ಸುದ್ದಿ 

ಅಕ್ರಮ ಮದ್ಯ ಮಾರಾಟ – ಬಾರ್ ಮಾಲೀಕರು ಮತ್ತು ಕೆಲಸಗಾರರ ವಿರುದ್ಧ ಕಾನೂನು ಕ್ರಮ

Taluknewsmedia.com


ಬೆಂಗಳೂರು ಜುಲೈ 31 – 2025
ಯಲಹಂಕ ಓಲ್ಡ್ ಟೌನ್ ಪ್ರದೇಶದ ಡೌನ್ ಬಜಾರ್ ರಸ್ತೆ ಬಳಿ ಇರುವ ಸಿದ್ದ ಪ್ರಾಜಿ ಬಾರ್‌ನಲ್ಲಿ ನಿಯಮ ಉಲ್ಲಂಘನೆಯ ಮೂಲಕ ಮದ್ಯ ಮಾರಾಟ ನಡೆಯುತ್ತಿದ್ದ ವಿಷಯ ಬೆಳಕಿಗೆ ಬಂದಿದೆ.

ಹಳೆಯ ಕಳವು ಪ್ರಕರಣಗಳ ತನಿಖೆಗಾಗಿ ನೇಮಕಗೊಂಡಿದ್ದಪೊಲೀಸರು ಬೆಳಿಗ್ಗೆ ಸುಮಾರು 8:30 ಗಂಟೆಗೆ ಕೋಗಿಲು ಕ್ರಾಸ್ ಕಡೆಯಿಂದ ಗ್ರಾಮ ಕಡೆಗೆ ಗಸ್ತು ವಹಿಸುತ್ತಿದ್ದ ವೇಳೆ, ಬಾರ್ ಬಾಗಿಲು ಅರ್ಧ ತೆರೆದ ಸ್ಥಿತಿಯಲ್ಲಿ ಇದ್ದು, ಮುಂಭಾಗದ ತಗಡು ಶೆಡ್‌ನಲ್ಲಿ 3-4 ಮಂದಿ ನಿಂತಿರುವುದು ಗಮನಿಸಿದ್ದಾರೆ. ಪರಿಶೀಲನೆ ವೇಳೆ, ಬಾರ್‌ಗೆ ಹೊಂದಿಕೊಂಡಿರುವ ಶೆಡ್‌ನೊಳಗೆ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಗ್ರಾಹಕರಿಗೆ ಮದ್ಯ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಬಾರ್ ಮಾಲೀಕರು ಮತ್ತು ಕೆಲಸಗಾರರು ಲೈಸನ್ಸ್ ನಿಯಮಗಳನ್ನು ಉಲ್ಲಂಘಿಸಿ ನಿಗದಿತ ಅವಧಿಗೆ ಮುಂಚೆಯೇ ಬಾರ್ ಬಾಗಿಲು ತೆರೆಯುತ್ತಿದ್ದರೆಂದು ತಿಳಿದುಬಂದಿದ್ದು, ಮದ್ಯ ಬಾಟಲಿಗಳನ್ನು ಶೆಡ್‌ನೊಳಗೆ ಇಟ್ಟು ಅಕ್ರಮ ಮಾರಾಟ ಮಾಡುತ್ತಿದ್ದ ವಿಷಯ ದೃಢಪಟ್ಟಿದೆ.

ಈ ಸಂಬಂಧ ಬೆಳಿಗ್ಗೆ 8:40ಕ್ಕೆ ಯಲಹಂಕ ಪೊಲೀಸರು ಠಾಣೆಗೆ ಹಾಜರಾಗಿ ನೀಡಿದ ದೂರು ಆಧರಿಸಿ, ಸಿದ್ದ ಪ್ರಾಜಿ ಬಾರ್‌ನ ಮಾಲೀಕರು ಮತ್ತು ಶೆಡ್‌ನಲ್ಲಿದ್ದ ಕೆಲಸಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Related posts