ಪದವೀಧರರ ಆಲೋಚನೆಗಳು ಯೋಜನೆಗಳು ದೇಶಕ್ಕೆ ಕೊಡುಗೆಯಾಗಬೇಕಿದೆ : ಡಾ.ಸೋಮನಾಥ್
ನಾಗಮಂಗಲ : ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪದವೀಧರರ ಸಂಖ್ಯೆ ಹೆಚ್ಚುತ್ತಿದೆ ಹೆಚ್ಚುತ್ತಿರುವ ಪದವೀಧರರ ಆಲೋಚನೆಗಳು ಯೋಜನೆಗಳು ದೇಶಕ್ಕೆಕೊಡುಗೆಯಾಗಬೇಕು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ ) ಮಾಜಿ ಅಧ್ಯಕ್ಷ ಹಾಗೂ ಚಾಣಕ್ಯ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಆದ ಡಾ.ಎಸ್.ಸೋಮನಾಥ್ ಅಭಿಪ್ರಾಯ ಪಟ್ಟರು. ತಾಲ್ಲೂಕಿನ ಬಿ.ಜಿ ನಗರದಲ್ಲಿರುವ ಆದಿಚುಂಚನಗಿರಿ ವಿಶ್ವ ವಿದ್ಯಾಲಯದ ಐದನೇ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದರು.

ಇಲ್ಲಿಯವರೆಗೆ ನಿಮ್ಮ ಬದುಕಿನ ದಿಕ್ಕೇ ಬೇರೆ. ಪದವೀಧರರಾದ ನಿಮಗೆ ಇಂದಿನಿಂದ ಖಾಸಗಿ ಹಾಗೂ ವೃತ್ತಿಪರ ಬದುಕು ತೆರೆದುಕೊಳ್ಳುತ್ತಾ ಹೋಗುತ್ತದೆ. ಇಂದಿನಿಂದ ನಿಮ್ಮಲ್ಲಿರುವ ಜ್ಞಾನದ ಜೊತೆಗೆ ಕೌಶಲ್ಯ ಕೂಡ ನೆರವಿಗೆ ಬರುತ್ತದೆ. ನಿಮ್ಮ ವೃತ್ತಿ ಹಾಗೂ ಖಾಸಗಿ ಜೀವನದಲ್ಲಿ ವ್ಯಕ್ತಿತ್ವ, ಪ್ರಾಮಾಣಿಕತೆ ಮತ್ತು ಸಮಗ್ರತೆಗೆ ಮನ್ನಣೆ ನೀಡಿ ಎಂದರು. ಇಂದು ಭಾರತ ವಿಶ್ವಕ್ಕೆ ತನ್ನ ಸಂಸ್ಕೃತಿಯ ಮೂಲಕ ಅನೇಕ ಕೊಡುಗೆ ನೀಡಿದೆ. ಅದೇ ರೀತಿ ಇಂದು ಭಾರತೀಯರು ಮಂಗಳಯಾನ ಮತ್ತು ಚಂದ್ರಯಾನ ೩ ಯಶಸ್ವಿಯಾಗುವ ಮೂಲಕ ಜಗತ್ತೆ ನಿಬ್ಬೆರಗಾಗುವಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಯ ಉತ್ತುಂಗದಲ್ಲಿದ್ದಾರೆ.

