ಸುದ್ದಿ 

ವಾಟ್ಸಪ್ ವಂಚನೆ – ಸ್ನೇಹಿತನ ಫೋಟೋ ಬಳಸಿಕೊಂಡು 42,500 ರೂ. ಮೋಸ!

Taluknewsmedia.com

ವಾಟ್ಸಪ್ ವಂಚನೆ – ಸ್ನೇಹಿತನ ಫೋಟೋ ಬಳಸಿಕೊಂಡು 42,500 ರೂ. ಮೋಸ!
ಬೆಂಗಳೂರು 20 ಆಗಸ್ಟ್ 2025
ಬೆಂಗಳೂರು ಹೆಬ್ಬಾಳದ ಕೆಂಪಾಪುರದಲ್ಲಿ ಸ್ನೇಹಿತನ ಫೋಟೋ ಬೆಳೆಸಿ ವಾಟ್ಸಪ್‌ನಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ಮಾಹಿತಿಯ ಪ್ರಕಾರ, ದೂರುದಾರರು ಫೆಡರಲ್ ಬ್ಯಾಂಕ್ ಖಾತೆ ಸಂಖ್ಯೆ 15820100064397 ಹೊಂದಿದ್ದು, ದಿನಾಂಕ 30/06/2025 ರಂದು ಅಪರಿಚಿತ ವ್ಯಕ್ತಿಯೊಬ್ಬನು ಅವರ ಸ್ನೇಹಿತನ ಫೋಟೋವನ್ನು ತನ್ನ ವಾಟ್ಸಪ್ ಡಿ.ಪಿ.ಯಾಗಿ ಇಟ್ಟುಕೊಂಡು ಮೊಬೈಲ್ ಸಂಖ್ಯೆ 9389659802ರಿಂದ ಸಂದೇಶ ಕಳುಹಿಸಿದ್ದಾನೆ.

ಆ ಸಂದೇಶದಲ್ಲಿ ತುರ್ತು ಹಣದ ಅವಶ್ಯಕತೆ ಇದೆ ಎಂದು ಹೇಳಿದ್ದರಿಂದ, ದೂರುದಾರರು ನಿಜವಾಗಿಯೂ ತಮ್ಮ ಸ್ನೇಹಿತನೇ ಎಂದು ಭಾವಿಸಿ, ಆ ವ್ಯಕ್ತಿಗೆ ಒಟ್ಟು ₹42,500 ಹಣವನ್ನು ವರ್ಗಾಯಿಸಿದ್ದಾರೆ.

ನಂತರ ವಂಚನೆ ನಡೆದಿರುವುದು ಗೊತ್ತಾಗಿ, ಅವರು ಅಮೃತಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆ ಅಪರಿಚಿತ ಆರೋಪಿಯನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವ ಕಾರ್ಯ ಆರಂಭಿಸಿದ್ದಾರೆ.

Related posts