ಸುದ್ದಿ 

ವಾಸಸ್ಥಳದ ಪಾರ್ಕಿಂಗ್ ವಿಚಾರವಾಗಿ ಜಗಳ – ವ್ಯಕ್ತಿಗೆ ಹಲ್ಲೆ, ಮೂವರು ಸಂಬಂಧಿಕರ ಸಹ ಭಾಗವಹಿಕೆ

Taluknewsmedia.com

ಬೆಂಗಳೂರು, ಜುಲೈ 30, 2025:

ನಗರದ ಒಂದೇ ಅಪಾರ್ಟ್ಮೆಂಟ್ ಪಾರ್ಕಿಂಗ್ ಸಮಸ್ಯೆ ಇತ್ತೀಚೆಗೆ ಗಂಭೀರ ಹಲ್ಲೆಗೆ ಕಾರಣವಾಗಿದೆ. ಯಲಹಂಕ ಹೋಬಳಿಯ ಫ್ಲಾಟ್ ಒಂದರಲ್ಲಿ ವಾಸವಿದ್ದ ಪುರುಷನೊಬ್ಬನಿಗೆ ಅವನ ಪಾರ್ಕಿಂಗ್ ಸ್ಥಳವನ್ನು ಅಕ್ರಮವಾಗಿ ಅತಿಕ್ರಮಿಸಿದ್ದ ಇನ್ನೊಬ್ಬ ನಿವಾಸಿಯಿಂದ ಜೀವ ಬೆದರಿಕೆ ಹಾಗೂ ಶಾರೀರಿಕ ಹಲ್ಲೆ ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

2024ರ ಮಾರ್ಚ್ ತಿಂಗಳಲ್ಲಿ ಫ್ಲಾಟ್ ಖರೀದಿಸಿದ ದಿನೇಶ್ ಎಂ ಆರ್ ಅವರು, ಆ ಸಮಯದಲ್ಲಿ 2 ಕಾರ್ ಪಾರ್ಕಿಂಗ್ ಸ್ಥಳಗಳನ್ನು ಹೊಂದಿದ್ದರು. ಆದರೆ ಕಳೆದ 6 ತಿಂಗಳಿನಿಂದ ಜಾರ್ಜ್ ಸ್ಟೀಫನ್ ಎಂಬ ವ್ಯಕ್ತಿ ದಿನೇಶ್ ಅವರ ಪಾರ್ಕಿಂಗ್ ಸ್ಥಳದಲ್ಲಿ ತನ್ನ ಕಾರನ್ನು ನಿಲ್ಲಿಸುತ್ತಿದ್ದು, ಎಷ್ಟೇ ಮನವಿ ಮಾಡಿದರೂ ಸ್ಥಳ ತೆರವು ಮಾಡಿಲ್ಲ.

ಜುಲೈ 28ರಂದು ಬೆಳಿಗ್ಗೆ 10 ಗಂಟೆಗೆ, ದಿನೇಶ್ ಎಮ್ ಆರ್ ಅವರು ಸ್ಥಳಕ್ಕೆ ತೆರಳಿ ಪಾರ್ಕಿಂಗ್ ತೆರವು ಮಾಡುವಂತೆ ಕೇಳಿದಾಗ, ಜಾರ್ಜ್ ಸ್ಟೀಫನ್ ಜೀವ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಬಳಿಕ ಹಲ್ಲೆ ನಡೆಸಿದ ಜಾರ್ಜ್ ಹಾಗೂ ಆತನ ಸಂಬಂಧಿಕರೂ ಸಹ ಭಾಗಿಯಾಗಿ ದಿನೇಶ್ ಅವರಿಗೆ ಮುಖ, ಎದೆ ಮತ್ತು ಬೆನ್ನಿನ ಮೇಲೆ ಹಲ್ಲೆ ನಡೆಸಿದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂದರ್ಭದಲ್ಲಿ ದಿನೇಶ್ ಅವರು ಮುಂದೆ ಇರುವ 3 ಹಲ್ಲುಗಳು ಉದುರಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪ್ರಕರಣ ಅಮೃತಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ

Related posts