ಸುದ್ದಿ 

ನೆಂಚರೊಲು ಗ್ರಾಮದಲ್ಲಿ ಗೃಹಿಣಿ ಕಾಣೆಯಾದ ಘಟನೆ: ತನಿಖೆ ಆರಂಭಿಸಿದ ಪೊಲೀಸರು

Taluknewsmedia.com

ಬೆಂಗಳೂರು ಗ್ರಾಮಾಂತರ ಜುಲೈ 29 –2025
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡ ತಾಲೂಕಿನ ನೆಂಚರೊಲು ಗ್ರಾಮದಲ್ಲಿ ಇತ್ತೀಚೆಗೆ ಗೃಹಿಣಿ ಮೌನಿಶಾ (ವಯಸ್ಸು ಸುಮಾರು 28) ಕಾಣೆಯಾಗಿರುವ ಘಟನೆ ನಡೆದಿದೆ. ಪತಿ ನೀಡಿದ ದೂರಿನ ಪ್ರಕಾರ, ಮೌನಿಶಾ ಅವರು ಜುಲೈ 13 ರಂದು ಸಂಜೆ 5 ಗಂಟೆಗೆ ಮನೆ ಬಿಟ್ಟು ಹೊರಡಿದ್ದು, ಜುಲೈ 16 ರಂದು ಬೆಳಿಗ್ಗೆ 10 ಗಂಟೆಯವರೆಗೆ ಯಾವ ಸುಳಿವು ಸಿಕ್ಕಿಲ್ಲ.

ಮೌನಿಶಾ ಅವರು ಪೋತಲಪ್ಪ ಎಂಬುವರ ಪುತ್ರನ ಜೊತೆ ಏಳು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ನಾಲ್ಕು ವರ್ಷದ ಗಂಡುಮಕ್ಕಳೂ, ಒಂದು ವರ್ಷದ ಹೆಣ್ಣುಮಕ್ಕಳೂ ಇದ್ದಾರೆ. ಪತ್ನಿಯು ಅನಿರೀಕ್ಷಿತವಾಗಿ ಮನೆ ಬಿಟ್ಟು ಹೋಗಿದ್ದು, ಸಂಬಂಧಿಕರು ಮತ್ತು ಪರಿಚಿತರ ಮನೆಗಳಲ್ಲಿ ಹುಡುಕಿದರೂ ಯಾರಿಗೂ ಸುಳಿವು ಸಿಕ್ಕಿಲ್ಲ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪತಿ ರಾಜನಕುಂಟೆ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದು, ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 217/2025ರಂತೆ ಎಫ್‌ಐಆರ್ ದಾಖಲಿಸಲಾಗಿದೆ. polisigalu ಭಾರತೀಯ ದಂಡ ಸಂಹಿತೆ ಅನ್ವಯ ಪ್ರಕರಣವನ್ನು ದಾಖಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪೊಲೀಸರ ಸಹಾಯದೊಂದಿಗೆ ಮೌನಿಶಾ ರವರ ಪತ್ತೆ ಕಾರ್ಯ ನಡೆಯುತ್ತಿದೆ. ಸಾರ್ವಜನಿಕರಿಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಲು ಮನವಿ ಮಾಡಲಾಗಿದೆ.

Related posts