ಟೆಲಿಗ್ರಾಮ್ ಲಿಂಕ್ ಮುಖಾಂತರ ಆನ್ಲೈನ್ ಹೂಡಿಕೆ ಮೋಸ – ಮಹಿಳೆಗೆ ₹3.92 ಲಕ್ಷ ನಷ್ಟ
ಬೆಂಗಳೂರು, ಜುಲೈ 18:2025
ನಗರದಲ್ಲಿ ಮತ್ತೊಂದು ಆನ್ಲೈನ್ ಹೂಡಿಕೆ ಮೋಸದ ಪ್ರಕರಣ ಬೆಳಕಿಗೆ ಬಂದಿದೆ. ದೂರಿನ ಮಾಹಿತಿಯ ಪ್ರಕಾರ, 12 ಜುಲೈ 2025 ರಂದು ದೂರುದಾರರಿಗೆ ಟೆಲಿಗ್ರಾಂ ಎಂಬ ಮೆಸೇಜಿಂಗ್ ಆಪ್ನಲ್ಲಿ ಒಂದು ಲಿಂಕ್ ಬಂದಿತ್ತು. ಆ ಲಿಂಕ್ ಮೂಲಕ ಹೂಡಿಕೆ ಸಂಬಂಧಿತ ಗ್ರೂಪ್ವೊಂದಕ್ಕೆ ಜೋಡಣೆಗೊಂಡ ಅವರು, ಆರಂಭದಲ್ಲಿ ₹10,000, ₹14,500, ₹20,000, ₹28,150, ₹50,000, ₹40,000, ₹16,895 ಹೀಗೆ ಕಳಿಸಿದರು.
ಆ ನಂತರ ಅವರು ₹1,63,968, ₹70,000 ಮತ್ತು ₹62,000 ಹಣವನ್ನು ದಿನಾಂಕ 14 ಜುಲೈ 2025 ರಂದು ಜಮೆ ಮಾಡಿದರು. ಇದರೊಂದಿಗೆ ಮೊತ್ತ ₹3,92,863 ನಷ್ಟವಾಗಿದೆ. ಮತ್ತೆ ₹5.4 ಲಕ್ಷ ಹಣವನ್ನು ಜಮೆ ಮಾಡುವಂತೆ ಹೇಳಿದಾಗ, ತಾನು ಮೋಸಗೊಂಡಿರುವುದು ಗೊತ್ತಾಯಿತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ದೂರುದಾರರು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

