ಮಂಚಪ್ಪನಹಳ್ಳಿಯಲ್ಲಿ 32 ವರ್ಷದ ಮಹಿಳೆ ಕಾಣೆಯಾದ ಘಟನೆ
ಬೆಂಗಳೂರು ಆಗಸ್ಟ್ 11 2025
ಮಂಚಪ್ಪನಹಳ್ಳಿ ಮೂಲದ 32 ವರ್ಷದ ಅರುಣಾ ಎಂಬ ಮಹಿಳೆ ಆಗಸ್ಟ್ 6 ರಂದು ಸಂಜೆ ಕಾಣೆಯಾಗಿರುವ ಘಟನೆ ವರದಿಯಾಗಿದೆ.
ಜ್ಯೋತಿ ಅವರ ಪ್ರಕಾರ, ಅರುಣಾ ಕಳೆದ ನಾಲ್ಕು ವರ್ಷಗಳಿಂದ ತಮ್ಮ ತಾಯಿ, ಸಹೋದರಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಅವರ ಗಂಡ ನಾಲ್ಕು ವರ್ಷಗಳ ಹಿಂದೆ ನಿಧನ ಹೊಂದಿದ್ದು, ನಂತರ ಗಾರ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ಜೀವನ ನಡೆಸುತ್ತಿದ್ದರು.
ಆಗಸ್ಟ್ 6ರಂದು ಸಂಜೆ ಸುಮಾರು 7.45ಕ್ಕೆ ಮನೆಯಲ್ಲಿದ್ದ ಅರುಣಾ, ರಾತ್ರಿ 8 ಗಂಟೆಗೆ ಕಾಣೆಯಾಗಿದ್ದಾರೆ. ಕುಟುಂಬಸ್ಥರು ಮತ್ತು ಬಂಧುಗಳು ರಾತ್ರಿ ತನಕ ಹಾಗೂ ನಂತರವೂ ಹುಡುಕಾಡಿದರೂ ಪತ್ತೆಯಾಗಲಿಲ್ಲ. ವಿಚಾರಿಸಿದರೂ ಯಾವುದೇ ಮಾಹಿತಿ ದೊರೆಯದ ಕಾರಣ ತಡವಾಗಿ ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಬಾಗಲೂರು ಪೊಲೀಸರು ಕಾಣೆಯಾದ ಮಹಿಳೆಯ ಪತ್ತೆಗೆ ಶೋಧ ಕಾರ್ಯ ಹಾಗೂ ತನಿಖೆ ಮುಂದುವರೆಸಿದ್ದಾರೆ.

