ಸುದ್ದಿ 

ಬೀರೇಶ್ವರಪುರ ಗ್ರಾಮದಲ್ಲಿ ನಿರ್ಮಾಣವಾಗಲಿದೆ ಶ್ರಮಿಕ ವಸತಿ ಶಾಲೆ..

Taluknewsmedia.com

ನಾಗಮಂಗಲ: ತಾಲೂಕಿನ ಬೀರೇಶ್ವರಪುರ ಗ್ರಾಮದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹಿಸುವ ದೃಷ್ಟಿಯಿಂದ ಮಂಜೂರಾಗಿರುವ ಶ್ರಮಿಕ ವಸತಿ ಶಾಲೆ ನಿರ್ಮಾಣವಾಗಲಿದೆ.

ರಾಜ್ಯದ ೩೧ ಜಿಲ್ಲೆಗಳಲ್ಲಿ ತಲಾ ಒಂದರಂತೆ ಒಟ್ಟು ೧೧೨೫.೨೫ ಕೋಟಿ ವೆಚ್ಚದಲ್ಲಿ ಶ್ರಮಿಕ ವಸತಿ ಶಾಲೆಗಳು ನಿರ್ಮಾಣವಾಗಲಿವೆ. ೬ ರಿಂದ ೧೨ನೇ ತರಗತಿಯವರೆಗೆ ಗುಣಾತ್ಮಕ ಶಿಕ್ಷಣ ಈ ಶಾಲೆಗಳಲ್ಲಿ ದೊರೆಯಲಿದೆ. ಬೀರೇಶ್ವರಪುರ ಗ್ರಾಮದಲ್ಲಿ ತಾಲೂಕು ಆಡಳಿತದಿಂದ ಗುರುತಿಸಲಾಗಿರುವ ೭ ಎಕರೆ ಜಮೀನಿನಲ್ಲಿ ೩೧ ಕೋಟಿ ರೂ ವೆಚ್ಚದಲ್ಲಿ ಶಾಲಾ ಕಟ್ಟಡ ಮತ್ತು ೧ ಕೋಟಿ ರೂ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ ೩ ಕೋಟಿ ರೂ ವೆಚ್ಚದಲ್ಲಿ ಪೀಠೋಪಕರಣ ಹಾಗೂ ೭೫ ಲಕ್ಷ ರೂ ವೆಚ್ಚದಲ್ಲಿ ಪ್ರಯೋಗಶಾಲಾ ಉಪಕರಣಗಳ ಪೂರೈಕೆಯಾಗಲಿದೆ.

ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಾಗಿ ನೊಂದಾಯಿಸಲ್ಪಟ್ಟಿರುವ ಕಾರ್ಮಿಕರ ಮಕ್ಕಳಿಗೆ ಈ ಶಾಲೆಗಳಲ್ಲಿ ಪ್ರಥಮ ಪ್ರಾಶಸ್ತ್ಯದ ದಾಖಲಾತಿ ದೊರೆಯಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ವರದಿ: ಕೌಶಿಕ್ ತಟ್ಟೇಕೆರೆ.

Related posts