್ಕಾರ, ದುಡಿಮೆಗೆ ಹತ್ತಿಸುವುದು, ದಾಸ್ಯ ಅಥವಾ ಮಾಂಸವ್ಯಾಪಾರ.ಶಿಕ್ಷೆ: 7 ವರ್ಷಗಳಿಂದ ಜೀವಾವಧಿವರೆಗೆ ಜೈಲು, ಜೊತೆಗೆ ದಂಡ.—

4. ಸೆಕ್ಷನ್ 189(2) – ಸಾರ್ವಜನಿಕ ಸೇವಕನು ಉದ್ದೇಶಪೂರ್ವಕವಾಗಿ ಕಾನೂನು ಉಲ್ಲಂಘನೆ ಮಾಡುವುದುಸಾರ್ವಜನಿಕ ಸೇವಕನು ಕಾನೂನನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿ ಯಾರಿಗಾದರೂ ಹಾನಿಯುಂಟುಮಾಡಿದರೆ.ಶಿಕ್ಷೆ: 2 ವರ್ಷ ವರೆಗೆ ಜೈಲು, ಅಥವಾ ದಂಡ, ಅಥವಾ ಎರಡೂ.—

5. ಸೆಕ್ಷನ್ 190 – ಸರ್ಕಾರಿ ಸೇವಕರಿಗೆ ಬೆದರಿಕೆಯಾವುದೇ ಸರ್ಕಾರಿ ಸಿಬ್ಬಂದಿಗೆ ಬೆದರಿಕೆ ನೀಡಿ ಅವರ ಕರ್ತವ್ಯ ನಿರ್ವಹಣೆಗೆ ಅಡೆತಪ್ಪಿಸುವುದು.ಶಿಕ್ಷೆ: 2 ವರ್ಷ ವರೆಗೆ ಜೈಲು, ಅಥವಾ ದಂಡ, ಅಥವಾ ಎರಡೂ.—

6. ಸೆಕ್ಷನ್ 351(2) – ಮಹಿಳೆಯ ಗೌರವ ಧ್ವಂಸಗೊಳಿಸಲು ಕ್ರಿಮಿನಲ್ ಫೋರ್ಸ್ ಬಳಕೆಮಹಿಳೆಯ ಗೌರವ ಅಥವಾ ಮೆರವಣಿಗೆ ಖಂಡಿತವಾಗಿ ಅವಮಾನವಾಗುವ ರೀತಿಯಲ್ಲಿ ಶಾರೀರಿಕ ಶೋಷಣೆ.ಶಿಕ್ಷೆ: 1 ರಿಂದ 5 ವರ್ಷಗಳ ಜೈಲು, ಜೊತೆಗೆ ದಂಡ.—

7. ಸೆಕ್ಷನ್ 352 – ಲೈಂಗಿಕ ಕಿರುಕುಳಅಸ್ವಾಗತವಿಲ್ಲದ ಸ್ಪರ್ಶ, ಲೈಂಗಿಕವಾಗಿ ಲೆಕ್ಕವಿಲ್ಲದ ಟಿಪ್ಪಣಿಗಳು, ಅಶ್ಲೀಲ ಚಿತ್ರ/ವೀಡಿಯೋ ತೋರಿಸುವುದು.ಶಿಕ್ಷೆ: 3 ವರ್ಷ ವರೆಗೆ ಜೈಲು, ಅಥವಾ ದಂಡ, ಅಥವಾ ಎರಡೂ.

ಇದನ್ನು ನಮ್ಮ ಮುಂದಿನ ಹೋರಾಟಗಾರರು ಯಾವ ರೀತಿಯ ಅರ್ಥ ಮಾಡಿಕೊಳ್ಳಬೇಕು..?

Related posts