ಜೆ.ಪಿ.ನಗರದಲ್ಲಿ ಯುವಕ ಕಾಣೆ – ಪೊಲೀಸರ ಶೋಧ ಮುಂದುವರಿಕೆ
ಬೆಂಗಳೂರು ಆಗಸ್ಟ್ 12 2025
ಬೆಂಗಳೂರು: ಜೆ.ಪಿ.ನಗರದಲ್ಲಿ 19 ವರ್ಷದ ಯುವಕ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಯಲಹಂಕ ಉಪನಗರ ಪೊಲೀಸರ ಪ್ರಕಾರ, ವೆಂಕಟೇಶ್ ಹಾಗೂ ಅವರ ಮಗ ಕಿಶೋರ್ (19)ರ ನಡುವೆ ಆಗಸ್ಟ್ 8ರಂದು ಆಂಜಿನೇಯ ದೇವಾಸಾನದ ಹತ್ತಿರ ಕುಟುಂಬ ಸಂಬಂಧಿತ ವಿಚಾರವಾಗಿ ವಾಗ್ವಾದ ನಡೆದಿದೆ. ಬಳಿಕ ಮಧ್ಯಾಹ್ನ ಸುಮಾರು 3 ಗಂಟೆಗೆ ಕಿಶೋರ್ ಮನೆಯಿಂದ ಹೊರಗೆ ಹೋಗಿ ವಾಪಸು ಬಂದಿಲ್ಲ.
ಕುಟುಂಬದವರು ಎಲ್ಲೆಡೆ ಹುಡುಕಿದರೂ ಯಾವುದೇ ಮಾಹಿತಿ ಸಿಗದ ಕಾರಣ, ವೆಂಕಟೇಶ್ ಅವರು ಯಲಹಂಕ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನ ಪತ್ತೆ ಕಾರ್ಯ ಕೈಗೊಂಡಿದ್ದು, ಯಾರಾದರೂ ಮಾಹಿತಿ ತಿಳಿದಿದ್ದರೆ ಕೂಡಲೇ ಪೊಲೀಸರಿಗೆ ತಿಳಿಸಲು ಮನವಿ ಮಾಡಿದ್ದಾರೆ.

