ಸುದ್ದಿ 

ಯಲಹಂಕ: ಐಟಿ ಉದ್ಯೋಗಿ ಕಾಣೆಯಾದ ಪ್ರಕರಣ

Taluknewsmedia.com


ಯಲಹಂಕ 20 ಆಗಸ್ಟ್ 2025
ಯಲಹಂಕ ಪೊಲೀಸರು ದಾಖಲಿಸಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, 33 ವರ್ಷದ ಐಟಿ ಉದ್ಯೋಗಿ ರಾಮ್ ಮೋಹನ್ ರೆಡ್ಡಿ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಉಮಾ ಮಹೇಶ್ವರಿ ಅವರ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿರುವುದೇನೆಂದರೆ, ಅವರು ತಮ್ಮ ಗಂಡ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಸ್ವಂತ ಮನೆಯಲ್ಲಿ ವಾಸವಾಗಿದ್ದು, ಗಂಡನಾದ ರಾಮ್ ಮೋಹನ್ ರೆಡ್ಡಿ ಅವರು ಕಳೆದ 3 ತಿಂಗಳುಗಳಿಂದ ವೈಟೀಲ್‌ನ ಕ್ಯಾಪೆಮಿನಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಆದರೆ, ಆಗಸ್ಟ್ 17ರಂದು ಮಧ್ಯಾಹ್ನ 12 ಗಂಟೆಗೆ ಕೆಲಸಕ್ಕಾಗಿ ಮನೆಯಿಂದ ಹೊರಟ ಅವರು ಇದುವರೆಗೆ ಮನೆಗೆ ಹಿಂದಿರುಗದೆ ಕಾಣೆಯಾಗಿದ್ದಾರೆ. ಮೊಬೈಲ್‌ ಫೋನ್ ಕೂಡ ಸ್ವಿಚ್ ಆಫ್ ಆಗಿರುವುದರಿಂದ ಸಂಪರ್ಕ ಸಾಧ್ಯವಾಗಿಲ್ಲ. ಸಂಬಂಧಿಕರು, ಸ್ನೇಹಿತರು ಹಾಗೂ ಅಕ್ಕಪಕ್ಕದವರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗದ ಕಾರಣ ಯಲಹಂಕ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ.

ಈ ಪ್ರಕರಣವನ್ನು ಪೊಲೀಸರು ತನಿಖೆ ಕೈಗೊಂಡಿದ್ದು, ಕಾಣೆಯಾದ ರಾಮ್ ಮೋಹನ್ ರೆಡ್ಡಿ ಅವರನ್ನು ಶೀಘ್ರದಲ್ಲೇ ಪತ್ತೆಹಚ್ಚಲು ಕಾರ್ಯಾಚರಣೆ ಆರಂಭಿಸಿದ್ದಾರೆ.

Related posts