ಸುದ್ದಿ 

ತಲೆಮರೆಸಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು

Taluknewsmedia.com

ಬೆಂಗಳೂರು, ಜುಲೈ 18:2025
ನ್ಯಾಯಾಲಯದಿಂದ ವಾರೆಂಟ್ ಹೊರಡಿಸಲಾಗಿದ್ದರೂ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಸವರಾಜು ಎಸ್ (38 ವರ್ಷ) ಎಂಬವರನ್ನು ಬೆಂಗಳೂರು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಬೃಹತ್ ಅಪರಾಧ ಪ್ರಕರಣದಲ್ಲಿ ಸಂಡಿಸಿದ್ದನು. ಇವನ ವಿರುದ್ಧ 2024 ರಿಂದ 2025ರವರೆಗೆ ಹಲವಾರು ದಿನಾಂಕಗಳಲ್ಲಿ ವಾರೆಂಟ್‌ಗಳು ಹೊರಡಿಸಿತ್ತಾದರೂ ಹಾಜರಾಗದೆ ಜಾಮೀನಿನ ನಿಯಮ ಉಲ್ಲಂಘಿಸಿದ್ದ.

ಪೊಲೀಸರಿಗೆ ಲಾಲ್‌ಬಾಗ್ ಸಿದ್ಧಾಪುರದಲ್ಲಿ ಆರೋಪಿ ಇರುವ ಬಗ್ಗೆ ಖಚಿತ ಮಾಹಿತಿ ದೊರಕಿದ ನಂತರ, ಅವರು 16 ಜುಲೈ 2025ರಂದು ಬೆಳಿಗ್ಗೆ 8:30ಕ್ಕೆ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದರು.

ಬಂಧಿತನನ್ನು ಠಾಣೆಗೆ ಕರೆದೊಯ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಯಲಹಂಕ ಪೊಲೀಸರು ಕಾನೂನು ಕ್ರಮ ಮುಂದುವರೆಸಿದ್ದಾರೆ.

Related posts