ಬೆಂಗಳೂರು ನಗರದ ನಿವೃತ್ತ ಶಿಕ್ಷಕಿಯ ಮಗ ಕಾಣೆಯಾಗಿದೆ – ಕುಟುಂಬದ ಆತಂಕ
ಬೆಂಗಳೂರು, ಜುಲೈ 29: 2025
ನಗರದ ಅಮರಜ್ಯೋತಿ ಲೇಔಟ್‌ನಲ್ಲಿ ನಿವಾಸಿಸುತ್ತಿರುವ ನಿವೃತ್ತ ಶಿಕ್ಷಕಿಯವರು ತಮ್ಮ 45 ವರ್ಷದ ಎರಡನೇ ಮಗ ಶ್ರೀ ಸಿ.ಎಂ. ಚಂದ್ರು ಕಾಣೆಯಾಗಿರುವ ಕುರಿತು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಚಂದ್ರು ಕಳೆದ ಕೆಲ ದಿನಗಳಿಂದ ಮನೆಯತ್ತ ಬಾರದೇ ಹೊರಗಿನ ಬಾಡಿಗೆ ಮನೆ ಮತ್ತು ಹೊಟೇಲ್‌ಗಳಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.
ಕಮಲಮ್ಮ ಅವರ ಪ್ರಕಾರ, ಚಂದ್ರು schizophrenia ಕಾಯಿಲೆಯಿಂದ ಬಳಲುತ್ತಿದ್ದು, ಜೂನ್ 7 ರಿಂದ ಮನೆಗೆ ಬಾರದೆ ಓಡಿಹೋಗಿದ್ದ. ಜುಲೈ 26 ರಂದು ಅವರ ಅಣ್ಣ ಯು.ಎಸ್.ಎ ಯಿಂದ ಬೆಂಗಳೂರಿಗೆ ಬಂದು ಚಂದ್ರುವಿಗೆ ವಾಯ್ಸ್ ಕಾಲ್ ಮಾಡಿದಾಗ, “ನಾನು ಬೇರೆ ಕಡೆ ಹೋಗುತ್ತಿದ್ದೇನೆ, ನಾನಿರುವ ಸ್ಥಳವನ್ನು ನಿಮಗೆ ಹೇಳಲ್ಲ” ಎಂದು ಹೇಳಿದ್ದಾನೆ. ಬಳಿಕ ಚಂದ್ರುವು ಅವರ ಕರೆಗಳಿಗೆ ಪ್ರತಿಕ್ರಿಯೆ ನೀಡಿಲ್ಲ.
ಮಗನ ಪತ್ತೆಗಾಗಿ ಕುಟುಂಬದವರು ಸಂಬಂಧಿಕರು, ಸ್ನೇಹಿತರು ಹಾಗೂ ಪರಿಚಿತರಲ್ಲಿ ವಿಚಾರಣೆ ನಡೆಸಿದರೂ ಚಂದ್ರುವಿನ ಬಗ್ಗೆ ಯಾವುದೇ ಸುಳಿವು ಸಿಗದ ಕಾರಣ ಸಂಪಿಗೆಹಳ್ಳಿ ಪೊಲೀಸರಿಗೆ ದೂರು ನೀಡಲಾಗಿದೆ.
ಕಾಣೆಯಾದ ವ್ಯಕ್ತಿಯ ವಿವರಗಳು ಈ ರೀತಿಯಿವೆ:
ಹೆಸರು: ಸಿ.ಎಂ. ಚಂದ್ರು
ವಯಸ್ಸು: 45 ವರ್ಷ
ಎತ್ತರವ: 5 ಅಡಿ 9 ಇಂಚು
ಮೈಕಟ್ಟು: ದೃಢ
ಕೂದಲು: ಕಪ್ಪು ಮತ್ತು ಬಿಳಿ ಮಿಶ್ರ
ಧರಿಸಿದ್ದ ಬಟ್ಟೆ: ಕಪ್ಪು ಟೀ ಶರ್ಟ್ ಮತ್ತು ಭೂ ಬಣ್ಣದ ಪ್ಯಾಂಟ್
ಮಾತನಾಡುವ ಭಾಷೆ: ಕನ್ನಡ, ಇಂಗ್ಲಿಷ್, ಹಿಂದಿ
ವಿಶೇಷ ಗುರುತು: ಇಲ್ಲ
ಈ ವ್ಯಕ್ತಿಯ ಬಗ್ಗೆ ಮಾಹಿತಿ ಇರುವವರು ದಯವಿಟ್ಟು ಸಂಪಿಗೆಹಳ್ಳಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಕುಟುಂಬದವರು ವಿನಂತಿಸಿಕೊಂಡಿದ್ದಾರೆ.

