ಸುದ್ದಿ 

ಕನ್ನಡ ಚಲನಚಿತ್ರ ಉದ್ಯೋಗಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 49 ವರ್ಷದ ಗಂಡ ನಾಪತ್ತೆ – ಪತ್ನಿಯಿಂದ ಸಂಪಿಗೆಹಳ್ಳಿ ಪೊಲೀಸ್ ದೂರು

Taluknewsmedia.com

ಬೆಂಗಳೂರು, ಜುಲೈ 29:2025
ನಗರದ ರಾಚೇನಹಳ್ಳಿ ಮೂಲದ ಮಹಿಳೆಯೊಬ್ಬರು ತಮ್ಮ ಗಂಡ ನಾಪತ್ತೆಯಾಗಿ ಹಲವು ದಿನಗಳಾದರೂ ಮನೆಗೆ ವಾಪಸ್ಸಾಗದ ಹಿನ್ನೆಲೆಯಲ್ಲಿ, ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಫಿರ್ಯಾದಿನ ಪ್ರಕಾರ, ಪತ್ನಿ ರಶೀದ ಮಸೀದಿ ಹತ್ತಿರ, ಅಮರಜ್ಯೋತಿ ಲೇಔಟ್, ರಾಚೇನಹಳ್ಳಿ, ಮೈನ್ ರೋಡ್ ಬೆಂಗಳೂರು ವಿಳಾಸದಲ್ಲಿ ತನ್ನ ಗಂಡ ಮತ್ತು ನಾಲ್ಕು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಕಾಣೆಯಾದ ವ್ಯಕ್ತಿ ಶ್ರೀ ಆಸಾನಂ ಪಾಷ (49), ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದರು.

ಜೂನ್ 29, 2025ರ ರಾತ್ರಿ ಪಾಷ ಅವರು ಮನೆಗೆ ಬಂದಿದ್ದರೂ, ಜುನ್ 30ರ ಬೆಳಿಗ್ಗೆ ಸುಮಾರು 4 ಗಂಟೆಯಿಂದ ಅವರು ಕಾಣೆಯಾಗಿದ್ದು, ಅವರ ಮೊಬೈಲ್‌ಗೆ ಸಂಪರ್ಕ ಸಾಧಿಸಿದಾಗ ಅದು ಸ್ವಿಚ್ ಆಫ್ ಆಗಿತ್ತು. ಸಂಬಂಧಿಕರು, ಸ್ನೇಹಿತರು ಹಾಗೂ ಪರಿಚಿತರ ಬಳಿ ಮಾಹಿತಿ ಕೇಳಿದರೂ ಯಾವುದೇ ಸುಳಿವು ಸಿಕ್ಕಿಲ್ಲ.

ಶ್ರೀ ಪಾಷ ಅವರ ತಲೆ-ಬಾಯಿ ವಿವರ ಹೀಗಿದೆ: ಎತ್ತರ 5 ಅಡಿ 2 ಇಂಚು, ಮೈಬಣ್ಣ ಕಪ್ಪು, ಕೂದಲು ಕಪ್ಪು, ಅವರ ಮೇಲೆ ಯಾವುದೇ ವಿಶಿಷ್ಟ ಗುರುತು ಇಲ್ಲ. ಕಾಣೆಯಾದ ಸಂದರ್ಭದಲ್ಲಿ ಅವರು ಲೈಟ್ ಬೂದಿಯ ಬಣ್ಣದ ಜರ್ಕಿನ್ ಮತ್ತು ಕಪ್ಪು ಬಣ್ಣದ ಫಾರ್ಮಲ್ ಪ್ಯಾಂಟ್ ಧರಿಸಿದ್ದರು.

ಈ ಪ್ರಕರಣದ ಬಗ್ಗೆ ಸಂಪಿಗೆಹಳ್ಳಿಪೋಲೀಸರು ತನಿಖೆ ನಡೆಸುತ್ತಿದ್ದಾರೆ. ನಾಪತ್ತೆಯಾದ ವ್ಯಕ್ತಿ ಬಗ್ಗೆ ಯಾವುದೇ ಮಾಹಿತಿ ದೊರಕಿದರೆ, ಸಾರ್ವಜನಿಕರಿಗೆ ಸ್ಥಳೀಯ ಪೊಲೀಸ್ ಠಾಣೆಗೆ ತಕ್ಷಣವಾಗಿ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

Related posts