ಇಂದು ಅನೇಕ ಸಮಸ್ಯೆಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ ಮೂಲಕ ಬಗೆಹರಿಸಲು ಸಾಧ್ಯವಾಗುತ್ತಿದೆ ಎಂದರು. ಇಂದು ಬಾಹ್ಯಾಕಾಶದಲ್ಲಿ ಅನೇಕ ಬದಲಾವಣೆಗಳಾಗಿವೆ. ಆರೋಗ್ಯ ಔಷಧ ಕ್ಷೇತ್ರದಲ್ಲೂ ಅನೇಕ ಬದಲಾವಣೆಗಳಾಗಿವೆ. ನಾವು ಗರ್ವ ಪಡುವಂತಹ ಸನ್ನಿವೇಶವನ್ನು ಇಂದು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ್ದೇವೆ. ಹಣಕಾಸು ನಿಯಂತ್ರಣಕ್ಕೆ ಕಪ್ಪು ಸರಪಳಿ ವ್ಯವಸ್ಥೆ ತಯಾರಾಗಿದೆ. ಯಶಸ್ಸು ಸಿಕ್ಕಿದಾಗ ಅದಕ್ಕೆ ವಿನಮ್ರತೆ ಬೆರೆತರೆ ಅದು ಯಶಸ್ವಿ ಬದುಕಿಗೆ ಸಾರ್ಥಕತೆ ದೊರೆತಂತೆ ಎನ್ನುತ್ತಾ ಚಿನ್ನದ ಪದಕ ವಿಜೇತರಿಗೆ ಹಾಗೂ ಪದವೀಧರರಿಗೆ ಶುಭಾಶಯ ಕೋರಿದರು.ಕರ್ನಾಟಕ ಸರ್ಕಾರದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ ಪದವೀಧರರು ದೇಶದ ಆಸ್ತಿಗಳಾಗಿ. ಎಲ್ಲಾ ವಿಶ್ವವಿದ್ಯಾಲಯದ ಘಟಿಕೋತ್ಸವ ಒಂದೆಡೆಯಾದರೆ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಘಟಿಕೋತ್ಸವದ ಬೆಲೆಯೇ ಬೇರೆ. ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ಕನಸನ್ನು ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ನನಸು ಮಾಡುತ್ತಿದ್ದಾರೆ ಆದಿಚುಂಚನಗಿರಿ ವಿದ್ಯಾ ಸಂಸ್ಥೆ ಮಹತ್ತರ ಸಾಧನೆ ಮಾಡಿದೆ. ಪದವೀಧರರು ದೇಶಕ್ಕೆ ಕೊಡುಗೆ ಕೊಡುವತ್ತ ಗಮನಹರಿಸಿ.

ಪದವೀಧರರಾದ ನಿಮಗೆ ಇಂದಿನಿಂದ ಸವಾಲುಗಳು ಹೆಚ್ಚು. ಶಿಕ್ಷಣದ ಜೊತೆಗೆ ಜ್ಞಾನ ಕೂಡ ಅಗತ್ಯ. ಇಷ್ಟು ದೊಡ್ಡ ವಿದ್ಯಾ ಸಂಸ್ಥೆ ನಮ್ಮ ಹೆಮ್ಮೆಯ ಗರಿಮೆ ಎಂದರು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಚಿನ್ನದ ಪದಕ ವಿಜೇತರಿಗೆ, ರ್ಯಾಂಕ್ ಪಡೆದವರಿಗೆ ಹಾಗೂ ಪಿಎಚ್ಡಿ ಪಡೆದ ಸಾಧಕರಿಗೆ ಶುಭಾಶಯ ಕೋರಿ ಆಶೀರ್ವದಿಸಿದರು. