ವೀರಸಾಗರದಲ್ಲಿ ಗಣೇಶ ಹಬ್ಬದ ಚರ್ಚೆ ವೇಳೆ ಯುವಕನ ಮೇಲೆ ಹಲ್ಲೆ
ಬೆಂಗಳೂರು ಆಗಸ್ಟ್ 12 2025
ವೀರಸಾಗರ ಮುಖ್ಯರಸ್ತೆಯ ಹತ್ತಿರ ಗಣೇಶ ಹಬ್ಬದ ವ್ಯವಸ್ಥೆ ಕುರಿತು ಚರ್ಚಿಸುತ್ತಿದ್ದ ಯುವಕನ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ 9 ಆಗಸ್ಟ್ ರಾತ್ರಿ ನಡೆದಿದೆ.
ಯಲಹಂಕ ಉಪನಗರ ಪೊಲೀಸರ ಮಾಹಿತಿಯಂತೆ, ರಾತ್ರಿ 11:30ರ ಸುಮಾರಿಗೆ ನಾಗು ಎಂಬಾತ ತನ್ನ ಸಹೋದರ ಹಾಗೂ ರಾಜು ಎಂಬಾತನೊಂದಿಗೆ ಕಾರಿನಲ್ಲಿ ಬಂದು, ಆನಂದ ಅವರ ತಮ್ಮನನ್ನು ಹೊಡೆದಿದ್ದಾನೆ. ಮಧ್ಯ ಪ್ರವೇಶ ಮಾಡಿದ ಆನಂದ್ ಅವರಿಗೂ ಹೊಡೆದು ಬಾಯಿ ಮತ್ತು ಕಣ್ಣಿನ ಹತ್ತಿರ ಗಾಯಪಡಿಸಲಾಗಿದೆ.
ಗಾಯಗೊಂಡವರು ಮೈತ್ರಿ ಕ್ಲಿನಿಕ್ ಕಡೆ ತೆರಳುತ್ತಿದ್ದಾಗ, ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಅರುಣ ಅಪಾರ್ಟ್ಮೆಂಟ್ ಹತ್ತಿರ ನಾಗು, ರಾಜು, ಅನೀಲ್ ಮತ್ತು ಇತರರು ಚಾಕು ಹಾಗೂ ಬ್ಯಾಟ್ ಹಿಡಿದು ಮತ್ತೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದರೆಂದು ಯಲಂಕ ಸಂಚಾರಿ ಪೊಲೀಸ್ ಠಾಣೆಯ ದೂರಿನಲ್ಲಿ ಹೇಳಲಾಗಿದೆ.
ಗಾಯಗೊಂಡ ಪೀಡಿತನನ್ನು ಕುಟುಂಬಸ್ಥರು ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ತಲೆಗೆ 2-3 ಇಂಚಿನ ಹೊಲಿಗೆ ಹಾಕಲಾಗಿದೆ. ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

