ರಸ್ತೆಮಧ್ಯೆ ವಾಹನ ನಿಲ್ಲಿಸಿ ಸಂಚಾರ ಅಡ್ಡಿಪಡಿಸಿದ ಚಾಲಕನ ವಿರುದ್ಧ ದೂರು
ಬೆಂಗಳೂರು, ಜುಲೈ 22, 2025
ನಗರದ ಬಾಗಲೂರು ಮುಖ್ಯರಸ್ತೆಯ ಮುನೇಶ್ವರ ಬ್ಲಾಕ್, ಕಟ್ಟಿಗೇನಹಳ್ಳಿ ಬಳಿ ಇಂದು ಬೆಳಿಗ್ಗೆ 10:50ರ ಸುಮಾರಿಗೆ ಸಾರ್ವಜನಿಕ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯಾದ ಘಟನೆ ನಡೆದಿದೆ.
ಸಂಪೂರ್ಣವಾಗಿ ರಸ್ತೆಮಧ್ಯೆ ನಿಲ್ಲಿಸಲಾದ ಸೀರಿನ ಟ್ಯಾಂಕರ್ (ನಂಬರ್: ಕೆಎ-04 ಎಸಿ-2266) ಸಂಚಾರಿ ವಾಹನಗಳಿಗೆ ಅಡ್ಡಿಯಾಗಿತ್ತು. ಸ್ಥಳೀಯ ನಿವಾಸಿಗಳು ಈ ಬಗ್ಗೆ ಪ್ರಶ್ನಿಸಿದಾಗ, ಚಾಲಕ ತನ್ನನ್ನು ಲಿಂಗರೆಡ್ಡಿ ಬಿನ್ ವೆಂಕಟರೆಡ್ಡಿ (ವಯಸ್ಸು 23, ರೇವಾ ಆರ್ಕೆ ಬಡಾವಣೆ, ಬೆಂಗಳೂರು – 560064) ಎಂದು ಪರಿಚಯಿಸಿಕೊಂಡಿದ್ದಾನೆ.
ಸರ್ಕಾರಿ ರಸ್ತೆ ಮೇಲೆ ವಾಹನ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಈ ಘಟನೆ ಕುರಿತು ಸ್ಥಳೀಯರು ಯಲಹಂಕ ಸಂಚಾರಿ ಪೊಲೀಸರಿಗೆ ದೂರು ನೀಡಿದ್ದು, ಲಿಂಗರೆಡ್ಡಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

