ಟೆಲಿಗ್ರಾಂನಲ್ಲಿನ ಪಾರ್ಟ್ ಟೈಂ ಜಾಬ್ ನಂಬಿ 3.74 ಲಕ್ಷ ರೂ. ನಷ್ಟಪಟ್ಟು ವಂಚನೆಗೆ ಒಳಗಾದ ಯುವಕ!
ಬೆಂಗಳೂರು, ಆಗಸ್ಟ್ 6: 2025
ಪಾರ್ಟ್ ಟೈಂ ಕೆಲಸದ ನೆಪದಲ್ಲಿ ಹಣ ಗಳಿಸಬಹುದು ಎಂಬ ಆಶೆಯಿಂದ ಟೆಲಿಗ್ರಾಂನಲ್ಲಿ ಕಳುಹಿಸಲಾದ ಸಂದೇಶವೊಂದನ್ನು ನಂಬಿದ ಯುವಕನು ರೂ. 3.74 ಲಕ್ಷವನ್ನು ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
ರಂಚಿತ ಅವರು ನೀಡಿದ ಮಾಹಿತಿಯ ಪ್ರಕಾರ, ಜುಲೈ 31ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಅಪರಿಚಿತ ವ್ಯಕ್ತಿಯೊಬ್ಬರು “earning experts” ಎಂಬ ಗ್ರೂಪ್ನ ಲಿಂಕ್ ಕಳುಹಿಸಿ, ಯೂಟ್ಯೂಬ್ ಚಾನೆಲ್ಗಳಿಗೆ ಸಬ್ಸ್ಕ್ರೈಬ್ ಮಾಡುವುದರಿಂದ ಹಣ ಗಳಿಸಬಹುದು ಎಂದು ನಂಬಿಸಿದ್ದಾರೆ. ಆರಂಭದಲ್ಲಿ ₹1300 ಹಣವನ್ನು ಖಾತೆಗೆ ಹಾಕಿ ನಂಬಿಕೆ ಮೂಡಿಸಿದ್ದ ಆ ವ್ಯಕ್ತಿಗಳು, ನಂತರ ಹೆಚ್ಚಿನ ಆದಾಯಕ್ಕಾಗಿ ಡೆಪಾಸಿಟ್ ಮಾಡುವಂತೆ ಒತ್ತಾಯಿಸಿದ್ದಾರೆ.
ರಂಜಿತಾ ಅವರು ನಂಬಿ mdeshan6@ybl, debbarma.23@superyes, ಮತ್ತು ಹಲವಾರು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ ಮೂಲಕ ಒಟ್ಟು ₹3,74,000 ನಷ್ಟವಾಗಿದೆ. ಬಳಿಕ ಇದು ಒಂದು ಆಯೋಜಿತ ಹಣಕಾಸು ಮೋಸವಾಗಿದ್ದು ರಂಜಿತ ಅವರು ಕೊಡುಗೆಹಳ್ಳಿ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ.
ಈ ಕುರಿತು ಪೊಲೀಸರಿಂದ ತನಿಖೆ ಪ್ರಾರಂಭಗೊಂಡಿದ್ದು, ವಂಚಿತ ಹಣ ಮರಳಿ ಪಡೆಯಲು ಕ್ರಮ ಕೈಗೊಳ್ಳಲಾಗಿದೆ.

