ಸುದ್ದಿ 

ಮನೆಯ ಎದುರು ಮಾರಣಾಂತಿಕ ಹಲ್ಲೆ – ಚೈನೂ, ನಗದು ದೋಚಿದ ಆರೋಪಿ ತಂಡ

Taluknewsmedia.com

ಬೆಂಗಳೂರು, ಜುಲೈ 22 2025:
ನಗರದ ನಿವಾಸಿಯಾದ ಪಿರ್ಯಾದಿದಾರರು ತಮ್ಮ ಮನೆಯ ಹತ್ತಿರ ಇದ್ದಾಗ ಆರು ಮಂದಿ ಆರೋಪಿಗಳು – ಅಮ್ಮರ್, ಶಾಬಾಜ್, ಸಲ್ಮಾನ್, ಆಡು, ರಾಮಿಯಾ ಮತ್ತು ಸಾನು – ಏಕಾಏಕಿ ಸ್ಥಳಕ್ಕೆ ಬಂದು ಅವಾಚ್ಯ ಪದಗಳಿಂದ ಬೈದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.

ಹಲ್ಲೆ ಸಂದರ್ಭದಲ್ಲಿ ಪಿರ್ಯಾದಿದಾರರ ಕೊರಳಲ್ಲಿದ್ದ ಬಂಗಾರದ ಚೈನೂ, ಕಿವಿಯ ಓಲೆಗಳು, ಹಾಗೂ ಪರ್ಸ್‌ನಲ್ಲಿದ್ದ ರೂ.25,000/- ನಗದು ಬಲವಂತವಾಗಿ ದೋಚಲಾಗಿದೆ.

ಪಿಡುಗಿದಂತೆ ನಡೆದ ಘಟನೆ ಬಳಿಕ, ಅವರು ವಿದ್ಯಾರಣ್ಯಪುರ ಪೊಲೀಸರಿಗೆ ಮಾಹಿತಿ ನೀಡಿದಾಗ ಆರೋಪಿಗಳು “ನಿನ್ನ ಕುಟುಂಬವನ್ನು ಸಂಪೂರ್ಣವಾಗಿ ನಾಶಮಾಡುತ್ತೇವೆ” ಎಂದು ಜೀವ ಬೆದರಿಕೆ ಹಾಕಿರುವುದಾಗಿ ತಿಳಿದುಬಂದಿದೆ

ಕೇಸ್ ನಂ: 9944/2025

ದಿನಾಂಕ: 06.05.2025

ಸ್ಥಳ: ಪಿರ್ಯಾದಿದಾರರ ನಿವಾಸದ ಹತ್ತಿರ

ಆರೋಪಿತರು: ಅಮ್ಮರ್, ಶಾಬಾಜ್, ಸಲ್ಮಾನ್, ಆಡು, ರಾಮಿಯಾ, ಸಾನು

ವಿದ್ಯಾರಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ. ಸ್ಥಳೀಯರು ಈ ಘಟನೆ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Related posts