ಅತಿವೇಗ ಬೈಕ್ ಡಿಕ್ಕಿ – 78 ವರ್ಷದ ಹಿರಿಯನಿಗೆ ಗಂಭೀರ ಗಾಯ
ಬೆಂಗಳೂರು, ಆ. 12:2025
ನಗರದ ಅಂಭಾ ಭವಾನಿ ದೇವಸ್ಥಾನ ಮುಖ್ಯರಸ್ತೆ ಬಳಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ 78 ವರ್ಷದ ವೃದ್ಧ ಗಂಭೀರವಾಗಿ ಗಾಯಗೊಂಡಿದ್ದಾರೆ.
ಯಲಹಂಕ ಸಂಚಾರಿ ಪೊಲೀಸ್ ಮೂಲಗಳ ಪ್ರಕಾರ, ಬೆಳಿಗ್ಗೆ ಸುಮಾರು 7.40 ಗಂಟೆಯ ಸುಮಾರಿಗೆ ಸಿ.ಪಿ. ಶಿವನ್ (78) ಅವರು ಶಶಾಂಕ ಅಪಾರ್ಟ್ಮೆಂಟ್ ಹತ್ತಿರ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಕೆಎ-41-ಇಎಫ್-7518 ನಂಬರಿನ ಬೈಕ್ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ಪರಿಣಾಮ ಶಿವನ್ ನೆಲಕ್ಕೆ ಬಿದ್ದು ತಲೆಗೆ ಭಾರೀ ಪೆಟ್ಟು ಬಿದ್ದು ಪ್ರಜ್ಞಾಹೀನರಾಗಿದ್ದಾರೆ.
ಅಪಘಾತ ಮಾಡಿದ ಬೈಕ್ ಸವಾರನು ತಕ್ಷಣವೇ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳುವನ್ನು ಅವರ ಪುತ್ರ ವಿನೀಶ್ ಎಸ್. ನಾಯರ್ (37) ತಕ್ಷಣವೇ ಆವೇಶ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಯಲಹಂಕ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಬೈಕ್ ಸವಾರನ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

