ಸುದ್ದಿ 

ಬೆಂಗಳೂರು: 17 ವರ್ಷದ ಬಾಲಕಿ ಕಾಣೆಯಾದ ಪ್ರಕರಣ

Taluknewsmedia.com

ಬೆಂಗಳೂರು 18 ಆಗಸ್ಟ್ 2025

ಹೆಬ್ಬಾಳ ಕೆಂಪಾಪುರದ ಜೈನ್ ಎಂಟೇಜ್ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯ 17 ವರ್ಷದ ಮಗಳು ಕಾಣೆಯಾದ ಘಟನೆ ಬೆಳಕಿಗೆ ಬಂದಿದೆ.

ಯಲಹಂಕ ಉಪನಗರ ಪೊಲೀಸರ ಮಾಹಿತಿಯ ಪ್ರಕಾರ, ದೂರಿನುದಾರರ ಮಗಳು ಕುಮಾರಿ ನಮ್ರತಾ (17 ವರ್ಷ), ಯಲಹಂಕದ ಶೇಷಾದ್ರಿಪುರಂ ಕಾಲೇಜಿನಲ್ಲಿ 2ನೇ ವರ್ಷದ ಕಾರ್ಮಸ್ ವ್ಯಾಸಂಗ ಮಾಡುತ್ತಿದ್ದಾಳೆ. ದಿನಾಂಕ 16 ಆಗಸ್ಟ್ 2025 ರಂದು ಬೆಳಿಗ್ಗೆ 8 ಗಂಟೆಗೆ ಕಾಲೇಜಿಗೆ ತೆರಳಿದ ಆಕೆ ಮಧ್ಯಾಹ್ನ 1.30ರ ಸುಮಾರಿಗೆ ಯಾವುದೋ ಹುಡುಗನ ಜೊತೆ ವಿಡಿಯೋ ಕಾಲ್ ಮಾಡುತ್ತಿದ್ದಳು ಎಂದು ದೂರಿನುದಾರರ ಮಗ ಅನಿರುದ್ಧ ಹೇಳಿದ್ದಾನೆ.

ಆ ನಂತರ ನಮ್ರತಾ ತನ್ನ ಸ್ನೇಹಿತರಿಗೆ ತಮಿಳುನಾಡಿಗೆ ಹೋಗುತ್ತಿದ್ದೇನೆ ಎಂದು ತಿಳಿಸಿ, ತನ್ನ ಫೋನ್ ಸ್ವಿಚ್ ಆಫ್ ಮಾಡಿ ಕಾಣೆಯಾಗಿದ್ದಾಳೆ. ಮನೆಯವರು, ಸ್ನೇಹಿತರು, ಬಂಧು-ಬಳಗ ಹಾಗೂ ಅಕ್ಕಪಕ್ಕದವರಲ್ಲಿ ವಿಚಾರಿಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ.

ಕಾಣೆಯಾದ ನಮ್ರತಾ — ಧೃಡ ಮೈಕಟ್ಟು, ಕಪ್ಪು ಮೈಬಣ್ಣ, ಕಪ್ಪು ಕೂದಲು, ದುಂಡು ಮುಖ, ಎಡಗಣಿಯ ಬಳಿಯಲ್ಲಿ ಮಚ್ಚೆ ಇದ್ದು, ಕಾಲೇಜು ಡ್ರೆಸ್ (ಪರ್ಪಲ್ ಶರ್ಟ್ ಮತ್ತು ಬ್ಲಾಕ್ ಪ್ಯಾಂಟ್) ಧರಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆಕೆ ಮರಾಠಿ, ಕನ್ನಡ, ಇಂಗ್ಲಿಷ್ ಹಾಗೂ ತೆಲುಗು ಭಾಷೆಗಳನ್ನು ಮಾತನಾಡಲು ಬಲ್ಲಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Related posts