ಸುದ್ದಿ 

ಹೆಗಡೆನಗರದಲ್ಲಿ 85 ವರ್ಷದ ವೃದ್ಧ ಕಾಣೆ: ಸಂಪಿಗೆಹಳ್ಳಿ ಪೊಲೀಸರಿಗೆ ತಾತನ ಪತ್ತೆಗಾಗಿ ದೂರು

Taluknewsmedia.com

ಬೆಂಗಳೂರು, ಜುಲೈ 22: 2025
ಹೆಗಡೆನಗರ ನಿವಾಸಿಯಾದ 85 ವರ್ಷದ ಶ್ರೀ ಗೋಪಾಲ್ ಎಂಬ ವೃದ್ಧರು ನಿನ್ನೆ ಬೆಳಗ್ಗೆ ತಮ್ಮ ಮನೆಯಿಂದ ಅಂಗಡಿಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು, ಇನ್ನೂ ಮನೆಗೆ ಮರಳಿಲ್ಲ ಎಂದು ಕುಟುಂಬದವರು ಫಿರ್ಯಾದಿಸಿದ್ದಾರೆ.

ಫಿರ್ಯಾದುದಾರರು ತಿಳಿಸಿದ್ದಾರೆ ಅವರು ನಂ.844, 3ನೇ ಕ್ರಾಸ್, ಹೆಗಡೆನಗರ, ಬೆಂಗಳೂರು ವಿಳಾಸದಲ್ಲಿ ತಮ್ಮ ತಾಯಿ, ತಂದೆ ಹಾಗೂ ತಾತನ ಜೊತೆ ವಾಸವಾಗಿದ್ದರು. ಶ್ರೀ ಗೋಪಾಲ್ ತಾತನಿಗೆ ವಯಸ್ಸಾಗಿರುವ ಕಾರಣ ಅವರು ಮನೆಯಲ್ಲಿಯೇ ಇರುತ್ತಿದ್ದರು.

ದಿನಾಂಕ 20/07/2025 ರಂದು ಬೆಳಗ್ಗೆ ಸುಮಾರು 7:30 ಗಂಟೆಗೆ ಅಂಗಡಿಗೆ ಹೋಗಿ ಬರುತ್ತೇನೆಂದು ಹೇಳಿ ಹೊರಬಂದ ಶ್ರೀ ಗೋಪಾಲ್ ಅವರು ಆ ಸಮಯದ ನಂತರ ವಾಪಾಸು ಮನೆಗೆ ಬಂದಿಲ್ಲ. ಕುಟುಂಬದವರು আত্মೀಯರು, ಸ್ನೇಹಿತರು ಹಾಗೂ ಸುತ್ತಮುತ್ತಲಿನ ಎಲ್ಲೆಡೆ ಹುಡುಕಿ, ವಿಚಾರಿಸಿದರೂ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಕಾಣೆಯಾದ ವ್ಯಕ್ತಿಯ ವಿವರಗಳು:

ಹೆಸರು: ಶ್ರೀ ಗೋಪಾಲ್ ಬಿನ್ ಗೋವಿಂದ ಕೌಂಡರ್

ವಯಸ್ಸು: 85 ವರ್ಷ

ಎತ್ತರ: ಸುಮಾರು 5 ಅಡಿ 7 ಇಂಚು

ಮುಖದ ರೂಪ: ಸಾಮಾನ್ಯ

ಮಾತನಾಡುವ ಭಾಷೆ: ತಮಿಳು

ಕೊನೆಯದಾಗಿ ಧರಿಸಿರುವ ಬಟ್ಟೆ: ನೀಲಿ ಬಣ್ಣದ ಲುಂಗಿ ಹಾಗೂ ಬಿಳಿ ಬಣ್ಣದ ಶಾಲು

ಗುರುತು: ವಿಶೇಷ ಗುರುತು ಇಲ್ಲ

ಸಂಪಿಗೆಹಳ್ಳಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಯಾರಿಗಾದರೂ ಈ ವೃದ್ಧರ ಬಗ್ಗೆ ಮಾಹಿತಿ ಇದ್ದರೆ ಸ್ಥಳೀಯ ಠಾಣೆಯನ್ನು ಸಂಪರ್ಕಿಸಲು ಅಧಿಕಾರಿಗಳು ಮನವಿ ಮಾಡಿದ್ದಾರೆ.

Related posts