ಯಲಹಂಕದಲ್ಲಿ ಅಕ್ರಮ ವಲಸೆಕರ್ಗಳಿಗೆ ಕಾನೂನು ಗುರುತಿನ ಚೀಟಿ ನೀಡಿದ ಘಟನೆ ಬೆಳಕಿಗೆ – ಕವಿತಾ ಮತ್ತು ಪುತ್ರಿ ಶೃತಿ ವಿರುದ್ಧ ಎಫ್ಐಆರ್
ಬೆಂಗಳೂರು, ಜುಲೈ 17:2025
ಯಲಹಂಕ ಉಪನಗರದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸೆದಾರರಿಗೆ ಭಾರತ ಸರ್ಕಾರದ ಗುರುತಿನ ದಾಖಲೆಗಳಾದ ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಅನ್ನು ನೀಡಲು ನೆರವು ನೀಡಿದ ಆರೋಪದ ಮೇಲೆ ಸ್ಥಳೀಯ ಅಂಗಡಿಯ ಮಾಲೀಕರಾದ ಕವಿತಾ ದೀತಿ ಮತ್ತು ಅವರ ಮಗಳಾದ ಶೃತಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಈ ಕುರಿತು ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಡ್ ಕಾನ್ಸ್ಟೆಬಲ್ ಪರಶುರಾಮ ಬಾಲನ್ನವರ್ ಅವರು ನೀಡಿದ ಮಾಹಿತಿ ಪ್ರಕಾರ, ದಿನಾಂಕ 14 ಜುಲೈ 2025 ರಂದು ಅವರು ತಮ್ಮ ಗಸ್ತು ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಬರುವ ಟಪಾಲುಗಳಲ್ಲಿ ಉಪ ಪೊಲೀಸ್ ಆಯುಕ್ತ (ಈಶಾನ್ಯ ವಿಭಾಗ) ಕಚೇರಿಗೆ ಸಲ್ಲಿಸಲಾದ ಒಂದು ಮಹತ್ವದ ಈ-ಮೇಲ್ ದೂರು ಸಿಕ್ಕಿದೆ.
ದೂರುದಾರರಾದ ಕೋಲಜಾ ಎನ್ ಕಾನ್ವಸ್ ಅವರು ನೀಡಿದ ದೂರಿನಲ್ಲಿ, ಯಲಹಂಕದ ಅಂಗಡಿಯ ಮಾಲೀಕರಾದ ಕವಿತಾ ಮತ್ತು ಶೃತಿ ಅವರು ಬಾಂಗ್ಲಾ ಮೂಲದ ಅಕ್ರಮ ವಲಸೆದಾರರಿಗೆ ಭಾರತದ ನಕಲಿ ದಾಖಲೆಗಳನ್ನು ತಯಾರಿಸುವ ಮೂಲಕ, ದೇಶದ ಭದ್ರತೆಗೆ ಕುತ್ತು ಉಂಟುಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವಿದೆ.
ಈ ದೂರಿನ ಆಧಾರದ ಮೇಲೆ, ಮಾನ 7ನೇ ಜೆ.ಸಿ.ಎಂ. ನ್ಯಾಯಾಲಯದ ಅನುಮತಿ ಪಡೆದುಕೊಂಡು, ಪ್ರಕರಣ 365/2025 ನೇಂಬರಿನಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಯಲಹಂಕ ಉಪನಗರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಮುಂದಿನ ತನಿಖೆಗೆ ಚಾಲನೆ ನೀಡಿದ್ದಾರೆ.
ಪೋಲೀಸ್ ಮೂಲಗಳ ಪ್ರಕಾರ, ಆರೋಪಿತರ ವಿರುದ್ಧ ಭಾರತ ದೇಶದ ಭದ್ರತೆ ಹಾಗೂ ನಕಲಿ ದಾಖಲೆ ಸಿದ್ಧಪಡನೆಗೆ ಸಂಬಂಧಿಸಿದಂತೆ ಹಲವು ಕಾನೂನು ನಿಯಮಗಳ ಅಡಿಯಲ್ಲಿ ಕ್ರಮ ಜರುಗಿಸಲಾಗುತ್ತಿದೆ

