ಬಾಗಲೂರು ಮುಖ್ಯರಸ್ತೆಯಲ್ಲಿನ ಸಂಚಾರಕ್ಕೆ ಅಡಚಣೆ: ಖಾಸಗಿ ಬಸ್ ಚಾಲಕನ ವಿರುದ್ಧ ಕ್ರಮ
ಬೆಂಗಳೂರು, ಜುಲೈ 17:2025
ನಗರದ ಬಾಗಲೂರು ಮುಖ್ಯರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ ಖಾಸಗಿ ಬಸ್ ಚಾಲಕನ ವಿರುದ್ಧ ಪೋಲೀಸರು ಕ್ರಮ ಕೈಗೊಂಡಿದ್ದಾರೆ.
ಮಾಹಿತಿಯ ಪ್ರಕಾರ, 14-07-2025 ರಂದು ಸಂಜೆ ಸುಮಾರು 7 ಗಂಟೆಯ ವೇಳೆಗೆ, ಬಾಗಲೂರು ಮುಖ್ಯರಸ್ತೆಯ ಕಟ್ಟಿಗೇನಹಳ್ಳಿ ಬಳಿ ಇರುವ ಅಮೂಲ್ಯ ಬಾರ್ ಹತ್ತಿರ ಖಾಸಗಿ ಬಸ್ (ನಂ. ಕೆಎ-42-1131) ಅನ್ನು ಅದರ ಚಾಲಕ ಸಾರ್ವಜನಿಕ ರಸ್ತೆಯ ಮೇಲೆ ನಿಲ್ಲಿಸಿ, ಸುಮಾರು ಒಂದು ಗಂಟೆಗಳ ಕಾಲ ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ಅಡಚಣೆ ಉಂಟುಮಾಡಿದ್ದಾನೆ.
ಘಟನೆ ನಡೆಯುವ ವೇಳೆ ಕೋಬ್ರಾ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು, ಈ ಬಸ್ ಚಾಲಕನನ್ನು ತಕ್ಷಣ ಠಾಣೆಗೆ ಕರೆದುಕೊಂಡು ಹೋಗಿದ್ದು, ವಾಹನ ನಿಲುಕಿಸುವ ವಿಧಾನವು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿರುವುದರಿಂದ ಸಂಬಂಧಪಟ್ಟಂತೆ ಕಾನೂನು ಕ್ರಮ ಜರುಗಿಸುವಂತೆ ಪ್ರಕ್ರಿಯೆ ಆರಂಭಿಸಿದ್ದಾರೆ.
ಯಲಹಂಕ ಸಂಚಾರಿ ಪೊಲೀಸರು ಈ ಘಟನೆಯ ಕುರಿತಾಗಿ ಹೆಚ್ಚಿನ ತನಿಖೆ ಮುಂದುವರೆಸಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಎಲ್ಲರು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ

