ಸುದ್ದಿ 

ವರದಿಗಾರಿಕೆಗೂ ರೋಬೋಟ್ಗಳು ಲಗ್ಗೆಯಿಡುವ ಕಾಲ ಸನ್ನಿಹಿತ : ನಿರ್ಮಲಾನಂದಶ್ರೀ

Taluknewsmedia.com

ನಾಗಮಂಗಲ : ಪತ್ರಕರ್ತರು ಗುಡ್ಡಗಾಡು ಕಣಿವೆ ಯುದ್ಧ ಪ್ರವಾಹ ಭೀತಿಯ ಪ್ರದೇಶಗಳಿಗೂ ತೆರಳಿ ಸುದ್ದಿ ಪ್ರಕಟಿಸುವ ಸಂದಿಗ್ದತೆ ರೋಬೋಟ್ ಗಳಿಂದ ದೂರವಾಗಲಿದೆ. ಆಯಾ ಪ್ರದೇಶಗಳಲ್ಲಿ ಒಂದೊಂದು ರೋಬೋಟ್ ಸುದ್ದಿ ಪ್ರಕಟಿಸುವ ಕಾರ್ಯ ಮಾಡುವ ದಿನ ಸನ್ನಿಹಿತ ಎಂದು ಆದಿಚುಂಚನಗಿರಿ ಮಠಾಧೀಶರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಭವಿಷ್ಯ ನುಡಿದರು. ನಾಗಮಂಗಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ಶಿಕ್ಷಕರ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ಅಭಿನಂದನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಸತ್ಯ ನಿಖರ ಮತ್ತು ವಸ್ತುನಿಷ್ಠ ವರದಿಯನ್ನು ಹುಡುಕಿ ಪ್ರಕಟಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪತ್ರಿಕಾರಂಗವು ಸಂವಿಧಾನದ ನಾಲ್ಕನೇ ಅಂಗವಾಗಿ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಕರ್ತರು ಪೆನ್ ಮತ್ತು ಕ್ಯಾಮೆರಾಗಳನ್ನು ಸಮಾಜದ ಹಿತಕ್ಕಾಗಿ ಬಳಸಬೇಕು ಹಿಂದೆ ಶಿಕ್ಷಣ ಮುಖ್ಯವಾಗಿತ್ತು ಇಂದು ಕೌಶಲ್ಯ ಮುಖ್ಯವಾಗಿದೆ ಆದ್ದರಿಂದ ಪತ್ರಕರ್ತರು ಕಾಲಕ್ಕನುಗುಣವಾಗಿ ನವೀಕೃತ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ಅದಕ್ಕೆ ಪೂರಕವಾಗುವ ತರಬೇತಿ ಮತ್ತು ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಉದ್ಘಾಟನಾ ನುಡಿಗಳನ್ನಾಡಿದ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಪತ್ರಕರ್ತರು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ವಿಚಾರಗಳನ್ನು ಸುದ್ದಿಯನ್ನಾಗಿ ಪ್ರಕಟಿಸಿದರೆ ಜನರಿಗೆ ಉಪಯೋಗವಾಗುತ್ತದೆ ಹಿಂದಿನ ದಿನಗಳಲ್ಲಿ ಯಾವುದಾದರು ಪತ್ರಿಕೆಯಲ್ಲಿ ವರದಿ ಪ್ರಕಟವಾದರೆ ಅದು ವಿಧಾನಸಭೆಯಲ್ಲಿ ಚರ್ಚೆ ಆಗುತ್ತಿತ್ತು ಆ ವರದಿಗೆ ಜನಪ್ರತಿನಿಧಿಗಳು ಅಧಿಕಾರ ಶಾಹಿಗಳು ಉತ್ತರ ನೀಡಬೇಕಾಗಿತ್ತು.

ಆದರೆ ಈಗ ಅಂತಹ ವಾತಾವರಣ ಇಲ್ಲ ಈ ಪರಿಸ್ಥಿತಿ ಏಕೆ ಸೃಷ್ಟಿಯಾಗಿದೆ ಎಂದು ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ವೈದ್ಯ ಡಾ. ಶರತ್ ಕುಮಾರ್ ಶಿಕ್ಷಕ ಮುರಳೀಧರ ಪತ್ರಕರ್ತ ಎ ಹೆಚ್ ಬಾಲಕೃಷ್ಣ ಪ್ರಗತಿಪರ ರೈತ ವಿರೂಪಾಕ್ಷ ಮೂರ್ತಿ ಪತ್ರಿಕಾ ವಿತರಕ ರಾಮಣ್ಣ ಹಾಗೂ ಪೌರ ಕಾರ್ಮಿಕರಾದ ಪಾರ್ವತಮ್ಮರವರುಗಳನ್ನು ಅಭಿನಂದಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ್ ನಾಗಮಂಗಲ ತಹಶೀಲ್ದಾರ್ ಆದರ್ಶ್ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ ಎನ್ ನವೀನ್ ಕುಮಾರ್ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಮತ್ತೀಕೆರೆ ಜಯರಾಂ ಸೋಮಶೇಖರ್ ಕೆರಗೋಡು ಕೆ ಸಿ ಮಂಜುನಾಥ್ ಸಿ ಎನ್ ಮಂಜುನಾಥ್ ಬಿ ಪಿ ಪ್ರಕಾಶ್ ಆನಂದ್ ನಂಜುಂಡಸ್ವಾಮಿ ಕೆ ಸೀತಾರಾಮು ಇತರರಿದ್ದರು.

Related posts