ಸುದ್ದಿ 

ಹೆಬ್ಬಾಳ ಕೆಂಪಾಪುರದಲ್ಲಿ ಕಾಲೇಜು ಹುಡುಗಿ ನಾಪತ್ತೆ – ಮನೆಯವರು ಕಂಗಾಲು!

Taluknewsmedia.com

ಬೆಂಗಳೂರು, ಜುಲೈ 25:2025
ನಗರದ ಹೆಬ್ಬಾಳ ಕೆಂಪಾಪುರ ನಿವಾಸಿಯಾಗಿರುವ 18 ವರ್ಷದ ನೈಪುಣ್ಯ ಎಸ್.ವಿ. ಎಂಬ ಹುಡುಗಿ ನಾಪತ್ತೆಯಾಗಿರುವ ಘಟನೆ ಕುತೂಹಲ ಮೂಡಿಸಿದೆ. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದುತ್ತಿರುವ ಈಕೆ, ಶನಿವಾರ ಬೆಳಿಗ್ಗೆ ಸುಮಾರು 8.45ರ ಸುಮಾರಿಗೆ ಯಾರೋ ವ್ಯಕ್ತಿಯೊಂದಿಗೆ ಮನೆ ಹೊರಗೆ ಹೋಗಿದ್ದು, ನಂತರ ವಾಪಸ್ ಬಂದಿಲ್ಲ ಎಂದು ಮನೆಯವರು ತಿಳಿಸಿದ್ದಾರೆ.

ಮಧ್ಯಾಹ್ನ 3.15ರ ಸುಮಾರಿಗೆ ತಂದೆ ಈಕೆಯನ್ನು ಕರೆದುಕೊಂಡು ಹೋಗಲು ಕಾಲೇಜು ಹತ್ತಿರ ಹೋದಾಗ, ಈಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಕಾಲೇಜಿನ ಸೆಕ್ಯುರಿಟಿ ರೂಮಿನಲ್ಲಿ ಸಿಸಿ ಟಿವಿ ದೃಶ್ಯ ಪರಿಶೀಲಿಸಿದಾಗ ನೈಪುಣ್ಯ ಕಾಲೇಜಿನಿಂದ ಹೊರಹೋಗುತ್ತಿರುವ ದೃಶ್ಯ ಸಿಕ್ಕಿದೆ. ಆದರೆ ಆ ಬಳಿಕ ಈಕೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಮನೆಯವರು ತಮ್ಮ ಸಂಬಂಧಿಕರು ಹಾಗೂ ಗೆಳೆಯರ ಬಳಿಯಲ್ಲಿಯೂ ವಿಚಾರಣೆ ನಡೆಸಿದರೂ ಫಲಿತಾಂಶವಿಲ್ಲ. ಹೀಗಾಗಿ, ನೈಪುಣ್ಯ ನಾಪತ್ತೆಯಾಗಿ ಹೋಗಿರುವ ಬಗ್ಗೆ ಅಮೃತಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಾಪತ್ತೆ ಆಗಿರುವ ಹುಡುಗಿಯ ವಿವರಗಳು:

ಹೆಸರು: ನೈಪುಣ್ಯ ಎಸ್.ವಿ.

ವಯಸ್ಸು: 18 ವರ್ಷ

ಉದ್ದ: ಸುಮಾರು 5.5 ಅಡಿ

ಬಣ್ಣ: ಸಾಧಾರಣ

ಮುಖದ ರೂಪು: ದುಂಡು ಮುಖ

ಭಾಷಾ ಜ್ಞಾನ: ಕನ್ನಡ ಮತ್ತು ಇಂಗ್ಲಿಷ್

ಧರಿಸಿದ್ದ ಬಟ್ಟೆ: ಪಿಂಕ್ ಟಾಪ್ (ಬಿಳಿ ಬಣ್ಣದ ಹೂ ಚಿತ್ರಗಳೊಂದಿಗೆ)

ಅಮೃತಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನೈಪುಣ್ಯ ಬಗ್ಗೆ ಯಾವುದೇ ಮಾಹಿತಿ ಇರುವವರು ಕೃಪೆವಿಟ್ಟುhebbal ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕಾಗಿ ಮನವಿ ಮಾಡಲಾಗಿದೆ.

Related posts