su_from_so ಸುಲೋಚನ_ಫ್ರಾಮ್_ಸೋಮೇಶ್ವರ
su_from_so ಸುಲೋಚನ_ಫ್ರಾಮ್_ಸೋಮೇಶ್ವರ
ಬೇರೆ_ಯಾರೋ_ನಿರ್ದೇಶಕರಾಗಿದ್ದರೆ_ಈ_ಚಿತ್ರವನ್ನು_ಕೇವಲ_ತುಳು_ಭಾಷೆಗೆ_ಸೀಮಿತ_ಮಾಡುತ್ತಿದ್ದರೇನೂ_ಈ ವಿಷಯದಲ್ಲಿ ನಿರ್ದೇಶಕರ ಜಾಣ್ಮೆ ಅಡಗಿದೆ.
ಕೊಟ್ಟ ಹಣಕ್ಕೆ ಮೊಸವೇನಿಲ್ಲ! ಚಿತ್ರ ನೋಡಿ ನಕ್ಕು ಬರುವುದು ಖಂಡಿತಾ. ಸಾಮಾನ್ಯವಾಗಿ ಹೇಳೋದೇ ಆದರೆ ನಮ್ಮ ಉತ್ತರ ಕರ್ನಾಟಕದವರಿಗೆ ರುಚಿಸದು ನನ್ನ ಪ್ರಕಾರ. ಆದರೆ ಮಲೆನಾಡಿನವರಿಗೆ ಮೃಷ್ಟಾನ್ನ ಭೋಜನ. ಚಿತ್ರದಲ್ಲಿ ಅಂತದ್ದು ಹೊಸ ವಿಷಯವೇನು ಹೇಳದೆ ಇದ್ದರೂ ಸಾಮಾನ್ಯರ ಜೊತೆಗೂಡಿ ಒಂದು ಅಸಾಮಾನ್ಯ ಚಿತ್ರವನ್ನು ನಿರ್ಮಿಸಬಹುದುದೆನ್ನುವುದಕ್ಕೆ ಇದೊಂದು ಉದಾಹರಣೆ. ಅಬ್ಬರದ ಸಂಗೀತವಿಲ್ಲ, ಬೇಕೆಂದೇ ಸೃಟ್ಟಿಸಿದ ದೃಶ್ಯ ವ ಹಾಡುಗಳಿಲ್ಲ. ಕರಾವಳಿಯಲ್ಲಿ ಈಗಲೂ ಚಾಲ್ತಿಯಲ್ಲಿರುವ ಮೂಢನಂಬಿಕೆಗಳ ಮೇಲೆ ಕಥೆ ಸಾಗುತ್ತೆ. ಯಾರ್ ಹೀರೋ, ಯಾರ್ ಹೀರೋಹಿನ್ ಅಂತಾ ನೀವೇ ಊಹಿಸಕೊಳ್ಳಬೇಕು ಅಷ್ಟರಮಟ್ಟಿಗಿನ ಸಾಮಾನ್ಯ ಚಿತ್ರ. ನೋಡಿಸಿಕೊಂಡು ಹೋಗುವ ವೇಗ, ಸೆಳೆತ ಚಿತ್ರಕ್ಕಿದೆ. ಈ ವರ್ಷದ ಹೊಸಬರ ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಡಬೇಕು ಅಂತಿದ್ದರೆ ಇದೇ ಮೊದಲ ಚಿತ್ರವೆಂದು ಧಾರಾಳವಾಗಿ ಹೇಳಬಹುದು.
Vijay Iliger

