ಸುದ್ದಿ 

ಬೆಂಗಳೂರು: 23 ವರ್ಷದ ಯುವತಿ ಕಾಣೆಯಾದ ಪ್ರಕರಣ

Taluknewsmedia.com

ಬೆಂಗಳೂರು
ತಿಂಡ್ಲು ವಿದ್ಯಾರಣ್ಯಪುರದಲ್ಲಿ ವಾಸವಿರುವ ಸುಮಾರು 23 ವರ್ಷದ ಯುವತಿ ಚಾಂದಿನಿ ಕಾಣೆಯಾದ ಪ್ರಕರಣ ವರದಿಯಾಗಿದೆ.

ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ ಮಹಿಳೆಯ ಪ್ರಕಾರ, ಅವರು ಯುಪಿಎಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಗಂಡ ಆಟೋ ಚಾಲಕರಾಗಿದ್ದಾರೆ. ಇವರಿಗೆ ಮೂರು ಮಂದಿ ಮಕ್ಕಳು ಇದ್ದಾರೆ.

2025ರ ಆಗಸ್ಟ್ 14ರಂದು ಸಂಜೆ ಸುಮಾರು 4.30ರ ಹೊತ್ತಿಗೆ, ಚಾಂದಿನಿ ಮನೆಯಲ್ಲಿಯೇ ಇದ್ದಳು. ನಂತರ ಸಂಜೆ 5 ಗಂಟೆಯ ವೇಳೆಗೆ ಆಕೆ ಹೊರಗೆ ಹೋದರು ಎಂದು ತಮ್ಮ ತಂಗಿ ಕೀರ್ತಿ ತಿಳಿಸಿದ್ದಾಳೆ. ಕುಟುಂಬದವರು ಹಲವಾರು ಬಾರಿ ಕರೆ ಮಾಡಿದರೂ, ಚಾಂದಿನಿ ಫೋನ್ ಸ್ವೀಕರಿಸಲಿಲ್ಲ.

ಸಂಬಂಧಿಕರು ಹಾಗೂ ಸ್ನೇಹಿತರಲ್ಲಿ ವಿಚಾರಿಸಿದರೂ ಆಕೆಯ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ರಾತ್ರಿ 10 ಗಂಟೆಯ ಸುಮಾರಿಗೆ ಚಾಂದಿನಿ ತನ್ನ ಸ್ನೇಹಿತೆ ರಾಣಿಯೊಂದಿಗೆ ಜೆಪಿ ನಗರಕ್ಕೆ ತೆರಳುತ್ತಿದ್ದೇನೆ, ನಂತರ ಮನೆಗೆ ವಾಪಸ್ ಬರುತ್ತೇನೆ ಎಂದು ತಿಳಿಸಿದ್ದರೂ, ಆಕೆ ಮನೆಗೆ ಮರಳಲಿಲ್ಲ.

ಈ ಹಿನ್ನೆಲೆಯಲ್ಲಿ, ಕುಟುಂಬದವರು ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿ ಚಾಂದಿನಿಯನ್ನು ಪತ್ತೆಹಚ್ಚಲು ಸಹಾಯ ಮಾಡುವಂತೆ ವಿನಂತಿಸಿದ್ದಾರೆ.

Related posts