ಸುದ್ದಿ 

ಅಪ್ಪನನ್ನು ನೋಡಿಕೊಳ್ಳುವ ವಿಚಾರಕ್ಕೆ ತಂಗಿ–ಅಕ್ಕ ನಡುವೆ ಜಗಳ; ಚಾಕು ಹಾಯ್ದು ಗಾಯಗೊಳಿಸಿದ ಮಗು

Taluknewsmedia.com

ಬೆಂಗಳೂರು ಗ್ರಾಮಾಂತರ , ಜುಲೈ 31:2025

ತಂದೆಯ ನೋಡಿಕೊಳ್ಳುವ ಜವಾಬ್ದಾರಿ ವಿಷಯದಲ್ಲಿ ಉಂಟಾದ ವೈಷಮ್ಯವು ಅಕ್ಕ–ತಂಗಿಯ ನಡುವೆ ಗಂಭೀರ ಜಗಳಕ್ಕೆ ಕಾರಣವಾಗಿ, ಕೊನೆಗೆ ಚಾಕು ಹಾಯ್ದು ಗಾಯಗೊಳಿಸಿದ ಘಟನೆ ಅವಲಹಳ್ಳಿಯಲ್ಲಿ ನಡೆದಿದೆ. ಈ ಸಂಬಂಧ ತಂಗಿ ಅನಸೂಯ ಅವರ ದೂರಿನ ಮೇರೆಗೆ ಮಂಜುಳಾ ಹಾಗೂ ಅವರ ಮಗ ಅಭಿಲಾಷ್ ವಿರುದ್ಧ ರಾಜನಕುಂಟೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಪಿಳ್ಳಪ್ಪ ಮತ್ತು ಲೇಟ್ ಆಂಜಿನಮ್ಮ ದಂಪತಿಗೆ ಐದು ಮಂದಿ ಮಕ್ಕಳಿದ್ದು, ರಮೇಶ್, ಕೃಷ್ಣಮೂರ್ತಿ, ರಾಜಮ್ಮ, ಮಂಜುಳಾ ಮತ್ತು ಅನಸೂಯ ಎಂಬವರು ಇದ್ದಾರೆ. ಪಿಳ್ಳಪ್ಪ ಅವರು ಜೀವಿತವಾಗಿದ್ದು, ಮಕ್ಕಳ ಜೊತೆಗೆ ವಾಸಿಸುತ್ತಿದ್ದಾರೆ. ಒಂದು ತಿಂಗಳ ಹಿಂದೆ ಮಂಜುಳಾ ಅವರು ತಂದೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದು, ಒಂದು ತಿಂಗಳ ನಂತರ ಮರಳಿ ಕಳುಹಿಸುವ ಭರವಸೆ ನೀಡಿದ್ದರು. ಆದರೆ ಸಮಯಾದ ನಂತರ ಕೂಡ ತಂದೆಯನ್ನು ಹಿಂತಿರುಗಿಸಲು ನಿರಾಕರಿಸಿದರು.

ದಿನಾಂಕ ಜುಲೈ 27, 2025 ರಂದು ಮಧ್ಯಾಹ್ನ 3.30 ಗಂಟೆಗೆ ಅನಸೂಯ, ಅವರ ಅಕ್ಕ ರಾಜಮ್ಮ, ರಾಜಮ್ಮನ ಮಗ ಲಕ್ಷ್ಮೀಕಾಂತ ಮತ್ತು ರವಿಯವರೊಂದಿಗೆ ಮಂಜುಳಾರವರ ಮನೆಗೆ ತೆರಳಿದಾಗ ಅವರು ಅಲ್ಲಿ ಇಲ್ಲದೆ, ಹತ್ತಿರದ ಜಮೀನಿನಲ್ಲಿ ಇದ್ದರು. ಅಲ್ಲಿ ಅನಸೂಯ ತಂದೆಯನ್ನು ಕರೆದುಕೊಂಡು ಹೋಗುವುದಾಗಿ ಹೇಳಿದಾಗ ಮಂಜುಳಾ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಎದೆಗೆ ಕೈ ಹಾಕಿ ಹೊಡೆದರು. ಅನಸೂಯ ಕೆಳಗೆ ಬಿದ್ದಾಗ ಮಂಜುಳಾರ ಮಗ ಅಭಿಲಾಷ್ ಬಂದು ಚಾಕುವಿನಿಂದ ಬಲ ಕಿವಿಯ ಹತ್ತಿರ ಹೊಡೆದು ಗಾಯಗೊಳಿಸಿದ್ದಾನೆ.

ಘಟನೆ ನಡೆಯುತ್ತಿರುವಾಗ ಅನಸೂಯ ಕಿರುಚಿದರೆ, ಅಭಿಲಾಷ್ “ಇನ್ನು ಮುಂದೆ ನಮ್ಮ ಊರಿಗೆ ಬಂದರೆ ಕೊಲೆ ಮಾಡುತ್ತೇನೆ” ಎಂದು0 ಜೀವ ಬೆದರಿಕೆ ಹಾಕಿದಂತೆ ದೂರಿನಲ್ಲಿ ಉಲ್ಲೇಖವಿದೆ. ಈ ವೇಳೆ ರಾಜಮ್ಮ ಮತ್ತು ಇನ್ನಿತರರು ಮಧ್ಯೆ ಬಿದ್ದು ಜಗಳವನ್ನು ಶಮನಗೊಳಿಸಿದ್ದಾರೆ.

ಈ ಕುರಿತು ಅನಸೂಯ ಅವರು ರಾಜನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದಮೇಲೆ, ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ನಂ. 221/2025 ರಂತೆ, IPC ಸೆಕ್ಷನ್‌ಗಳು 118(1), 115(2), 351(2), 351(3), 352, 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Related posts