ಸುದ್ದಿ 

ಯಲಹಂಕದಲ್ಲಿ ಜಮೀನು ವಿವಾದ – ಬೆಳೆ ನಾಶ, ರೈತನಿಗೆ ಬೆದರಿಕೆ

Taluknewsmedia.com

ಬೆಂಗಳೂರು ಆಗಸ್ಟ್ 16 2025
ಯಲಹಂಕದಲ್ಲಿ ಜಮೀನು ವಿವಾದ ತೀವ್ರಗೊಂಡಿದ್ದು, ರೈತನ ಬೆಳೆಗಳನ್ನು ನಾಶಪಡಿಸಿ, ಜೀವ ಬೆದರಿಕೆ ಹಾಕಿದ ಪ್ರಕರಣ ಬಾಗಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ದೂರುದಾರರು 2010ರಲ್ಲಿ 2 ಎಕರೆ 39 ಗುಂಟೆ ಜಮೀನು ಖರೀದಿಸಿ ಕೃಷಿ ಮಾಡುತ್ತಿದ್ದರು. ನ್ಯಾಯಾಲಯ ತೀರ್ಪು ತಮ್ಮ ಪರವಾಗಿ ಬಂದಿದ್ದರೂ, ಜುಲೈ 31ರಂದು ಆರೋಪಿಗಳು ಜಮೀನಿಗೆ ಬಂದು ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ.

ಆಗಸ್ಟ್ 1ರ ರಾತ್ರಿ ಆರೋಪಿಗಳು JCB ಯಂತ್ರದಿಂದ ಹಲಸಿನ ಗಿಡ, ಬಟರ್‌ಫ್ರೂಟ್, ನಿಂಬೆ, ಹೊನ್ನೆ, ಮಹಾಗಣಿ, ಟೀಕ್‌ ಸೇರಿದಂತೆ ಹಲವು ಗಿಡಗಳನ್ನು ನೆಲಸಮಗೊಳಿಸಿದ್ದು, ₹5 ಲಕ್ಷ ನಷ್ಟ ಉಂಟಾಗಿದೆ.

ಬಾಗಲೂರು ಪೊಲೀಸರು ಆರೋಪಿಗಳ ವಿರುದ್ಧ ಹಲ್ಲೆ, ಪ್ರಾಣಬೆದರಿಕೆ ಮತ್ತು ಆಸ್ತಿ ಹಾನಿ ಪ್ರಕರಣ ದಾಖಲಿಸಿದ್ದಾರೆ

Related posts