ದಾಸರಹಳ್ಳಿಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ದೀಪಕ್ ಬಂಧನ
ಬೆಂಗಳೂರು, ಜುಲೈ 29:2025
ದಾಸರಹಳ್ಳಿ ನಾರ್ಥ ಹೀಲ್ಡ್ ಬಳಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಅಮೃತಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ದೀಪಕ್ ಎಂದು ಗುರುತಿಸಲಾಗಿದೆ.
ಅಮೃತಹಳ್ಳಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಾ ಎಸ್ಐ ವಿದ್ಯಾಶ್ರೀ ಎಸ್.ಕೆ ಅವರು ನೀಡಿದ ದೂರಿನಂತೆ, 26 ಜುಲೈ 2025ರಂದು ಮುಂಜಾನೆ 3.15ರ ಸಮಯದಲ್ಲಿ ಒಂದು ಖಚಿತ ಮಾಹಿತಿಯ ಮೇರೆಗೆ ಅಮೃತಳ್ಳಿ ಪೊಲೀಸರು ದಾಸರಹಳ್ಳಿ ನಾರ್ಥ ಹೀಲ್ಡ್ ಖಾಲಿ ಜಾಗದ ಬಳಿ ದೀಪಕ್‌ನನ್ನು ವಶಕ್ಕೆ ಪಡೆದರು.
ಅವನ ಬಳಿ ಇದ್ದ ಕಾಲೇಜ್ ಬ್ಯಾಗ್‌ನ್ನು ಪರಿಶೀಲಿಸಿದಾಗ, ಅದರೊಳಗೆ ನಿಷೇಧಿತ ಮಾದಕ ವಸ್ತು – ಗಾಂಜಾ ಪತ್ತೆಯಾಯಿತು. ದೀಪಕ್ ಈ ಗಾಂಜಾವನ್ನು ಸಾರ್ವಜನಿಕರು ಮತ್ತು ಯುವಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದನೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಆರೋಪಿ ವಿರುದ್ಧ ಮಾದಕವಸ್ತು ನಿಷೇಧಕ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅಮೃತಳ್ಳಿ ಪೊಲೀಸರಿಂದ ಪ್ರಕರಣ ದಾಖಲಾಗಿ ತನಿಖೆ ಮುಂದುವರಿಯುತ್ತಿದೆ.

