ಸುದ್ದಿ 

ಊಟಿಗೆ ಪ್ರವಾಸಕ್ಕೆ ರೂಂ ಬುಕ್ಕಿಂಗ್ ನೆಪದಲ್ಲಿ ₹48,013 ವಂಚನೆ

Taluknewsmedia.com


ಬೆಂಗಳೂರು ಆಗಸ್ಟ್ 16 2025
ಬೆಂಗಳೂರು: ಏರ್‌ಬಿಎನ್‌ಬಿ ಮೂಲಕ ಊಟಿಗೆ ಪ್ರವಾಸಕ್ಕಾಗಿ ಹೋಟೆಲ್ ರೂಂ ಬುಕ್ ಮಾಡುವ ನೆಪದಲ್ಲಿ ನಗರದ ವ್ಯಕ್ತಿಯೊಬ್ಬರಿಗೆ ಆನ್‌ಲೈನ್‌ ವಂಚನೆ ನಡೆದಿದೆ.
ಅರವಿಂದ್ ಕುಮಾರ್ ಅವರು ಹಾಗೂ ಅವರ ಸ್ನೇಹಿತರು 14.08.2025 ರಂದು ಬೆಳಗ್ಗೆ 8.30ಕ್ಕೆ ಊಟಿಗೆ ಪ್ರಯಾಣಿಸಲು ಏರ್‌ಬಿಎನ್‌ಬಿ ಆಪ್ ಮೂಲಕ ಎರಡು ಬೆಡ್‌ಗಳಿರುವ ರೂಂ ಬುಕ್ ಮಾಡಲು ಪ್ರಯತ್ನಿಸಿದರು. ಆದರೆ ಬುಕಿಂಗ್ ರಸೀದಿಯಲ್ಲಿ ಒಂದೇ ಬೆಡ್ ಇರುವ ರೂಂ ತೋರಿಸಿದ್ದರಿಂದ, ಅವರು ಗೂಗಲ್‌ನಲ್ಲಿ ಹುಡುಕಿ ಹೋಟೆಲ್ ಕಸ್ಟಮರ್ ಕೇರ್ ಸಂಖ್ಯೆಗೆ ಸಂಪರ್ಕಿಸಿದರು.

ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ, “ನಿಮಗೆ ಎರಡು ಬೆಡ್‌ಗಳಿರುವ ರೂಂ ಮಾಡಿಕೊಡುತ್ತೇನೆ” ಎಂದು ಹೇಳಿ, ಗೂಗಲ್ ಪೇ ಮೂಲಕ ಹಣ ವರ್ಗಾಯಿಸುವಂತೆ ಸೂಚಿಸಿದರು. ಆರೋಪಿಯ ಸೂಚನೆಂತೆ ಪೇಮೆಂಟ್ ಪ್ರಕ್ರಿಯೆ ನಡೆಸಿದ ನಂತರ, ದೂರುದಾರರ ಖಾತೆಯಿಂದ ಒಟ್ಟು ₹48,013 ಹಣ ಡೆಬಿಟ್‌ ಆಗಿದೆ.

ವಂಚನೆಯಿಂದ ಹಣ ಕಳೆದುಕೊಂಡ ದೂರುದಾರರು ಬಾಗಲೂರು ಪೊಲೀಸರಿಗೆ ದೂರು ನೀಡಿದ್ದು, ಅಪರಿಚಿತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Related posts