ಸುದ್ದಿ 

ರಸಗೊಬ್ಬರದ ಬೆಲೆ ಏರಿಕೆ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ – ಪೋಲೀಸರು ಬಂಧಿಸಿ ಬಿಡುಗಡೆ..

Taluknewsmedia.com

ಬೆಂಗಳೂರು, ಜುಲೈ 22: ಕೇಂದ್ರ ಸರ್ಕಾರದ ರಸಗೊಬ್ಬರದ ಬೆಲೆ ಏರಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬೆಂಗಳೂರಿನ ಪಶ್ಚಿಮ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರವೀಣ್ ಅವರ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಯಿತು.

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರತಿಭಟನೆ ನಡೆಯಿದ್ದು, ಜನಜಾಗೃತಿಯೊಂದಿಗೆ ಕೇಂದ್ರದ ಬೆಲೆ ನಿತಿಯ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಲಾಯಿತು. ಪ್ರತಿಭಟನೆ ವೇಳೆ ಪೊಲೀಸ್ ಇಲಾಖೆ ಸ್ಥಳಕ್ಕೆ ಆಗಮಿಸಿ ಕೆಲವೆಕ್ಷಣಗಳ ಕಾಲ ಪ್ರತಿಭಟನಾಕಾರರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿತು.ಈ ಸಂದರ್ಭ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆಯೂ ಆಗಿರುವ ಪಶ್ಚಿಮ ಜಿಲ್ಲಾ ಉಸ್ತುವಾರಿ ಚೈತ್ರ ವಿ, ರಾಜ್ಯ ಕಾರ್ಯದರ್ಶಿ ಚೇತನ್ ನಾಯಕ್, ಜಿಲ್ಲಾ ಉಪಾಧ್ಯಕ್ಷರು ಅಕ್ಬರ್ ಖಾನ್ ಹಾಗೂ ಅಖಿಲೇಶ್, ವಿಧಾನಸಭಾ ಕ್ಷೇತ್ರದ ಅಧ್ಯಕ್ಷರುಗಳಾದ ರವಿರಾಜ್, ಮಂಜುನಾಥ್, ಚೇತನ್, ಹಾಗೂ ಹಲವು ಬ್ಲಾಕ್ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಸಹ ಭಾಗವಹಿಸಿದ್ದರು.

ಯುವ ಕಾಂಗ್ರೆಸ್‌ನ ಈ ಹೋರಾಟಕ್ಕೆ ಸ್ಥಳೀಯ ಯುವಕರು ಮತ್ತು ರೈತ ಸಂಘಟನೆಗಳ ಬೆಂಬಲವೂ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಈಂತಹ ಹೋರಾಟಗಳು ತೀವ್ರಗೊಳ್ಳುವ ಸೂಚನೆಗಳಿವೆ.

Related posts