ಯಲಹಂಕದಲ್ಲಿ ಭಾರಿ ರಸ್ತೆ ಅಪಘಾತ – ಬೆಸ್ಕಾಂ ಆಸ್ತಿಗೆ ಲಕ್ಷಾಂತರ ರೂಪಾಯಿ ನಷ್ಟ
ಯಲಹಂಕ: ದಿನಾಂಕ 21-07-2025
, ರಾತ್ರಿ ಸುಮಾರು 10:45ರ ಸುಮಾರಿಗೆ ಯಲಹಂಕದಲ್ಲೊಂದು ಭಾರೀ ರಸ್ತೆ ಅಪಘಾತ ಸಂಭವಿಸಿದ್ದು, ಬೆಸ್ಕಾಂನ ಆಸ್ತಿಗೆ ಸುಮಾರು ₹5.75 ಲಕ್ಷ ಮೊತ್ತದಷ್ಟು ನಷ್ಟವಾಗಿದೆ
ಆನಂದ್ ಎ ಎಂಬ ಚಾಲಕನು ತನ್ನ ಕಾರು (ನಂ. KA-01-25-8569) ಅನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ಬೆಸ್ಕಾಂ ನಂ ಡಿ.ಟಿ.ಸಿ-884 1*250 6.ವಿ.ಎ ಟ್ರಾನ್ಸ್‌ಫಾರ್ಮರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಿಂದ ಟ್ರಾನ್ಸ್‌ಫಾರ್ಮರ್ ಮುರಿದು ರಸ್ತೆಗೆ ಬಿದ್ದಿದ್ದು, ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆಯ ಕುರಿತು ಸ್ಥಳೀಯ ಇಂಜಿನಿಯರ್ ಶ್ರೀ ಆನಂದ್ ರವರು ಯಲಹಂಕ ಪೊಲೀಸರಿಗೆ ದೂರು ನೀಡಿದ್ದು, ಹಾನಿಯ ಅಂದಾಜು ಪಟ್ಟಿಯೊಂದಿಗೆ ದಾಖಲೆಗಳನ್ನು ಸಲ್ಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಜನರ ಸುರಕ್ಷತೆಗಾಗಿ ವಾಹನ ಚಾಲಕರು ರಸ್ತೆ ನಿಯಮ ಪಾಲಿಸುವುದು ಅತ್ಯಾವಶ್ಯಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

