ಅಪರಿಚಿತ ವ್ಯಕ್ತಿಯಿಂದ ವಂಚನೆ – ಮೊಬೈಲ್ ಲಿಂಕ್ ಮೂಲಕ 66,944 ರೂ. ಕಳೆದುಹೋಗಿದ ಘಟನೆ
ಬೆಂಗಳೂರು, 22 ಜುಲೈ 2025:
ವಾಟ್ಸಾಪ್ ಮೂಲಕ ಬಂದ ಸಂದೇಶದ ಮೂಲಕ ಟ್ರಾಫಿಕ್ ವೈಲೆಷನ್ ಚೆಲಾವಣೆಯ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ನಗರದ ನಿವಾಸಿಯೊಬ್ಬರಿಗೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ದೂರುದಾರರ ಪ್ರಕಾರ, 16.07.2025 ರಂದು ಅವರಿಗೆ ವಾಟ್ಸಾಪ್ ಮೂಲಕ ಒಂದು ಸಂದೇಶ ಬಂದು, ಅವರು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವುದಾಗಿ ತಿಳಿಸಿ ₹1000 ರೂ. ಪಾವತಿಸಬೇಕೆಂದು ಒಂದು ಲಿಂಕ್ ಕಳುಹಿಸಲಾಗಿತ್ತು. ದೂರುದಾರರು ಲಿಂಕ್ ತೆರೆಯುತ್ತಿದ್ದಂತೆ “amparirahan nextGen” ಎಂಬ ಹೆಸರಿನ ಎಪಿಕೆ ಫೈಲ್ ಡೌನ್‌ಲೋಡ್ ಆಗಿದೆ. ಫೈಲ್ ಇನ್‌ಸ್ಟಾಲ್ ಮಾಡಿದ ನಂತರ ಅವರ ಮೊಬೈಲ್‌ನಲ್ಲಿ ಹಲವಾರು ಶಾಪಿಂಗ್ ಆ್ಯಪ್‌ಗಳು ಡೌನ್‌ಲೋಡ್ ಆಗಿದೆಯೆಂಬುದರ ಜೊತೆಗೆ, ವಾಟ್ಸಾಪ್ ಮೂಲಕ ಅನೇಕ ಒಟಿಪಿಗಳು ಬಂದಿವೆ.
ನಂತರ 19.07.2025ರಂದು ಅವರು ಕ್ರೆಡಿಟ್ ಕಾರ್ಡ್ ಪರಿಶೀಲಿಸಿದಾಗ, ಅಮೆಜಾನ್ ಹಾಗೂ ಹಲವಾರು ಹೋಟೆಲ್ ಬುಕ್ಕಿಂಗ್‌ಗಳ ಮುಖಾಂತರ ಒಟ್ಟು ₹66,944 ರೂ. ಹಣ ಕಟ್ ಆಗಿರುವುದನ್ನು ಕಂಡುಬಂದಿದೆ.
ದೂರುದಾರರು ಈ ಘಟನೆ ಸಂಬಂಧಪಟ್ಟಂತೆ ಸಂಪಿಗೆಹಳ್ಳಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಂಡು, ಹಣ ವಾಪಸ್ ಮಾಡಲು ಹಾಗೂ ಇಂತಹ ವಂಚನೆಗಳನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

