USDT ವಂಚನೆ: ಉದ್ಯಮಿಯಿಂದ ₹1 ಕೋಟಿ ಮೋಸ
ಬೆಂಗಳೂರು, ಆಗಸ್ಟ್ 5:2025
USDT ಕ್ರಿಪ್ಟೋ ಕರೆನ್ಸಿಯನ್ನು ಕಡಿಮೆ ದರದಲ್ಲಿ ಕೊಡಿಸುವ ನೆಪದಲ್ಲಿ PAPERBOY ONLINE PVT LTD ಕಂಪನಿಯೊಬ್ಬ ಉದ್ಯಮಿಯಿಂದ ₹1 ಕೋಟಿ ರೂಪಾಯಿ ವಂಚಿಸಿರುವ ಘಟನೆ ಯಲಹಂಕದಲ್ಲಿ ನಡೆದಿದೆ.
ವರುಣ್ ಕುಮಾರ್ ಎಂಬವರು ತಮಗೆ ₹2.2 ಕೋಟಿ ಮೌಲ್ಯದ USDT ಕರೆನ್ಸಿ ಇದೆ ಎಂದು ಹೇಳಿ, ಅದನ್ನು ₹2 ಕೋಟಿಗೆ ಕೊಡುತ್ತೇನೆಂದು ಪಿರ್ಯಾದಿದಾರರನ್ನು ನಂಬಿಸಿದ್ದಾರೆ. ಮೊದಲ ಕಂತು ರೂಪದಲ್ಲಿ ₹1 ಕೋಟಿ ಹಣವನ್ನು ಪಿರ್ಯಾದಿದಾರರು ಬ್ಯಾಂಕ್ ಮುಖಾಂತರ ವರ್ಗಾಯಿಸಿದ್ದರು.
ಆದರೆ ಹಣ ಪಡೆದ ಬಳಿಕ ವರುಣ್ ಕುಮಾರ್ ಕರೆನ್ಸಿ ನೀಡದಂತೆಯೇ ನಾಪತ್ತೆಯಾಗಿದ್ದಾರೆ. ಈ ಕುರಿತು ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

