ಬೀದಿ ನಾಯಿಗಳಿಗೆ ಊಟ ಹಾಕಲು ಹೋಗಿದ್ದ ಮಹಿಳೆಗೆ ದೌರ್ಜನ್ಯ – ಮೂವರ ವಿರುದ್ಧ ಕೇಸ್
ಬೆಂಗಳೂರು, ಜುಲೈ 28 2025
ಬೀದಿ ನಾಯಿಗಳಿಗೆ ಊಟ ಹಾಕಲು ಹೊರಟ್ಟಿದ್ದ ಒಂಟಿ ಮಹಿಳೆಯೊಬ್ಬರ ಮೇಲೆ ನಿಂದನೆ, ಹಲ್ಲೆ, ಲೈಂಗಿಕ ಕಿರುಕುಳ ಹಾಗೂ ಚಿನ್ನದ ಸರ ಲೂಟಿಗೀಡಾದ ಘಟನೆ ಬೆಂಗಳೂರಿನ ಲಕ್ಷ್ಮಯ್ಯ ಗಾರ್ಡನ್ ಪ್ರದೇಶದಲ್ಲಿ ನಡೆದಿದೆ.
ದೂರಿನ ಪ್ರಕಾರ, ಜೂನ್ 17 ರಂದು ರಾತ್ರಿ 9:15ರ ಸುಮಾರಿಗೆ ಮಹಿಳೆ ಕೋಗಿಲು ಕ್ರಾಸ್, ಲಕ್ಷ್ಮಯ್ಯ ಗಾರ್ಡನ್, 7ನೇ ಕ್ರಾಸ್, ಮನೆ ನಂ.97 ಹತ್ತಿರದ ರಸ್ತೆಬದಿ ಹೋದಾಗ ಮನೆ ನಂ.96 ರ ನಿವಾಸಿಗಳಾದ ರಮೇಶ್, ಅಶ್ವಿನಿ, ಲಕ್ಷ್ಮೀ ಹಾಗೂ ಇನ್ನಿಬ್ಬರು ಸೇರಿಕೊಂಡು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಕೈಗಳಿಂದ ಹಲ್ಲೆ ಮಾಡಿ, ರಮೇಶ್ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಗಳದ ಸಂದರ್ಭದಲ್ಲಿ ಮಹಿಳೆಯ ಡ್ರೈಮೆಂಡ್ ಪೆಂಡೆಂಟ್ ಇರುವ ಚಿನ್ನದ ಸರವನ್ನು ಬಲವಂತವಾಗಿ ಎಳೆದಿದ್ದು, ಈ ಗಲಾಟೆಯಲ್ಲಿ ಆಕೆಯ ಐಫೋನ್ ನೆಲಕ್ಕೆ ಬಿದ್ದು ಹಾನಿಯಾಗಿದೆ.
ಈ ಸಂಬಂಧ ಮಹಿಳೆ ಬಿಎಸ್‌ಸಿ ನಂ. 428/2025ರಂತೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ.

