ಸುದ್ದಿ 

ರಾಜಾನುಕುಂಟೆ ಪೊಲೀಸರು ಅಕ್ರಮ ಮದ್ಯಪಾನ ದಾಳಿ – ಒಬ್ಬನ ಬಂಧನ

Taluknewsmedia.com

ಬೆಂಗಳೂರು ಗ್ರಾಮಾಂತರ 18 ಆಗಸ್ಟ್ 2025
ಯಲಹಂಕ ತಾಲೂಕು ಭೈರಾಪುರ ಗ್ರಾಮದಲ್ಲಿ ರಾಜನಕುಂಟೆ ಪೊಲೀಸರು ಅಕ್ರಮ ಮದ್ಯಪಾನ ದಾಳಿ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಆಗಸ್ಟ್ 16ರಂದು ಸಂಜೆ ಎ.ಎಸ್.ಐ ಗಂಗಯ್ಯ ನೇತೃತ್ವದ ತಂಡ ಗಸ್ತಿನ ವೇಳೆ ಭೈರಾಪುರದಲ್ಲಿ ಗೋವಿಂದಪ್ಪ (70) ತಮ್ಮ ಮನೆಯಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾನೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿತು.

ಸ್ಥಳದಲ್ಲಿ 90 ಎಂ.ಎಲ್ ಒರಿಜಿನಲ್ ಚಾಯ್ಸ್ ಮದ್ಯದ 6 ಪ್ಯಾಕ್‌ಗಳು, 6 ಡಿಸ್ಪೋಜಬಲ್ ಗ್ಲಾಸ್‌ಗಳು ಹಾಗೂ 500 ಎಂ.ಎಲ್ ನೀರಿನ 6 ಬಾಟಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ಗೋವಿಂದಪ್ಪನು ಮದ್ಯದ ಪ್ಯಾಕ್ ಹಾಗೂ ತಿಂಡಿ ಸಾಮಾನುಗಳನ್ನು ಹೆಚ್ಚುವರಿ ಬೆಲೆಯಲ್ಲಿ ಮಾರಾಟ ಮಾಡಿ ಲಾಭ ಪಡೆಯುತ್ತಿದ್ದನೆಂದು ರಾಜನಕುಂಟೆ ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಗ್ಗೆ KE Act 15(A) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

Related posts