ಜಮೀನು ಹಕ್ಕು ವಿವಾದ – ನಕಲಿ ದಾಖಲೆ ಸೃಷ್ಟಿ ಪ್ರಕರಣ
ಬೆಂಗಳೂರು: ಆಗಸ್ಟ್ 16 2025
ಬಿದರಹಳ್ಳಿ ಹೋಬಳಿ, ಕಣ್ಣೂರು ಗ್ರಾಮದ ಸರ್ವೇ ನಂ.167 ರ 4 ಎಕರೆ 36 ಗುಂಟೆ ಜಮೀನು ಹಕ್ಕು ಸಂಬಂಧಿ ವಿವಾದ ಪ್ರಕರಣದಲ್ಲಿ, ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡಿದ ಪ್ರಕರಣ ದಾಖಲೆಯಾಗಿದೆ. ದೂರಿನಲ್ಲಿ, ಜಮೀನಿನ ಮಾಲಕಿ ಶಾಂತಕುಮಾರಿ ಆರ್. (ಆಸ್ಟ್ರೇಲಿಯಾದಲ್ಲಿ ವಾಸ) ರವರ ಸಹಿಯನ್ನು ನಕಲಿ ಮಾಡಿ, 20-12-2017 ರಂದು ಬೋಗಸ್ GPA ಸೃಷ್ಟಿಸಿ, ಜಮೀನು ಕಬಳಿಸಲು ಪ್ರಯತ್ನಿಸಲಾಗಿದೆ ಎಂದು ಹೇಳಲಾಗಿದೆ.
ದೂರಿದಾರ ವಿನೋದ್ ಕುಮಾರ್ ಎಂ.ಎಲ್. ಅವರು, ಶಾಂತಕುಮಾರಿಯ ಪರವಾಗಿ ಜಮೀನು ನೋಡಿಕೊಳ್ಳುತ್ತಿದ್ದಾಗ, ರೇವತಿ ರಾಜ್ ಸೇರಿದಂತೆ ಕೆಲವು ಮಂದಿ ನಕಲಿ GPA ಹಾಗೂ ಸೇಲ್ ಡೀಡ್ ಸೃಷ್ಟಿಸಿ ನ್ಯಾಯಾಲಯಕ್ಕೂ ತಪ್ಪು ದಾಖಲೆ ಸಲ್ಲಿಸಿದ್ದಾರೆಂದು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ, ಮುಂಚೆ ಜಯನಗರ ಉಪನೋಂದಣಾಧಿಕಾರಿ ಹಾಗೂ ಕೊರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿಗಳ ವಿರುದ್ಧ IPC ಅಡಿಯಲ್ಲಿ ಮೋಸ, ನಕಲಿ ದಾಖಲೆ ತಯಾರಿಕೆ, ನ್ಯಾಯಾಲಯಕ್ಕೆ ಸುಳ್ಳು ಸಾಕ್ಷಿ ನೀಡಿದ ಆರೋಪದ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಬಾಗಲೂರು ಪೊಲೀಸರು ಮುಂದಾಗಿದ್ದಾರೆ.

