ಚಿರಾಗ್ ಎಂಬ ಯುವಕನ ಸಂಧರ್ಭದಲ್ಲಿ ಯುವತಿ ಪಾಯಲ್ ಕಾಣೆಯಾದ ಪ್ರಕರಣ – ಯಲಹಂಕ ಪೊಲೀಸ್ ಠಾಣೆಯಲ್ಲಿ ಮಿಸ್‌ಯಿಂಗ್ ಪ್ರಕರಣ ದಾಖಲು
ಬೆಂಗಳೂರು, ಜುಲೈ 31 –2025
ರಾಜಸ್ಥಾನ ಮೂಲದ ಪಾಯಲ್ ಎಂಬ 19 ವರ್ಷದ ಯುವತಿ ಬೆಂಗಳೂರಿನ ಯಲಹಂಕದಿಂದ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪಾಯಲ್ ತಾಯಿ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಿಸ್ಸಿಂಗ್ ಪ್ರಕರಣವಾಗಿ ದಾಖಲಿಸಲಾಗಿದೆ.
ಪಾಯಲ್ ತಮ್ಮ ತಾಯಿಯೊಂದಿಗೆ ಕಳೆದ ಒಂದು ವರ್ಷದಿಂದ ಬೆಂಗಳೂರಿನ ಯಲಹಂಕ ಬಳಿ ಬಾಡಿಗೆ ಮನೆಯಲ್ಲಿದ್ದರೆಂದು ಹೇಳಲಾಗಿದೆ. ತಾಯಿ ಕಟ್ಟಿಗೇನಹಳ್ಳಿಯಲ್ಲಿ ಫ್ಯಾನಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಪಾಯಲ್ ತಂದೆ ಮದನ್ ಲಾಲ್ ಪ್ರಜಾಪತಿ ಅವರು 18 ವರ್ಷಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು.
ಪಾಯಲ್ ನಗರದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಅಧ್ಯಯನ ಮಾಡುತ್ತಿದ್ದರು. ಇತ್ತೀಚೆಗೆ ಪಾಯಲ್ ರಾಜಸ್ಥಾನ ಮೂಲದ ಚಿರಾಗ್ ಎಂಬ ಯುವಕನೊಂದಿಗೆ ಪರಿಚಯ ಹೊಂದಿದ್ದರು. ಈ ಸಂಬಂಧ ತಾಯಿ ಪಾಯಲ್‌ಗೆ ಬುದ್ಧಿವಾದ ಹೇಳಿದ್ದರು. 15 ದಿನಗಳ ಹಿಂದೆ ಚಿರಾಗ್ ಪಾಯಲ್ ಮನೆಯವರೆಗೂ ಬಂದು, “ನಿಮ್ಮ ಮಗಳನ್ನು ನನ್ನೊಂದಿಗೆ ಮದುವೆ ಮಾಡಿಸಿ” ಎಂದು ಜಗಳವಾಡಿದ್ದರೂ, ಕುಟುಂಬವಾಸಿಗಳು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದರು.
ದಿನಾಂಕ 28.07.2025ರಂದು ಬೆಳಗ್ಗೆ ಪಾಯಲ್ ತಾಯಿಗೆ ಅಂಗಡಿಗೆ ತಿಂಡಿಯನ್ನು ತಂದುಕೊಟ್ಟು ಮನೆಗೆ ಹಿಂತಿರುಗಿದರು. ಮಧ್ಯಾಹ್ನ 1 ಗಂಟೆಗೆ ತಾಯಿ ಮನೆಗೆ ಹಿಂತಿರುಗಿದಾಗ ಪಾಯಲ್ ಅಲ್ಲಿಲ್ಲ. ಪಕ್ಕದ ಮನೆಯವರು, ಸ್ನೇಹಿತರು ಮತ್ತು ಸಂಬಂಧಿಕರಿಗೆ ವಿಚಾರಿಸಿದರೂ ಮಾಹಿತಿ ಲಭಿಸಲಿಲ್ಲ. ತಾಯಿ ರಾಜಸ್ಥಾನದಲ್ಲಿಯೂ ವಿಚಾರಣೆ ನಡೆಸಿದರು ಆದರೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಇದರಿಂದ ಬೇಸತ್ತ ತಾಯಿ ದಿನಾಂಕ 29.07.2025 ರಂದು ಯಲಹಂಕ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದ್ದಾರೆ. ಪಾಯಲ್ ಕಾಣೆಯಾದ ಹಿನ್ನೆಲೆ ಚಿರಾಗ್ ಎಂಬ ಯುವಕನ ಮೇಲಣ ಅನುಮಾನ ಮೂಡಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾರ್ವಜನಿಕರಿಗೆ ಯುವತಿಯ ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ.