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಪುರಸ್ಕಾರ : ಮೆಡಿಸಿನ್ ವಿಭಾಗದಲ್ಲಿ ರೇಖ ಎಸ್ ರವರಿಗೆ ಕಣಗಲ್ ಎಲ್ ಸತ್ಯನಾರಾಯಣ ದತ್ತಿ ಪುರಸ್ಕಾರ. ನರ್ಸಿಂಗ್ ವಿಭಾಗದಲ್ಲಿ ಮಂಪಿ ಡೈ ರವರಿಗೆ ಚಂದ್ರಶೇಖರ್ ಶೆಟ್ಟಿ ದತ್ತಿ ಪುರಸ್ಕಾರ. ಓಬಿಜಿ ವಿಭಾಗದಿಂದ ದೀಕ್ಷಿತ ಕೆ ಅಯ್ಯರ್ ರವರಿಗೆ ನಂಜಮ್ಮ ಲಕ್ಷ್ಮೇಗೌಡ ದತ್ತಿ ಪುರಸ್ಕಾರ. ಮೆಡಿಸಿನ್ ವಿಭಾಗದಿಂದ ದರ್ಶನ್ ಹೆಚ್ ರವರಿಗೆ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಮತ್ತು ಸುಶೀಲ ಜಯರಾಮ್ ದತ್ತಿ ಪುರಸ್ಕಾರ . ಜಯಪ್ರಕಾಶ್ ನಾಯರ್ ಸಂಶೋಧನಾ ಶ್ರೇಷ್ಠ ಪ್ರಶಸ್ತಿಯನ್ನು ಪ್ರೊ.ಪ್ರಕಾಶ್ ಎನ್ ಗೌಂಡಣ್ಣನವರ್ರವರು ಮುಡಿಗೇರಿಸಿಕೊಂಡರು. ಚಿನ್ನದ ಪದಕ ವಿಜೇತರು : ಮೆಡಿಸಿನ್ ವಿಭಾಗ : ಡಾ. ದೀಕ್ಷಿತ ಕೆ ಅಯ್ಯರ್. .ಇಂಜಿನಿಯರಿಂಗ್ ವಿಭಾಗ : ಬಿಂದು ವಿ ಆರ್ .ಬಿ.ವರ್ಷ ಲಿಖಿತ್ ಆರ್ ಅರ್ಬಿಯ ಮುಸ್ಕಾನ್ ಪ್ರೀತಿ ಕೆ ಡಿ ರೇಖಾರಾಣಿ ನಿತ್ಯಶ್ರೀ ಎಸ್ ಜೈನ್ ಮನೋಜ್ ಗೌಡ ಡಿ ಕೆ ಪುನೀತ್ ಕುಮಾರ್ ಉಲ್ಲಾಸ್ ಎಸ್ ಜೀವಿತ ಆರ್ ಜ್ಞಾನ ಡಿ ಎನ್*ಡಾಕ್ಟರೇಟ್ ಪುರಸ್ಕೃತರು* : ಡಾ. ಅದಾರಿ ರಮೇಶ್. ಡಾ. ಶಿವಕುಮಾರ್ ಯಾದವ್. ಡಾ. ಮಹೇಶ್ ಡಿ ಎಸ್. ಡಾ. ಅಂಜಲಿ ಬಿ ವಿ ಡಾ. ಕವಿತಾ ಬಿ ಸಿ ಡಾ. ಮಲ್ಲಮ್ಮ ಟಿ. ಡಾ. ಯೋಗಾನಂದ ಶ್ರೇಷ್ಠ ಡಾ. ಮಹಾಲಿಂಗೇಗೌಡ ಎಚ್ ಆರ್ ಡಾ. ಮಹಮದ್ ಮಸ್ರಿ ಡಾ. ಪ್ರಭಾವತಿ ಕೆ ಡಾ. ರವಿ ಎಲ್ಎಸ್ ಡಾ. ತ್ರಿಪಾತಿ ಅಮೃತಾನಂದ ಎಸ್ ಡಾ. ಪ್ರಕಾಶ್ ಕುಮಾರ್ ಬಿ ಡಾ. ಸತೀಶ ಜಿ ಡಾ. ಯಶವಂತ್ ಜಿ ಡಾ. ರಘು ಕುಮಾರ್ ಬಿ ಎಸ್ ಡಾ. ಶ್ವೇತ ಕೆ ಆರ್ ಶೋಭನ ಎನ್ . ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎನ್.ಎಸ್.ರಾಮೇಗೌಡ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಎನ್.ಶ್ರೀಧರ, ಕುಲಸಚಿವ ಡಾ.ಸಿ.ಕೆ.ಸುಬ್ಬರಾಯ, ರಿಜಿಸ್ಟ್ರಾರ್ ಡಾ.ನಾಗರಾಜ್, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು.
ವರದಿ: ಕೌಶಿಕ್ ತಟ್ಟೇಕೆರೆ

